ETV Bharat / bharat

ಒಮಾನ್​ನಿಂದ ಇಸ್ಲಾಂ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಭಾರತಕ್ಕೆ ಗಡಿಪಾರು ಸಾಧ್ಯತೆ - ಭಯೋತ್ಪಾದನೆ

ನಾಳೆ ಒಮಾನ್​ಗೆ ಜಾಕಿರ್ ನಾಯಕ್ ಭೇಟಿ ನೀಡುವ ಸಾಧ್ಯತೆ ಇದ್ದು, ಇದೇ ಸಂದರ್ಭದಲ್ಲಿ ಭಾರತೀಯ ಗುಪ್ತಚರ ಸಂಸ್ಥೆಗಳು ಬಂಧಿಸಲು ಮುಂದಾಗಿದೆ.

islamist-preacher-zakir-naik-likely-to-be-deported-to-india-from-oman
ಒಮಾನ್​ನಿಂದ ಇಸ್ಲಾಂ ಧರ್ಮ ಪ್ರಚಾರಕ ಜಾಕಿರ್ ನಾಯಕ್ ಭಾರತಕ್ಕೆ ಗಡಿಪಾರು ಸಾಧ್ಯತೆ
author img

By

Published : Mar 22, 2023, 3:34 PM IST

ಮುಂಬೈ (ಮಹಾರಾಷ್ಟ್ರ): ಭಾರತದಿಂದ ಪಲಾಯನ ಆಗಿರುವ ಇಸ್ಲಾಂ ಧರ್ಮ ಪ್ರಚಾರಕ ಜಾಕಿರ್ ನಾಯಕ್​ ಅವರನ್ನು ಒಮಾನ್‌ನಿಂದ ಗಡಿಪಾರು ಮಾಡುವ ಸಾಧ್ಯತೆ ಇದೆ. ಮಾರ್ಚ್ 23ರಂದು ಝಾಕಿರ್ ನಾಯಕ್ ಒಮಾನ್​ಗೆ ಭೇಟಿ ನೀಡಲಿದ್ದು, ಇದೇ ಸಂದರ್ಭದಲ್ಲಿ ಅವರನ್ನು ಬಂಧಿಸಲು ಭಾರತೀಯ ಗುಪ್ತಚರ ಸಂಸ್ಥೆಗಳು ಒಮಾನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸರ್ಕಾರಿ ಕಚೇರಿಯಲ್ಲಿ ಲಾಡೆನ್‌ ಭಾವಚಿತ್ರ ಹಾಕಿ, ಮೆಚ್ಚುಗೆ: ಎಂಜಿನಿಯರ್ ವಜಾ

ಭಯೋತ್ಪಾದನೆ, ಹಣ ವರ್ಗಾವಣೆ ಮತ್ತು ದ್ವೇಷ ಹರಡುವ ಆರೋಪದ ಮೇಲೆ ಭಾರತ ಸರ್ಕಾರವು ಜಾಕಿರ್​ ನಾಯಕ್ ಬರಹಗಳು ಮತ್ತು ಭಾಷಣಗಳನ್ನು ನಿಷೇಧಿಸಿತ್ತು. 2017ರಲ್ಲಿ ಜಾಕಿರ್​ ನಾಯಕ್​ ದೇಶ ತೊರೆದಿದ್ದಾರೆ. ಭಾರತದಿಂದ ಪಲಾಯನಗೊಂಡ ನಂತರ ಮಲೇಷ್ಯಾಕ್ಕೆ ಜಾಕಿರ್​ ಸ್ಥಳಾಂತರಗೊಂಡಿದ್ದ. ನಂತರದಲ್ಲಿ ಮಲೇಷ್ಯಾ ಕೂಡ ಈತನ ಭಾಷಣಕ್ಕೆ ನಿರ್ಬಂಧ ಹೇರಿತ್ತು. ಇದೀಗ ಅವರನ್ನು ಧಾರ್ಮಿಕ ಉಪನ್ಯಾಸಗಳನ್ನು ನೀಡಲು ಒಮಾನ್‌ಗೆ ಆಹ್ವಾನಿಸಲಾಗಿದೆ. ಹೀಗಾಗಿಯೇ ಒಮಾನ್​ನಲ್ಲಿ ಝಾಕಿರ್ ನಾಯಕ್ ಬಂಧಿಸಲು ಭಾರತ ಮುಂದಾಗಿದೆ ಎಂದು ತಿಳಿದು ಬಂದಿದೆ.

