ಚೆನ್ನೈ (ತಮಿಳುನಾಡು): ತಮಿಳುನಾಡಿನ ಮುಧುರೈ ನಗರವು ತನ್ನದೇ ವಿಶಿಷ್ಟಗಳ ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಅಂತಹ ವೈಶಿಷ್ಯದಲ್ಲಿ ಜಿಗರ್ಥಂಡಾ ಸಹ ಒಂದು. ಉತ್ತರ ಭಾಗದ ಮೂಲದಿಂದ ಬಂದಿರುವ ಇದು ದೇವಾಲಯಗಳ ನಗರಿಯ ಪ್ರಮುಖ ಡ್ರಿಂಕ್ ಆಗಿ ಮಾರ್ಪಟ್ಟಿದೆ. ಇದೊಂದು ಐಸ್ ಮಾದರಿಯ ತಿನಿಸು ಎನ್ನಬಹುದು. ಇಲ್ಲಿಗೆ ಬರುವ ಪ್ರವಾಸಿಗರಿಂದ ಹಿಡಿದು ಸ್ಥಳೀಯರು ಸಹ ಈ ಜಿಗರ್ಥಂಡಾ ಜ್ಯೂಸ್ ಕುಡಿಯಲು ಇಷ್ಟಪಡುತ್ತಾರೆ. ನಗರದ ಯಾವ ಮೂಲೆ ಹುಡುಕಿದರೂ ಈ ಜಿಗರ್ಥಂಡಾ ತಯಾರಾಗುವ ಅಂಗಡಿ ಕಾಣಸಿಗುತ್ತದೆ.
ಜಿಗರ್ಥಂಡಾ ಎಂಬ ಪದವು ಹಿಂದಿಯಿಂದ ಎರವಲು ಬಂದಿದೆ, ಜಿಗರ್ ಎಂದರೆ ಲಿವರ್ ಹಾಗೂ ಥಂಡಾ ಎಂದರೆ ತಣ್ಣನೆಯ ಎಂಬರ್ಥ ಕೊಡುತ್ತದೆ. ಮಧುರೈನಲ್ಲಿ ಈ ಪದವನ್ನು ಇಸ್ಲಾಮಿಕ್ ರಾಜರು ಪರಿಚಯಿಸಿದರು ಎಂದು ಹೇಳಲಾಗುತ್ತದೆ. ದೆಹಲಿಯ ರಾಜ ಅಲಾವುದ್ದೀನ್ ಖಿಲ್ಜಿಯ ಕಮಾಂಡರ್ ಮಲಿಕ್ ಕಪೂರ್ ಕ್ರಿ.ಶ 1,311 ರಲ್ಲಿ ಮೊದಲು ತಮಿಳುನಾಡಿನ ಮೇಲೆ ಆಕ್ರಮಣ ಮಾಡಿದ. ಅವನ ಹಿಂದೆ ಮೊಹಮ್ಮದ್ ಬಿನ್ ತುಘಲಕ್ ಕ್ರಿ.ಶ 1318ರಲ್ಲಿ ಮಧುರೈ ಮೇಲೆ ಆಕ್ರಮಣ ಮಾಡಿ ತನ್ನ ಪ್ರತಿನಿಧಿಯನ್ನು ಇಲ್ಲಿ ಇರಿಸಿದ. ಆತ ಕ್ರಿ.ಶ 1335ರಲ್ಲಿ ತನ್ನನ್ನು ಮಧುರೈನ ಸುಲ್ತಾನ್ ಎಂದು ಘೋಷಿಸಿಕೊಂಡನು. ಈ ಸುಲ್ತಾನ್ ರಾಜರ ಮೂಲಕ, ಕ್ಲಾಸಿಕ್- ಜಿಗರ್ಥಂಡಾ ನಗರದಲ್ಲಿ ಜೀವ ತಳೆಯಿತು ಎನ್ನಲಾಗುತ್ತದೆ.
ಶಕಗಳು ಉರುಳಿದಂತೆ ಸುಲ್ತಾನರ ಸಾಮ್ರಾಜ್ಯ ಪತನವಾಯಿತು. ಆದರೆ ಜಿಗರ್ಥಂಡಾದ ಬೇಡಿಕೆ ಮಾತ್ರ ಕುಗ್ಗಲೇ ಇಲ್ಲ. ಜಿಗರ್ಥಂಡಾ ತಯಾರಿಕೆಗೆಂದೇ ಆಸ್ಥಾನಗಳಲ್ಲಿ ವಿಶೇಷ ಬಾಣಸಿಗರ ನೇಮಿಸಲಾಯಿತು. ದಪ್ಪ ಹಾಲಿನ ಕೆನೆ ಹಾಗೂ ಬಾದಾಮಿ ಬಳಸಿ ಈ ಪಾನೀಯ ತಯಾರಾಗುತ್ತಿತ್ತು. ಬಳಿಕ ಈಸ್ಟ್ ಇಂಡಿಯಾ ಕಂಪನಿ ಹಾಗೂ ಅಮೆರಿಕನ್ ಐಸ್ ಟ್ರೇಡ್ ಆಗಮನದಿಂದಾಗಿ ಈ ಪಾನೀಯಗಳು ತಣ್ಣಗಿನ ರೂಪ ಪಡೆದವು. ಆದರೆ, ಆಗ ಅದು ರಾಜಸ್ಥಾನದಲ್ಲಿ ಮಾತ್ರ ಬಳಕೆಯಲ್ಲಿತ್ತು. ಈಗ ಮಧುರೈನ ಬೀದಿ ಬೀದಿಯಲ್ಲೂ ಫೇಮಸ್ ಆಗಿದೆ.
ಜಿಗರ್ಥಂಡಾ ಕೇವಲ ತಂಪು ಪಾನೀಯವಲ್ಲ ಬದಲಿಗೆ ಒಂದು ಪೌಷ್ಠಿಕಾಂಶಯುಕ್ತ ಡ್ರಿಂಕ್ ಆಗಿದೆ. ಹಾಲಿನ ಕೆನೆ, ಬಾದಾಮಿ, ಸಕ್ಕರೆ ಪಾಕ ಮತ್ತು ಸರಿಯಾದ ಪ್ರಮಾಣದಲ್ಲಿ ಐಸ್ಕ್ರೀಮ್ ಬೆರೆಸುವುದರಿಂದ ರಾಯಲ್ ಪಾನೀಯವಾಗುತ್ತದೆ. ಈ ಪಾನೀಯ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ, ಅಲ್ಲದೇ ಪೌಷ್ಠಿಕಾಂಶ ಹೆಚ್ಚಿಸುತ್ತದೆ.
ಪರಿಶುದ್ಧ ಹಾಲು ಬಾದಾಮಿಯಿಂದ ಮಾಡಲಾದ ಜಿಗರ್ಥಂಡಾ ಗಾಜಿನ ಲೋಟದಲ್ಲಿ ಸವಿಯಲು ನೀಡುತ್ತಾರೆ. ಒಂದೊಂದೇ ಚಮಚ ಸವಿಯುತ್ತಾ ಹೋದಂತೆ ಐಸ್ಕ್ರೀಮ್ ಕರಗಲು ಆರಂಭವಾಗಿ ಸಿಹಿ ಹೆಚ್ಚಾಗುತ್ತದೆ. ಈ ಪಾನೀಯವಾಗ ತಮಿಳುನಾಡಿನ ಹೊಸ ಗುರುತಾಗಿ ಮಾರ್ಪಟ್ಟಿದೆ.