ETV Bharat / bharat

ವಿತ್ತ ಮಾತು: ಆರ್ಥಿಕ ಹಿಂಜರಿತ, ನಿರುದ್ಯೋಗದಿಂದ ಪಾರಾಗಲು ಇರುವ ಏಕೈಕ ಮಾರ್ಗವೇ ಉಳಿತಾಯ - ಭಾರತ ಆರ್ಥಿಕ ಬಿಕ್ಕಟ್ಟು

ಭಾರತ ಇಂತಹ ಆರ್ಥಿಕ ಬಿಕ್ಕಟ್ಟಿಗೆ ಸಿದ್ಧವಾಗುತ್ತಿದೆ. ಇತರೆ ದೇಶಗಳು ಈ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವಾಗ ನಮ್ಮ ದೇಶ ಇದರ ಸಂಪೂರ್ಣ ಪರಿಣಾಮದಿಂದ ಪಾರಾಗಲು ಸಾಧ್ಯವಿಲ್ಲ. ಕಳೆದ ಕೆಲವು ತ್ರೈಮಾಸಿಕದಲ್ಲಿ ಹಣದುಬ್ಬರ ತೀವ್ರವಾಗಿ ಏರಿಕೆ ಕಂಡಿದೆ. ಷೇರು ಮಾರುಕಟ್ಟೆಯಲ್ಲಿ ಈ ಏರಿಳಿತಗಳನ್ನು ನಾವು ಕಂಡಿದ್ದೇವೆ.

ಆರ್ಥಿಕ ಹಿಂಜರಿತ, ನಿರುದ್ಯೋಗದಿಂದ ಪಾರಾಗಲು ಇರುವ ಏಕೈಕ ಮಾರ್ಗ ಉಳಿತಾಯ
It is necessary to be financially strong to escape from inflation recession and unemployment
author img

By

Published : Nov 11, 2022, 12:44 PM IST

ಜಾಗತಿಕ ಹಿಂಜರಿತ ಎಲ್ಲಾ ದೇಶಗಳು, ಕಂಪನಿಗಳು ಮತ್ತು ವೈಯಕ್ತಿಕವಾಗಿ ಎಲ್ಲರ ಮೇಲೂ ಶೀಘ್ರದಲ್ಲೇ ಅಥವಾ ನಿಧಾನವಾಗಿ ಪರಿಣಾಮ ಬೀರಲಿದೆ. ಆರ್ಥಿಕ ಸಂಕಷ್ಟಗಳಿಂದ ಬಹುತೇಕ ದೇಶಗಳಲ್ಲಿ ಹಿಂಬಡ್ತಿ, ಕೆಲಸ ಕಳೆದುಕೊಳ್ಳುವುದು ಸಾಧ್ಯತೆ ಇದೆ. ಭಾರತ ಈ ಬಿಕ್ಕಟ್ಟಿನಿಂದ ಹೊರತಾಗಿಲ್ಲ. ಇಂತಹ ಆರ್ಥಿಕ ಸಂಕಷ್ಟ, ನಿರುದ್ಯೋಗದಿಂದ ಪಾರಾಗಲು ನಾವು ಆರ್ಥಿಕವಾಗಿ ಸಿದ್ಧವಾಗಿರುವುದು ಉತ್ತಮ ಮಾರ್ಗವಾಗಿದೆ.

ಭಾರತ ಇಂತಹ ಆರ್ಥಿಕ ಬಿಕ್ಕಟ್ಟಿಗೆ ಸಿದ್ಧವಾಗುತ್ತಿದೆ.ಇತರೆ ದೇಶಗಳು ಈ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವಾಗ ನಮ್ಮ ದೇಶ ಇದರ ಸಂಪೂರ್ಣ ಪರಿಣಾಮದಿಂದ ಪಾರಾಗಲು ಸಾಧ್ಯವಿಲ್ಲ. ಕಳೆದ ಕೆಲವು ತ್ರೈಮಾಸಿಕದಲ್ಲಿ ಹಣದುಬ್ಬರ ತೀವ್ರವಾಗಿ ಏರಿಕೆ ಕಂಡಿದೆ. ಷೇರು ಮಾರುಕಟ್ಟೆಯಲ್ಲಿ ಈ ಏರಿಳಿತಗಳನ್ನು ನಾವು ಕಂಡಿದ್ದೇವೆ. ಅನೇಕರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ ಎಂಬುದನ್ನು ವರದಿ ತಿಳಿಸುತ್ತಿವೆ. ಒಂದೇ ಬಾರಿ ಕೆಲಸ ಹೋದರೆ ಏನು ಗತಿ ಎಂಬ ಗೊಂದಲ ಕಾಡುತ್ತಿದೆ. ಕ್ರಮೇಣ ಇದು ಆತಂಕಕ್ಕೆ ಕಾರಣವಾಗಬಹುದು. ಇದರ ಬಗ್ಗೆ ಚಿಂತಿಸುವ ಬದಲು, ಭವಿಷ್ಯದಲ್ಲಿ ನಡೆಯುವ ಆರ್ಥಿಕ ಸಂಕಷ್ಟವನ್ನು ಎದುರಿಸಲು ಸಜ್ಜಾಗಬೇಕಿದ್ದು, ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬೆಕಿದೆ.

