ETV Bharat / bharat

ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ: ಐಟಿಬಿಪಿ ಅಧಿಕಾರಿ, ಎಎಸ್‌ಐ ಹುತಾತ್ಮ - ITBP Assistant Commandant

ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಐಟಿಬಿಪಿ ಕ್ಯಾಂಪ್​ ಮೇಲೆ ನಕ್ಸಲರು ನಡೆಸಿದ ದಾಳಿಯಲ್ಲಿ ಸಹಾಯಕ ಕಮಾಂಡೆಂಟ್ ಹಾಗೂ ಸಹಾಯಕ ಸಬ್​​ ಇನ್ಸ್​ಪೆಕ್ಟರ್ ಹುತಾತ್ಮರಾಗಿದ್ದಾರೆ.

ITBP commandant, ASI killed by naxals in Chattisgarh
ಐಟಿಬಿಪಿ ಅಧಿಕಾರಿ, ಎಎಸ್‌ಐ ಹುತಾತ್ಮ
author img

By

Published : Aug 20, 2021, 5:16 PM IST

ನಾರಾಯಣಪುರ (ಛತ್ತೀಸ್‌ಗಢ): ಇಂಡೋ ಟಿಬೆಟಿಯನ್ ಬಾರ್ಡರ್​ ಪೊಲೀಸ್ (ಐಟಿಬಿಪಿ) ಕ್ಯಾಂಪ್​ ಮೇಲೆ ನಕ್ಸಲರು ನಡೆಸಿದ ದಾಳಿಯಲ್ಲಿ ಓರ್ವ ಸೇನಾಧಿಕಾರಿ ಮತ್ತು ಒಬ್ಬ ಪೊಲೀಸ್ ಹುತಾತ್ಮರಾಗಿದ್ದಾರೆ. ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ 12.10ರ ಸುಮಾರಿಗೆ ಘಟನೆ ಸಂಭವಿಸಿದೆ.

ಐಟಿಬಿಪಿಯ 45ನೇ ಬೆಟಾಲಿಯನ್​​ನ ಕ್ಯಾಂಪ್​​ ಗುರಿಯಾಗಿಸಿಕೊಂಡು ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಐಟಿಬಿಪಿಯ ಸಹಾಯಕ ಕಮಾಂಡೆಂಟ್ ಸುಧಾಕರ್ ಶಿಂಧೆ ಹಾಗೂ ಸಹಾಯಕ ಸಬ್​​ ಇನ್ಸ್​ಪೆಕ್ಟರ್​ (ಎಎಸ್‌ಐ) ಗುರುಮುಖ್ ಸಿಂಗ್ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: ತಾಜಿಯಾ ಹೊರ ತೆಗೆಯುವ ವೇಳೆ ಗಲಾಟೆ.. ಪೊಲೀಸರ ಮೇಲೆ ಕಲ್ಲುತೂರಾಟ.. ಸ್ಥಳದಲ್ಲಿ ಪ್ರಕ್ಷುಬ್ಧ ಸ್ಥಿತಿ..

ದಾಳಿ ನಡೆಸಿದ ನಕ್ಸಲರು ಎಕೆ 47 ಗನ್​, ಬುಲೆಟ್​ ಪ್ರೂಫ್​ ಜಾಕೆಟ್​ಗಳು ಸೇರಿದಂತೆ ಐಟಿಬಿಪಿ ಸಿಬ್ಬಂದಿ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ಪರಾರಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.