ETV Bharat / bharat

ರಾಜಸ್ಥಾನ ತ್ರಿವಳಿ ಹತ್ಯೆ ಕೇಸ್​: ಉತ್ತರಪ್ರದೇಶದಲ್ಲಿ ಅಡಗಿದ್ದ ಹಂತಕನನ್ನು ಬಂಧಿಸಿದ ಪೊಲೀಸರು - ತ್ರಿವಳಿ ಕೊಲೆ ಪ್ರಕರಣ

ರಾಜಸ್ಥಾನ ತ್ರಿವಳಿ ಹತ್ಯೆ ಕೇಸ್​ನಲ್ಲಿ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಆರೋಪಿಯನ್ನ ಉತ್ತರಪ್ರದೇಶದಲ್ಲಿ ಬಂಧಿಸಲಾಗಿದೆ.

ರಾಜಸ್ಥಾನ ತ್ರಿವಳಿ ಹತ್ಯೆ ಕೇಸ್
ರಾಜಸ್ಥಾನ ತ್ರಿವಳಿ ಹತ್ಯೆ ಕೇಸ್
author img

By ETV Bharat Karnataka Team

Published : Dec 2, 2023, 4:15 PM IST

ಜೈಪುರ (ರಾಜಸ್ಥಾನ) : ಭಾರಿ ಸಂಚಲನ ಸೃಷ್ಟಿಸಿದ್ದ ರಾಜಸ್ಥಾನದ ತ್ರಿವಳಿ ಕೊಲೆ ಪ್ರಕರಣವನ್ನು ಪೊಲೀಸರು ನಾಲ್ಕೇ ದಿನದಲ್ಲಿ ಭೇದಿಸಿದ್ದಾರೆ. ಮಹಿಳೆ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದು ಉತ್ತರಪ್ರದೇಶದಲ್ಲಿ ಅಡಗಿದ್ದ ಹಂತಕನನ್ನು ಪೊಲೀಸ್​ ತಂಡಗಳು ಶುಕ್ರವಾರ ರಾತ್ರಿ ಪತ್ತೆ ಮಾಡಿವೆ. ಸದ್ಯ ಕೊಲೆಗಾರ ಆರೋಪಿ ಶಿವ ಪ್ರತಾಪ್​ನನ್ನು ಜೈಪುರಕ್ಕೆ ಕರೆದೊಯ್ಯಲಾಗಿದೆ.

ಪ್ರಕರಣದ ಹಿನ್ನೆಲೆ: ರಾಜಧಾನಿ ಜೈಪುರದ ಮಾಳವೀಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನವೆಂಬರ್​ 29 ರಂದು ಈ ಪ್ರಕರಣ ನಡೆದಿತ್ತು. ಆರೋಪಿ ಶಿವ ಪ್ರತಾಪ್​ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿಬಂದು ಯಾವುದೋ ಕಾರಣಕ್ಕಾಗಿ ಮಹಿಳೆ ಸುಮನ್​ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಬಳಿಕ ಹೆಣಗಳ ಮೇಲೆ ಗುಂಡಿನ ದಾಳಿ ಮಾಡಿ ಕ್ರೌರ್ಯ ಮೆರೆದಿದ್ದ. ಬಳಿಕ ಎರಡನೇ ಮಹಡಿಯಿಂದ ಜಿಗಿದು ತಪ್ಪಿಸಿಕೊಂಡು ಪರಾರಿಯಾಗಿದ್ದ.

ಗುಂಡಿನ ಸದ್ದು ಕೇಳಿ ನೆರೆಹೊರೆಯವರು ಮನೆಗೆ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಮೂವರು ಬಿದ್ದಿರುವುದು ಕಂಡು ಬಂದಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಘಟನೆಯ ವೇಳೆ ಮಹಿಳೆಯ ಪತಿ ಮನೆಯುಲ್ಲಿ ಇರಲಿಲ್ಲ. ಇದನ್ನೇ ಕಾದಿದ್ದ ಹಂತಕ ತನ್ನ ಪೈಶಾಚಿಕ ಕೃತ್ಯ ಮೆರೆದಿದ್ದ.

ಸುಳಿವು ನೀಡಿದ ಚಾಕು: ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಂತಕರ ಬಂಧನಕ್ಕೆ 10 ತಂಡಗಳನ್ನು ರಚಿಸಿಕೊಂಡಿದ್ದರು. ಸುತ್ತಲಿನ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ, ಅಂಗಡಿಯೊಂದರಲ್ಲಿ ಆರೋಪಿ ಹರಿತವಾದ ಚಾಕನ್ನು ಖರೀದಿ ಮಾಡುತ್ತಿರುವುದು ಕಂಡು ಬಂದಿತ್ತು. ಮಾಂಸ ಕತ್ತರಿಸಲು ಚೂಪಾದ ಚಾಕು ಬೇಕು ಎಂದು ಅಂಗಡಿಯವನಿಗೆ ಹೇಳಿದ್ದಾಗಿ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರಿಂದ ಕೊಲೆಗೆ ಅಗತ್ಯ ತಯಾರಿ ನಡೆಸಿ ಆತ ಸಮಯಕ್ಕಾಗಿ ಕಾದು ಕುಳಿತಿದ್ದು ತಿಳಿದು ಬಂದಿತ್ತು.

ಬಳಿಕ ಆರೋಪಿಯ ಚಲನವಲನಗಳನ್ನು ಪತಿಶೀಲಿಸಿದಾಗ ಆತ ಉತ್ತರಪ್ರದೇಶದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದರಂತೆ ತಂಡಗಳು ದಾಳಿ ನಡೆಸಿ ಶುಕ್ರವಾರ ರಾತ್ರಿ ಆತನನ್ನು ಬಲೆಗೆ ಬೀಳಿಸಿವೆ. ಬಂಧಿತ ಆರೋಪಿಯನ್ನು ಜೈಪುರಕ್ಕೆ ಕರೆತರಲಾಗಿದೆ. ಮಾಳವೀಯ ನಗರ ಠಾಣೆ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ರಾಜಸ್ಥಾನದಲ್ಲಿ ನಡೆದಿದ್ದ ಹೃದಯವಿದ್ರಾವಕ ತ್ರಿವಳಿ ಕೊಲೆ ಆರೋಪಿಯನ್ನು ಬಂಧಿಸಲಾಗಿದೆ. ಇದರ ಹಿಂದಿನ ಕಾರಣವನ್ನು ಪತ್ತೆ ಮಾಡಲು ವಿಚಾರಣೆ ನಡೆಸಲಾಗುತ್ತಿದೆ. ಉತ್ತರಪ್ರದೇಶದಲ್ಲಿ ಆತ ಅಡಗಿದ್ದನ್ನು ನಮ್ಮ ತಂಡಗಳು ಶೋಧಿಸಿದ್ದವು. ನಾಲ್ಕು ದಿನದಲ್ಲಿ ಹಂತಕ ಆರೋಪಿಯನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸ್ ಕಮಿಷನರ್ ಕೈಲಾಶ್ ಬಿಷ್ಣೋಯ್ ತಿಳಿಸಿದರು.

ಇದನ್ನೂ ಓದಿ: ಬಾಲ್ಯದಲ್ಲೇ ಪ್ರೀತಿ, ಮದುವೆ, ಮಗು, ಶಿಕ್ಷೆ.. 20ನೇ ವಯಸ್ಸಿನ ನರ್ಸ್​ ಬದುಕಿಗೆ ಕೊಳ್ಳಿ ಇಟ್ಟ ಯುವಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.