ಬೆಂಗಳೂರು: CE-20 ಎಂಜಿನ್ನ flight acceptance hot test ಅನ್ನು ತಮಿಳುನಾಡಿನ ಮಹೇಂದ್ರಗಿರಿಯಲ್ಲಿ ಇಸ್ರೊ ಪ್ರೊಪಲ್ಷನ್ ಕಾಂಪ್ಲೆಕ್ಸ್ (IPRC) ನ ಉನ್ನತ ಎತ್ತರದ ಪರೀಕ್ಷಾ ಸೌಲಭ್ಯದಲ್ಲಿ ನಡೆಸಲಾಯಿತು. ಮುಂದಿನ 36 OneWeb India-1 ಉಪಗ್ರಹಗಳನ್ನು ಉಡಾವಣೆ ಮಾಡಲು ಗುರುತಿಸಲಾದ LVM3-M3 ಮಿಷನ್‌ಗಾಗಿ ಎಂಜಿನ್ ಅನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.
ಲಂಡನ್ ಮೂಲದ ಉಪಗ್ರಹ ಸಂವಹನ ಕಂಪನಿಯಾದ ಒನ್ವೆಬ್ನ ಈ ಉಪಗ್ರಹಗಳನ್ನು ಮುಂದಿನ ವರ್ಷದ ಆರಂಭದಲ್ಲಿ ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) LVM3 ನಲ್ಲಿ ಉಡಾವಣೆ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಶುಕ್ರವಾರದ flight acceptance test ಅಕ್ಟೋಬರ್ 23 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC- SHAR) NSIL ನಿಂದ 36 ಒನ್ ವೆಬ್ ಉಪಗ್ರಹಗಳ ಮೊದಲ ಸೆಟ್ ಅನ್ನು ಉಡಾವಣೆ ಮಾಡಿದ ಕೆಲವೇ ದಿನಗಳ ನಂತರ ನಡೆದಿದೆ.
ಒನ್ ವೆಬ್ ಪ್ರಕಾರ, ಎನ್ಎಸ್ಐಎಲ್ ಮತ್ತು ಇಸ್ರೊನೊಂದಿಗೆ ತನ್ನ ಪಾಲುದಾರಿಕೆಯ ಭಾಗವಾಗಿ 2023 ರ ವೇಳೆಗೆ ಭಾರತದಾದ್ಯಂತ ಸಂಪರ್ಕವನ್ನು ಒದಗಿಸುವ ಉದ್ದೇಶ ಹೊಂದಿದೆ. ಲಡಾಖ್‌ನಿಂದ ಕನ್ಯಾಕುಮಾರಿ ಮತ್ತು ಗುಜರಾತ್‌ನಿಂದ ಅರುಣಾಚಲ ಪ್ರದೇಶಕ್ಕೆ, ಒನ್ ವೆಬ್ ಉದ್ಯಮಗಳಿಗೆ ಮಾತ್ರವಲ್ಲದೇ ಹಳ್ಳಿಗಳು, ಪುರಸಭೆಗಳು ಮತ್ತು ಶಾಲೆಗಳು, ದೇಶಾದ್ಯಂತ ತಲುಪಲು ಕಷ್ಟಕರವಾದ ಪ್ರದೇಶಗಳನ್ನು ಒಳಗೊಂಡಂತೆ ಪಟ್ಟಣಗಳಿಗೂ ಸುರಕ್ಷಿತ ಸೌಲಭ್ಯಗಳನ್ನು ನೀಡಲಿದೆ ಎಂದು ಅದು ಹೇಳಿದೆ.
