ETV Bharat / bharat

ಮೆಕ್ಸಿಕೋ ನಾಯಕರುಗಳನ್ನು ಭೇಟಿಯಾದ ವಿದೇಶಾಂಗ ಸಚಿವ ಜೈಶಂಕರ್ - Jaishankar tweet

ವಿದೇಶಾಂಗ ಸಚಿವ ಜೈಶಂಕರ್, ಸೋಮವಾರ ಮೆಕ್ಸಿಕೋದ ನಾಯಕರುಗಳನ್ನು ಭೇಟಿಯಾಗಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ. ಭೇಟಿ ಬಹಳ ಮಹತ್ವದ ವಿಚಾರಗಳನ್ನು ಹಂಚಿಕೊಳ್ಳಲು ನೆರವಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

Jaishankar discusses bilateral ties with Mexican leaders
ಮೆಕ್ಸಿಕೋ ನಾಯಕರುಗಳನ್ನು ಭೇಟಿಯಾದ ವಿದೆಶಾಂಗ ಸಚಿವ ಜೈಶಂಕರ್
author img

By

Published : Sep 28, 2021, 9:15 AM IST

Updated : Sep 28, 2021, 9:31 AM IST

ನವದೆಹಲಿ: ಮೂರು ದಿನಗಳ ಮೆಕ್ಸಿಕೋ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಜೈಶಂಕರ್ ಅವರು ಸೋಮವಾರ ಮೆಕ್ಸಿಕೋದ ಬಿಯಾಟ್ರಿಝ್ ಜಿ ಮುಲ್ಲರ್, ವಿದೇಶಾಂಗ ಸಚಿವ ಮಾರ್ಸೆಲೊ ಇಬ್ರಾಡ್ ಸಿ ಮತ್ತು ರಕ್ಷಣಾ ಸಚಿವ ಲೂಯಿಸ್ ಸಿ ಸಂಡೋವಲ್​ರನ್ನು ಭೇಟಿಯಾಗಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಮೆಕ್ಸಿಕೋ ಸ್ವಾತಂತ್ರ್ಯ ಪಡೆದು ಇನ್ನೂರು ವರ್ಷ ಅದ ಹಿನ್ನೆಲೆ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಬಿಯಾಟ್ರಿಝ್ ಜಿ ಮುಲ್ಲರ್ ಸೇರಿದಂತೆ ಉಳಿದ ಪ್ರಮುಖ ಸಚಿವರನ್ನು ಭೇಟಿಯಾಗಿರುವುದು ಸಂತೋಷವಾಗಿದೆ ಎಂದು ಜೈಶಂಕರ್​​ ಟ್ವೀಟ್​ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮೆಕ್ಸಿಕೋ ಅಧ್ಯಕ್ಷ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅನ್ನು ಸಹ ಭೇಟಿಯಾಗಿದ್ದಾರೆ. ಎರಡು ಖಂಡಗಳ, ಎರಡು ನಾಗರಿಕತೆಗಳ ವಿಷಯಗಳನ್ನು ಹಂಚಿಕೊಳ್ಳಲು ಈ ಭೇಟಿ ನೆರವಾಗಿದೆ. ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರ ಭೇಟಿ ಸಂತೋಷ ತಂದಿದೆ ಎಂದು ಮತ್ತೊಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಜೈಶಂಕರ್ ಅವರು ಮೆಕ್ಸಿಕೋದಲ್ಲಿನ ಪ್ರಮುಖ ಸಿಇಒಗಳು ಮತ್ತು ವ್ಯಾಪಾರ ಸಮುದಾಯದೊಂದಿಗೆ ಸಂವಾದ ನಡೆಸಲು ನಿರ್ಧರಿಸಿದ್ದಾರೆ. ಬದಲಾಗುತ್ತಿರುವ ವಿಶ್ವ ಮತ್ತು ವಿಶ್ವವು ಎದುರಿಸುತ್ತಿರುವ ಭದ್ರತಾ ಸವಾಲುಗಳ ಹಿನ್ನೆಲೆ, ಈ ಸಭೆಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ.

ಇದನ್ನೂ ಓದಿ: ಚೀನಾ ಕುತಂತ್ರ: ಗಡಿ ಮೇಲೆ ಅಧಿಪತ್ಯಕ್ಕೆ ಕ್ಸಿಯೋಕಾಂಗ್ ಗ್ರಾಮ ಯೋಜನೆ!

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರಸ್ತುತ ವಿವಿಧ ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ಮುಂದುವರೆಸಿದ್ದಾರೆ.

Last Updated : Sep 28, 2021, 9:31 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.