ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಅಕಾಡೆಮಿ (ಎನ್‌ಟಿಎ) ಪ್ರಕಾರ ಇಂದು ಪ್ರಕಟವಾದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಜೆಇಇ-ಮೇನ್‌ನಲ್ಲಿ ಹದಿನಾಲ್ಕು ಅಭ್ಯರ್ಥಿಗಳು ಪೂರ್ಣ ಅಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಜೆಇಇ-ಮೇನ್ 2022 ರ ಮೊದಲ ಆವೃತ್ತಿಯಲ್ಲಿ ತೆಲಂಗಾಣ (4), ನಂತರ ಆಂಧ್ರಪ್ರದೇಶ (3) ದವರೇ ಮೊದಲಿಗರಾಗಿದ್ದಾರೆ. ತೆಲಂಗಾಣ ಮತ್ತು ಆಂಧ್ರದ ಟಾಪ್ ಸ್ಕೋರರ್‌ಗಳು ಎಂದರೆ ಯಶವಂತ್ ವಿವಿಎಸ್, ರೂಪೇಶ್ ಬಿಯಾನಿ, ಅನಿಕೇತ್ ಚಟ್ಟೋಪಾಧ್ಯಾಯ ಮತ್ತು ಧೀರಜ್ ಕುರುಕುಂದ, ಕೊಯಯ್ಯನ ಸುಹಾಸ್, ಪೆನಿಕಲ್ಪತಿ ರವಿ ಕಿಶೋರ್ ಆಂಧ್ರಪ್ರದೇಶದ ಪೋಲಿಸೆಟ್ಟಿ ಕಾರ್ತಿಕೇಯ ಇನ್ನುಳಿದಂತೆ ಸಾರ್ಥಕ್ ಮಹೇಶ್ವರಿ (ಹರಿಯಾಣ), ಕುಶಾಗ್ರ ಶ್ರೀವಾಸ್ತವ (ಜಾರ್ಖಂಡ್), ಮೃಣಾಲ್ ಗಾರ್ಗ್ (ಪಂಜಾಬ್), ಸ್ನೇಹಾ ಪರೀಕ್ (ಅಸ್ಸಾಂ), ನವ್ಯಾ (ರಾಜಸ್ಥಾನ), ಬೋಯಾ ಹರ್ಸೆನ್ ಸಾತ್ವಿಕ್ (ಕರ್ನಾಟಕ) ಮತ್ತು ಸೌಮಿತ್ರ ಗಾರ್ಗ್ (ಉತ್ತರ ಪ್ರದೇಶ) 100 ಅಂಕ ಗಳಿಸಿದ ಅಭ್ಯರ್ಥಿಗಳು.
8.7 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು ಇದರಲ್ಲಿ 7.69 ಲಕ್ಷ ಮಂದಿ ಹಾಜರಾಗಿದ್ದರು. ಭಾರತದ ಹೊರಗಿನ ನಗರಗಳಲ್ಲೂ ಈ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 550ಕ್ಕೂ ಹೆಚ್ಚು ವೀಕ್ಷಕರು, 424 ನಗರ ಸಂಯೋಜಕರು, 18 ಪ್ರಾದೇಶಿಕ ಸಂಯೋಜಕರು, 369 ಉಪ ಮತ್ತು ಸ್ವತಂತ್ರ ವೀಕ್ಷಕರು, ಇಬ್ಬರು ರಾಷ್ಟ್ರೀಯ ಸಂಯೋಜಕರನ್ನು ಪರೀಕ್ಷಾ ಕೇಂದ್ರಗಳಲ್ಲಿ ಸುಗಮ ಮತ್ತು ನ್ಯಾಯಯುತವಾಗಿ ನಡೆಸುವ ಮೇಲ್ವಿಚಾರಣೆಗೆ ನಿಯೋಜಿಸಲಾಗಿತ್ತು.
ಪರೀಕ್ಷೆಯನ್ನು 13 ಭಾಷೆಗಳಲ್ಲಿ ನಡೆಸಲಾಗಿದ್ದು (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು). ಜೆಇಇ-ಮೇನ್‌ನ ಎರಡನೇ ಅಧಿವೇಶನವನ್ನು ಜುಲೈ 21 ರಿಂದ 30 ರವರೆಗೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಮಳೆಗಾಲ ಬಂದ್ರೆ 'ಮನೆ ಖಾಲಿ ಮಾಡಿ' ಎಂಬ ನೋಟಿಸ್.. ಮನವಿಗಿಲ್ಲ ಸ್ಪಂದನೆ, ತಪ್ಪದ ನರಕಯಾತನೆ