ETV Bharat / bharat

ರಾಮಗಢ ಉಪಚುನಾವಣೆ: 10 ದಿನದಲ್ಲಿ ಇಬ್ಬರು ನಾಯಕರ ಗುಂಡಿಕ್ಕಿ ಹತ್ಯೆ

author img

By

Published : Feb 26, 2023, 7:00 AM IST

ಜಾರ್ಖಂಡ್​ನ ರಾಮಗಢ ವಿಧಾನಸಭಾ ಕ್ಷೇತ್ರಕ್ಕೆ ನಾಳೆ ಮತದಾನ ನಡೆಯಲಿದೆ. ಇದಕ್ಕೂ ಮೊದಲು ಈಗಾಗಲೇ ಬೇರೆ ಪಕ್ಷಗಳ ಇಬ್ಬರು ನಾಯಕರ ಹತ್ಯೆ ನಡೆದಿದೆ.

ramgarh-bypoll
ರಾಮಗಢ ಉಪಚುನಾವಣೆ

ರಾಮಗಢ (ಜಾರ್ಖಂಡ್): ಇಲ್ಲಿನ ರಾಮಗಢ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೆತ್ತರು ಹರಿಯುತ್ತಿದೆ. 10 ದಿನದ ಅಂತರದಲ್ಲಿ ಎರಡು ಪಕ್ಷಗಳ ಮುಖಂಡರನ್ನು ಹತ್ಯೆ ಮಾಡಲಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಕಾಂಗ್ರೆಸ್​ ಮುಖಂಡನನ್ನು ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಬಂದೂಕಿನಿಂದ ಗುಂಡಿಕ್ಕಿ ಕೊಂದಿದ್ದಾರೆ. ಫೆಬ್ರವರಿ 16 ರಂದು ಎಜೆಎಸ್‌ಯು ಪಕ್ಷದ ನಾಯಕರೊಬ್ಬರನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು.

ವಿವರ: ಉಪಚುನಾವಣೆಗೆ ಎರಡೇ ದಿನ ಬಾಕಿಯಿದೆ. ಇದಕ್ಕೂ ಮೊದಲು ರಾಜಕೀಯ ದ್ವೇಷ ತಾರಕಕ್ಕೇರಿದೆ. ಅಭ್ಯರ್ಥಿಗಳ ಬೆಂಬಲಿಗರು ಮತ್ತು ಪಕ್ಷದ ಮುಖಂಡರನ್ನೇ ಟಾರ್ಗೆಟ್​ ಮಾಡಲಾಗುತ್ತಿದೆ. ರಾಜಧಾನಿ ರಾಂಚಿಯಿಂದ 50 ಕಿಮೀ ದೂರದಲ್ಲಿರುವ ಸೌಂದ ಪ್ರದೇಶದ ಭುರ್ಕುಂದ- ಪತ್ರಾಟು ರಸ್ತೆಯಲ್ಲಿರುವ ಹಳೆಯ ಪೆಟ್ರೋಲ್ ಪಂಪ್ ಬಳಿ ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಈ ಶೂಟೌಟ್​ ನಡೆದಿದೆ.

ಘಟನೆಯಲ್ಲಿ ಕಾಂಗ್ರೆಸ್​ ಮುಖಂಡ 35 ವರ್ಷದ ರಾಜ್ ಕಿಶೋರ್ ಬೌರಿ ಅಲಿಯಾಸ್ ಬಿಟ್ಕಾ ಬೌರಿ ಎಂಬಾತನನ್ನು ವಿರೋಧಿಗಳು ಹತ್ಯೆ ಮಾಡಿದ್ದಾರೆ. ಬೈಕ್‌ನಲ್ಲಿ ಬಂದ ಮೂವರು ಪೆಟ್ರೋಲ್ ಪಂಪ್ ಬಳಿ ಕುಳಿತಿದ್ದ ಬೌರಿ ಮೇಲೆ ಏಕಾಏಕಿ ಗುಂಡು ಹಾರಿಸಿದರು. ಬುಲೆಟ್​ಗಳು ದೇಹ ಹೊಕ್ಕು ತೀವ್ರ ರಕ್ತಸ್ರಾವವಾಗಿದೆ. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ತೀವ್ರ ಗಾಯಗೊಂಡಿದ್ದ ರಾಜ್ ಕಿಶೋರ್ ಬೌರಿಯನ್ನು ಭುರ್ಕುಂದದ ಸಿಸಿಎಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಹತ್ತೇ ದಿನದ ಅಂತರದಲ್ಲಿ ರಾಜಕೀಯ ದ್ವೇಷಕ್ಕೆ ಇಬ್ಬರು ಹತ್ಯೆಯಾಗಿರುವುದು ಕ್ಷೇತ್ರದಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ. ರಾಜ್ ಕಿಶೋರ್ ಬೌರಿ ಬಾರ್ಕಗಾಂವ್‌ನ ಕಾಂಗ್ರೆಸ್ ಶಾಸಕ ಅಂಬಾ ಪ್ರಸಾದ್ ಅವರ ಬೆಂಬಲಿಗ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಕಾಂಗ್ರೆಸ್​ ಮುಖಂಡನ ಕೊಲೆಯ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಹತ್ಯೆಯಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳ ಕಂಡುಹಿಡಿಯಲು ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ" ಎಂದು ಭುರ್ಕುಂದ ಪೊಲೀಸ್ ಠಾಣೆಯ ಉಸ್ತುವಾರಿ ಅಮಿತ್ ಕುಮಾರ್ ಹೇಳಿದ್ದಾರೆ.

ಇದಕ್ಕೂ ಮೊದಲು ಅಂದರೆ ಫೆಬ್ರವರಿ 16 ರಂದು ಅಪರಿಚಿತ ಬಂದೂಕುಧಾರಿಗಳು ಎಜೆಎಸ್‌ಯು ಪಕ್ಷದ ನಾಯಕರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಘಟನೆ ತೀವ್ರ ಟೀಕೆಗೆ ಗುರಿಯಾಗಿತ್ತು. ರಾಮಗಢ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಮಾರ್ಚ್ 2 ರಂದು ನಡೆಯಲಿದೆ.

ಉತ್ತರಪ್ರದೇಶದಲ್ಲಿ ಶಾಸಕನ ಹತ್ಯೆ: ಇಲ್ಲಿನ ಪ್ರಯಾಗ್​​ರಾಜ್​ನಲ್ಲಿ ಧುಮನ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಲೇಮ್ ಸರಾಯ್ ಪ್ರದೇಶದಲ್ಲಿ ಬಿಎಸ್‌ಪಿ ಶಾಸಕ ರಾಜುಪಾಲ್ ಎಂಬುವರನ್ನು ಹತ್ಯೆ ಮಾಡಲಾಗಿದೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಎಸ್​ಪಿ ನಾಯಕ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ. ರಾಜುಪಾಲ್​ ಸೇರಿ ಮೂವರು ಬಿಳಿ ವಾಹನದಿಂದ ಇಳಿಯುತ್ತಿದ್ದಾಗ ಹೊಂಚು ಹಾಕಿ ಕಾಯುತ್ತಿದ್ದ ಬಂದೂಕುಧಾರಿಗಳು ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ಬಿಎಸ್‌ಪಿ ಶಾಸಕ ರಾಜುಪಾಲ್ ಹತ್ಯೆ - ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.