ETV Bharat / bharat

ಕೇಂದ್ರ ಗುಪ್ತಚರ ಇಲಾಖೆಯಲ್ಲಿ ನೇಮಕಾತಿ: 995 ಹುದ್ದೆಗಳಿಗೆ ಅರ್ಜಿ ಆಹ್ವಾನ

author img

By ETV Bharat Karnataka Team

Published : Nov 29, 2023, 2:49 PM IST

Intelligence Bureau Recruitment: ರಕ್ಷಣಾ ಇಲಾಖೆಯ ಗ್ರೇಡ್​ 2 ಹುದ್ದೆಗಳು ಇವಾಗಿದ್ದು, ದೇಶದೆಲ್ಲೆಡೆ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

job Notification For Intelligence Bureau 995 post

ನವದೆಹಲಿ: ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ 995 ಹುದ್ದೆಗಳಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಕ್ಷಣಾ ಇಲಾಖೆಯ ಗ್ರೇಡ್​ 2 ಹುದ್ದೆಗಳು ಇವಾಗಿದ್ದು, ದೇಶದೆಲ್ಲೆಡೆ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ನೇಮಕಾತಿ, ಅರ್ಜಿ ಸಲ್ಲಿಕೆ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: ಕೇಂದ್ರ ಗುಪ್ತಚರ ಇಲಾಖೆಯಲ್ಲಿ995 ಅಸಿಸ್ಟಂಟ್​ ಸೆಂಟ್ರಲ್​ ಇಂಟಲಿಜೆನ್ಸಿ ಆಫೀಸರ್ (ಎಸಿಐಒ) ಗ್ರೇಡ್​ 2/ ಎಕ್ಸಿಕ್ಯೂಟಿವ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಹೊಂದಿರಬೇಕು.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷಗಳನ್ನು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ವೇತನ: ಈ ಹುದ್ದೆಗೆ 44900-142400 ರೂ ಮಾನಸಿಕ ವೇತನ ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ಪ್ರಕ್ರಿಯೆ ಶುಲ್ಕ 450 ರೂ ಅನ್ನು ಎಲ್ಲ ಅಭ್ಯರ್ಥಿಗಳು ಭರಿಸಬೇಕಿದೆ. ಇನ್ನು ಪರೀಕ್ಷೆ ವೆಚ್ಚ 100 ರೂ ಆಗಿದೆ. ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸರಿಯಾಗಿ ಓದಿ ಅರ್ಥೈಸಿಕೊಂಡು ಮುಂದುವರೆಯಬೇಕು.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ ಮತ್ತು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುವುದು.

ಈ ಹುದ್ದೆಗೆ ರಾಜ್ಯದ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ ಈ ಕೇಂದ್ರದಲ್ಲಿ ಈ ಹುದ್ದೆಗೆ ಪರೀಕ್ಷೆ ನಡೆಯಲಿದೆ. ಈ ಹುದ್ದೆಗೆ ನವೆಂಬರ್​ 25ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್​ 15 ಆಗಿದೆ. ಅರ್ಜಿ ಶುಲ್ಕ ಪಾವತಿಗೆ ಡಿಸೆಂಬರ್​ 19 ಕಡೆಯ ದಿನವಾಗಿದೆ.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ mha.gov.in ಅಥವಾ nsc.gov.in ಇಲ್ಲಿಗೆ ಭೇಟಿ ನೀಡಬಹುದು.

ಇದನ್ನೂ ಓದಿ: ತುಮಕೂರು ಜಿಲ್ಲಾ ಪಂಚಾಯತ್ ನೇಮಕಾತಿ; ತಾಂತ್ರಿಕ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.