ಭಾರ್ತಿ ಗ್ಲೋಬಲ್ ಅತಿದೊಡ್ಡ ಹೂಡಿಕೆದಾರ: ಭಾರತದಲ್ಲಿ ಇಂಟರ್ನೆಟ್ ಸಂಪರ್ಕವನ್ನು ಹೆಚ್ಚಿಸಲು ಉದ್ದೇಶಿಸಿರುವ ಒನ್ ವೆಬ್ನಲ್ಲಿ ಭಾರ್ತಿ ಗ್ಲೋಬಲ್ ಅತಿದೊಡ್ಡ ಹೂಡಿಕೆದಾರನಾಗಿದೆ ಎಂದು ಕಂಪನಿ ಹೇಳಿದೆ. ಒನ್‌ವೆಬ್‌ನೊಂದಿಗೆ ನಮ್ಮ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು LEO ಸಂಪರ್ಕವು ಭಾರತದಾದ್ಯಂತ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ತಲುಪಿಸುವ ಸಾಮರ್ಥ್ಯವನ್ನು ಬಳಸಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ಎನ್ಎಸ್ಐಎಲ್ ಚೇರ್ಮನ್-ಕಮ್-ಮ್ಯಾನೇಜಿಂಗ್ ಡೈರೆಕ್ಟರ್ ರಾಧಾಕೃಷ್ಣನ್ ಡಿ ಹೇಳಿದರು.
ಕಳೆದ ಭಾನುವಾರದ ಉಡಾವಣೆಯು ಜಾಗತಿಕ ವಾಣಿಜ್ಯ ಉಡಾವಣಾ ಸೇವಾ ಮಾರುಕಟ್ಟೆಗೆ ರಾಕೆಟ್‌ನ ಪ್ರವೇಶಿಸಿದಂತಾಗಿದೆ ಎಂದು ಇಸ್ರೊ ಬೆಂಗಳೂರು ಪ್ರಧಾನ ಕಚೇರಿ ತಿಳಿಸಿದೆ. ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ಕೇಂದ್ರೀಯ ಸಾರ್ವಜನಿಕ ವಲಯದ ಉದ್ಯಮವಾದ ಎನ್ಎಸ್ಐಎಲ್, ಇಸ್ರೊದ LVM3 ನಲ್ಲಿ ಒಟ್ಟು 72 ಒನ್ ವೆಬ್ LEO (ಲೋ ಅರ್ಥ್ ಆರ್ಬಿಟ್) ಉಪಗ್ರಹಗಳನ್ನು ಉಡಾವಣೆ ಮಾಡಲು ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟೆಡ್ ಲಿಮಿಟೆಡ್ (OneWeb) ನೊಂದಿಗೆ ಎರಡು ಉಡಾವಣಾ ಸೇವಾ ಒಪ್ಪಂದಗಳಿಗೆ ಸಹಿ ಹಾಕಿದೆ.
ನಾಲ್ಕು ಟನ್ ವರ್ಗದ ಉಪಗ್ರಹ ಉಡಾವಣೆ ಸಾಮರ್ಥ್ಯ: LVM3, ಇಸ್ರೊದ ಅತ್ಯಂತ ಭಾರವಾದ ರಾಕೆಟ್, ಜಿಯೋಸಿಂಕ್ರೊನಸ್ ಟ್ರಾನ್ಸಫರ್ ಕಕ್ಷೆಗೆ ನಾಲ್ಕು ಟನ್ ವರ್ಗದ ಉಪಗ್ರಹವನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. LVM3 (ಲಾಂಚ್ ವೆಹಿಕಲ್ ಮಾರ್ಕ್ 3) ಎರಡು ಘನ ಮೋಟಾರು ಸ್ಟ್ರಾಪ್-ಆನ್‌ಗಳು, ದ್ರವ ಪ್ರೊಪೆಲ್ಲಂಟ್ ಕೋರ್ ಹಂತ ಮತ್ತು ಕ್ರಯೋಜೆನಿಕ್ ಹಂತವನ್ನು ಹೊಂದಿರುವ ಮೂರು-ಹಂತದ ವಾಹನವಾಗಿದೆ.
ಇದನ್ನೂ ಓದಿ: ಇಸ್ರೋ ಗೂಢಚಾರ ಪ್ರಕರಣ: ನಂಬಿ ನಾರಾಯಣ್ಗೆ 1.3 ಕೋಟಿ ರೂ. ಪರಿಹಾರ ನೀಡಿದ ಕೇರಳ ಸರ್ಕಾರ!