ಇದಕ್ಕಾಗಿ ಮೊದಲು ಮಾಡಬೇಕಿರುವುದು ಉಳಿತಾಯ. ತಮ್ಮ ಗಳಿಕೆಯಲ್ಲಿ ಕೊಂಚ ಹಣವನ್ನು ಉಳಿಸುವತ್ತ ಮುಖ್ಯವಾಗಿ ಗಮನಹರಿಸಬೇಕಿದೆ. ಕೆಲಸ ಹೋದರು ಮೂರರಿಂದ ಆರು ತಿಂಗಳ ಕಾಲ ನಮ್ಮ ಮಾಸಿಕ ಇಎಂಐಗಳನ್ನು ಕಟ್ಟಲು ನಾವು ಸ್ಥಿರ ಠೇವಣಿಗಳನ್ನು ಮಾಡಬೇಕಿದೆ. ಈ ಹಣವನ್ನು ವರ್ಷದ ಸಂಬಳದಲ್ಲಿ ಮೂರು ಬಾರಿ ಉಳಿತಾಯ ಮಾಡುವಂತೆ ಯೋಜನೆ ರೂಪಿಸಬೇಕು.

ಯಾವುದೇ ಆಕಸ್ಮಿಕ ಹಣವನ್ನು ನಾವು ಸ್ಥಿರ ಠೇವಣಿಯಲ್ಲಿ ಉಳಿತಾಯ ಮಾಡಬೇಕು. ಒಂದು ವೇಳೆ ಕೆಲಸ ಕಳೆದುಕೊಂಡರು ಈ ಸ್ಥಿರ ಠೇವಣಿಯಿಂದ ಮಾಸಿಕವಾಗಿ ಸ್ವಲ್ಪ ಹಣವನ್ನು ವೇತನದ ರೂಪದಲ್ಲಿ ಪಡೆಯಬಹುದಾಗಿದೆ. ಈ ಹಣವನ್ನು ಮನೆ ಬಾಡಿಗೆ ಮತ್ತು ಇಎಂಐನಂತಹ ಅಗತ್ಯಕ್ಕೆ ಮಾತ್ರ ಬಳಸಬೇಕಿದೆ.

ಮಾಸಿಕ ಆದಾಯ ಇಲ್ಲದೇ ಹೋದಾಗ ಸಾಲ ಮತ್ತಷ್ಟು ಹೆಚ್ಚಾಗುತ್ತದೆ. ಈ ಹಿನ್ನಲೆ ಸಾಧ್ಯವಾದಷ್ಟು ಲಭ್ಯವಿರುವ ಹಣವನ್ನು ಹೊಂದಿಸಬೇಕು. ಉದ್ಯೋಗದಲ್ಲಿ ಹಿಂಬಡ್ತಿ ಶುರುವಾದರೆ, ಸುರಕ್ಷಿತ ಹಣ ವ್ಯಯಬಳಕೆ ಜೊತೆಗೆ ಕ್ರೆಡಿಟ್​ ಕಾರ್ಡ್​ ಬಳಕೆ ಸಾದ್ಯವಾದಷ್ಟು ಕಡಿಮೆ ಮಾಡುವುದು ಉತ್ತಮ. ಅನಿಮಿಯತ ಖರ್ಚುಗಳು ಸಾಲದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಹಣದ ಬಿಕ್ಕಟ್ಟಿನಲ್ಲಿ ಸಾಕಷ್ಟು ಲೆಕ್ಕಾಚಾರ ನಡೆಸುವುದು ಉತ್ತಮ. ಅವಶ್ಯಕತೆಯಲ್ಲದ ಖರ್ಚನ್ನು ನಿಮ್ಮ ಬಜೆಟ್​ನಿಂದ ಕೈ ಬಿಡಬೇಕು. ದುಬಾರಿ ವಸ್ತುಗಳ ಕೊಳ್ಳುವಿಕೆ, ಹೋಟೆಲ್​ ಗಳಲ್ಲಿ ವಾಸವ್ಯ ಹೂಡುವುದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು.

ಇನ್ನು ಆರೋಗ್ಯದ ದೃಷ್ಟಿಯಿಂದಾಗಿ ಕಂಪನಿ ಆರೋಗ್ಯ ವಿಮೆ ಹೊರತಾಗಿ ಪ್ರತ್ಯೇಕವಾದ ಆರೋಗ್ಯ ವಿಮೆ ಹೊಂದುವುದು ಅವಶ್ಯ. ಕಾರಣ, ಕೆಲಸ ಕಳೆದುಕೊಂಡ ಸಮಯದಲ್ಲಿ ಉಂಟಾಗುವ ಅನಾರೋಗ್ಯದಿಂದ ಭಾರೀ ಹಣದ ಸಮಸ್ಯೆ ಸೃಷ್ಟಿಯಾಗುತ್ತದೆ. ಇದರಿಂದಾಗಿ ನಿಮ್ಮ ಹಣವೆಲ್ಲಾ ಆರೋಗ್ಯಕ್ಕೆ ಖರ್ಚಾಗುತ್ತದೆ. ಇದಕ್ಕಾಗಿ ಪಿಎಫ್​ ಮತ್ತು ಇಕ್ವಿಟಿ ಹಣ ತೆಗೆಯುವ ಅಗತ್ಯವಿಲ್ಲ. ಇದಕ್ಕಾಗಿ ನಾವು ಮೊದಲು ಆಕಸ್ಮಿಕ ನಿಧಿಗಳ ಬಳಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ: ಆರ್ಥಿಕ ಹಿಂಜರಿತ: ಸಾಫ್ಟವೇರ್ ನೇಮಕಾತಿ ಶೇ 25 ರಿಂದ 30 ರಷ್ಟು ಕುಸಿತ ಸಾಧ್ಯತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.