ರುದ್ರಪ್ರಯಾಗ (ಉತ್ತರಾಖಂಡ): ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಇಂದು ರುದ್ರಪ್ರಯಾಗದ ತ್ರಿಯುಗಿನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.
ತ್ರಿಯುಗಿನಾರಾಯಣ ದೇವಸ್ಥಾನಕ್ಕೆ ಬರುವ ಮೊದಲು ಜಾನ್ವಿ ಮತ್ತು ಸಾರಾ ಕೇದಾರನಾಥಕ್ಕೆ ಭೇಟಿ ನೀಡಿ ಶಿವನ ಆಶೀರ್ವಾದವನ್ನು ಪಡೆದರು. ಜಾನ್ವಿ ಮತ್ತು ಸಾರಾ ಇನ್ನೂ ಕೂಡ ಒಟ್ಟಿಗೆ ತಮ್ಮ ತೀರ್ಥಯಾತ್ರೆಯ ಫೋಟೋಗಳನ್ನು ಹಂಚಿಕೊಳ್ಳದಿದ್ದರೂ ಸಹ ಕೇದಾರನಾಥಕ್ಕೆ ಭೇಟಿ ನೀಡಿರುವ ಅವರ ಚಿತ್ರಗಳು ಈಗಾಗಲೇ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿವೆ.
ಕೇದಾರನಾಥಕ್ಕೆ ಹೊರಡುವ ಮೊದಲು ಜಾನ್ವಿ ಮತ್ತು ಸಾರಾ ರಣವೀರ್ ಸಿಂಗ್ ನಡೆಸಿಕೊಟ್ಟ ಕ್ವಿಜ್ ಶೋ ದಿ ಬಿಗ್ ಪಿಕ್ಚರ್‌ನಲ್ಲಿ ಜಂಟಿಯಾಗಿ ಕಾಣಿಸಿಕೊಂಡಿದ್ದರು.
ಜಾನ್ವಿ ತಮ್ಮ ಚಿತ್ರ ಗುಡ್ ಲಕ್ ಜೆರ್ರಿ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅದೇ ರೀತಿ ಸಾರಾ ಆನಂದ್ ಎಲ್ ರೈ ಅವರ ಅತ್ರಾಂಗಿ ರೇ ಅನ್ನು ಎದುರು ನೋಡುತ್ತಿದ್ದಾರೆ.