ಯಾರು ಈ ಜಾಕಿರ್​?: ಮೂಲತಃ ಮಹಾರಾಷ್ಟ್ರದ ಕೊಂಕಣದ ಜಾಕಿರ್ ಅಬ್ದುಲ್ ಕರೀಂ ನಾಯಕ್​, ತನ್ನ ಕುಟುಂಬದೊಂದಿಗೆ ಮುಂಬೈನ ಡೋಂಗ್ರಿಗೆ ಬಂದು ನೆಲೆಸಿದ್ದರು. ವೈದ್ಯರ ಕುಟುಂಬಕ್ಕೆ ಸೇರಿದ ಜಾಕೀರ್, ಸ್ವತಃ ವೈದ್ಯರೂ ಆಗಿದ್ದರು. ಇಸ್ಲಾಮಿಕ್ ಬೋಧಕರನ್ನು ಭೇಟಿಯಾದ ಬಳಿಕ ಆ ಬೋಧಕರಿಂದ ಸ್ಫೂರ್ತಿ ಪಡೆದಿದ್ದರು. ಇದಾದ ನಂತರ ಜಾಕಿರ್ ತಮ್ಮ ಡಾಕ್ಟರ್ ವೃತ್ತಿಯನ್ನು ತೊರೆದಿದ್ದರು. ಅಲ್ಲಿಂದ ಇಸ್ಲಾಂ ಧರ್ಮದ ಬಗ್ಗೆ ಉಪನ್ಯಾಸಗಳನ್ನು ನೀಡಲು ಪ್ರಾರಂಭಿಸಿದ್ದರು.

ಇಸ್ಲಾಂ ಧರ್ಮದ ಬಗ್ಗೆ ಪ್ರಚಾರ ಮಾಡುತ್ತಾ ಮುಂಬೈನಲ್ಲಿ ಜಾಕಿರ್ ನಾಯಕ್ ತಿರುಗಾಡುತ್ತಿದ್ದರು. ನಂತರ ನಿಧಾನವಾಗಿ ಜನಪ್ರಿಯತೆಯನ್ನು ಗಳಿಸಿದ್ದರು. ಜನರು ಕೂಡ ಜಾಕಿರ್​ ನಾಯಕ್​ ಅವರನ್ನು ಬೆಂಬಲಿಸಲು ಮತ್ತು ಅನುಸರಿಸಲು ಶುರು ಮಾಡಿದ್ದರು. ಇಸ್ಲಾಂ ಧರ್ಮದ ಬಗ್ಗೆ ಉಪನ್ಯಾಸಗಳನ್ನು ನೀಡುವುದಕ್ಕಾಗಿ ಜನರೂ ಕರೆಯ ತೊಡಗಿದ್ದರು. 1991ರಲ್ಲಿ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು.

ಇದನ್ನೂ ಓದಿ: ಮೋಸ್ಟ್​ ವಾಂಟೆಡ್​ ಝಾಕಿರ್​ ನಾಯಕ್​​ಗೆ ಗಲ್ಫ್​ ರಾಷ್ಟ್ರಗಳಿಂದ ಬರ್ತಿದೆ ಭರಪೂರ ಹಣ

ಅಲ್ಲದೇ, ನಂತರ ಜಾಕಿರ್​ ನಾಯಕ್​ "ಪೀಸ್ ಟಿವಿ" ಸ್ಯಾಟಲೈಟ್​ ಚಾನಲ್​ ಸಹ ಪ್ರಾರಂಭಿಸಿದ್ದರು. ಇದರ ನಡುವೆ ಜಾಕಿರ್​ ನಾಯಕ್ ಅವರನ್ನು ಹಲವು ವಿವಾದಗಳು ಸುತ್ತಿಕೊಂಡಿವೆ. ಇದರಲ್ಲಿ ಪ್ರಮುಖವಾಗಿ 2008ರಲ್ಲಿ ಒಸಾಮಾ ಬಿನ್​ ಲಾಡೆನ್​ನನ್ನು ತಮ್ಮ ಚಾನಲ್ ಮೂಲಕ ಜಾಕಿರ್​ ಬೆಂಬಲಿಸಿದ್ದರು. 2016ರಲ್ಲಿ ಜಾಕಿರ್​ ದ್ವೇಷದ ಭಾಷಣವನ್ನು ಹರಡಿದ್ದಾರೆ ಎಂದೂ ಆರೋಪಿಸಲಾಗಿತ್ತು. ನಂತರ ಬಾಂಗ್ಲಾದೇಶದ ಭಯೋತ್ಪಾದಕರು ಢಾಕಾದಲ್ಲಿ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಜಾಕಿರ್​ ನಾಯಕ್ ಮಾಡಿದ್ದ ಭಾಷಣವೇ ಕಾರಣ ಮತ್ತು ಇದರಿಂದ ಪ್ರಚೋದನೆಗೊಂಡು ಈ ಗುಂಡಿನ ದಾಳಿ ನಡೆದಿತ್ತು ಎಂದು ಹೇಳಲಾಗಿದೆ.

ಇದರ ವಿವಾದಗಳ ನಡುವೆಯೂ ಜಾಕಿರ್ ನಾಯಕ್​ ಸಾಮಾಜಿಕ ಜಾಲತಾಣದಲ್ಲಿ 1 ಕೋಟಿ 70 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಪ್ರಪಂಚದಾದ್ಯಂತ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳಲ್ಲಿ ಮಾತನಾಡುವುದನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ: ಲವ್ ಜಿಹಾದ್ ಪ್ರಕರಣ: ಧರ್ಮಗುರು ಸೇರಿದಂತೆ ಇತರರ ತನಿಖೆಗಾಗಿ ಬಾಂಗ್ಲಾದೇಶ ತಲುಪಿದ ಎನ್‌ಐಎ ತಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.