ರಾಂಚಿ (ಜಾರ್ಖಂಡ್): ಒಂದು ಕಡೆ ಇಡೀ ದೇಶ ಸಾಂಪ್ರದಾಯಿಕ ಸಂಭ್ರಮದಿಂದ ದುರ್ಗಾಪೂಜೆ ಹಬ್ಬದ ಆಚರಣೆಯಲ್ಲಿ ಮುಳುಗಿದ್ದರೆ, ಮತ್ತೊಂದು ಕಡೆ ಇದು ಜಾರ್ಖಂಡ್‌ನ ಬುಡಕಟ್ಟು ಸಮುದಾಯವೊಂದಕ್ಕೆ ಇದು ಶೋಕದ ಸಮಯವಾಗಿದೆ. ರಾಕ್ಷಸ ಮಹಿಷಾಸುರನ ವಂಶಕ್ಕೂ ತಮಗೂ ಸಂಬಂಧವಿದೆ ಎಂದು ನಂಬುವ ಈ ಬುಡಕಟ್ಟು ಸಮುದಾಯಕ್ಕೆ ಇದು ಶೋಕದ ಸಮಯವಾಗಿರುವುದು ಸತ್ಯ. ಕೆಲವು ಜಾರ್ಖಂಡ್ ಬುಡಕಟ್ಟು ಸಮುದಾಯದವರು ಮಹಿಷಾಸುರ ಕುಲಕ್ಕೆ ನಿಷ್ಠೆಯನ್ನು ಹೊಂದಿದ್ದಾರೆ ಮತ್ತು ಅವರು ಅವನನ್ನು ತಮ್ಮ ದೇವತೆಯಾಗಿ ಪರಿಗಣಿಸುತ್ತಾರೆ.
ಅವರ ಪಾಲಿಗೆ ಮಹಿಷಾಸುರನು ನಿಜವಾದ ರಾಜನಾಗಿದ್ದನು. ಆತ ಭೂಮಿಯನ್ನು ಆಳಿದನು ಮತ್ತು ದುರ್ಗಾದೇವಿಯಿಂದ ಕೊಲ್ಲಲ್ಪಟ್ಟನು. ಮಹಿಷಾಸುರ ವಂಶಕ್ಕೆ ಸೇರಿದ ಬುಡಕಟ್ಟು ಸಮುದಾಯದವರು ಅವರನ್ನು 'ಹುದುದ್ ದುರ್ಗ' ಎಂದು ಪೂಜಿಸುತ್ತಾರೆ. 10 ದಿನಗಳ ನವರಾತ್ರಿ ಉತ್ಸವದಲ್ಲಿ, ಅವರು ಮಹಿಷಾಸುರನ ವಧೆಗೆ ಶೋಕಿಸುತ್ತಾರೆ. ಜಾರ್ಖಂಡ್‌ನ ಈ ಬುಡಕಟ್ಟು ಸಮುದಾಯದ ಜನರು ನವರಾತ್ರಿಯ ಸಮಯದಲ್ಲಿ ಮಂಗಳಕರ ಆಚರಣೆಗಳನ್ನು ಮಾಡುವುದಿಲ್ಲ ಮತ್ತು ತಮ್ಮ ಮನೆಗಳಿಂದ ಹೊರಗೆ ಹೋಗುವುದಿಲ್ಲ.
ಜಾರ್ಖಂಡ್‌ನ ಗುಮ್ಲಾ, ಲೋಹರ್ಡಗಾ, ಪಲಾಮು ಮತ್ತು ಲಾತೇಹರ್ ಜಿಲ್ಲೆಗಳಲ್ಲದೆ, ಪುರುಲಿಯಾ, ಮಿಡ್ನಾಪುರ ಮತ್ತು ಪಶ್ಚಿಮ ಬಂಗಾಳದ ಕೆಲವು ಇತರ ಜಿಲ್ಲೆಗಳಲ್ಲಿನ ಗಣನೀಯ ಜನಸಂಖ್ಯೆಯ ಸಮುದಾಯ ಅಸುರ (ರಾಕ್ಷಸ) ಕುಲದೊಂದಿಗೆ ಸಂಬಂಧವನ್ನು ಹೊಂದಿದೆ. ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಕೆಂಡಶೋಲ್ ಗ್ರಾಮ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ವಾಸಿಸುವ ಜನರು ರಾಕ್ಷಸ ಮಹಿಷಾಸುರನ ವಿಗ್ರಹವನ್ನು 'ಹುದುದ್ ದುರ್ಗಾ' ರೂಪದಲ್ಲಿ ಪೂಜಿಸುತ್ತಾರೆ. ಮತ್ತೊಂದೆಡೆ, ಜಾರ್ಖಂಡ್‌ನಿಂದ ಬಂದ ಬುಡಕಟ್ಟು ಸಮುದಾಯವು ದುರ್ಗಾ ಪೂಜೆಯ ಸಮಯದಲ್ಲಿ ಮಹಿಷಾಸುರನನ್ನು ಪೂಜಿಸುವುದಿಲ್ಲ. ಆದರೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜೇಡಿಮಣ್ಣು ಅಥವಾ ಮಣ್ಣಿನಿಂದ ಸಣ್ಣ ಗುಡ್ಡವನ್ನು ಮಾಡಿ ಮಹಿಷಾಸುರ ಸೇರಿದಂತೆ ತಮ್ಮ ಪೂರ್ವಜರನ್ನು ನೆನಪಿಸಿಕೊಳ್ಳುತ್ತಾರೆ.
ಇದನ್ನೂ ಓದಿ: ರಾಷ್ಟ್ರಪತಿಗೆ ಮೈಸೂರು ರೇಷ್ಮೆ ಸೀರೆ ಗಿಫ್ಟ್.. ಅದೇ ಸೀರೆ ಧರಿಸಿ ದಸರಾ ಉದ್ಘಾಟಿಸಿದ ಮುರ್ಮು