ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡಿರುವ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಎಳನೀರು ವ್ಯಾಪಾರ ಮಾಡುತ್ತಿದ್ದ ಸೋನು ಕುಮಾರ ಯಾದವ್ ಆತ್ಮಹತ್ಯೆಗೆ ಶರಣಾಗಿದ್ದು, ಈತ ಮೂಲತಃ ಜಾರ್ಖಂಡ್ನವನಾಗಿದ್ದಾನೆ. ಹೈದರಾಬಾದ್ನ ದ್ವಾರಕಾಪುರಿ ಕಾಲೋನಿ, ಪಂಜಗುಟ್ಟದಲ್ಲಿ ಈತ ವ್ಯಾಪಾರ ನಡೆಸುತ್ತಿದ್ದ. ಇಂದು ತಾನು ವಾಸವಾಗಿದ್ದ ನಿವಾಸದ ವಾಶ್ ರೂಂನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈತನೊಂದಿಗೆ ಸಂಜಯ್ ಯಾದವ್ ಹಾಗೂ ಮನೋಜ್ ಎಂಬ ಇಬ್ಬರು ಸ್ನೇಹಿತರಿದ್ದರು. ಐಪಿಎಲ್ನಲ್ಲಿ ವಿಪರೀತವಾಗಿ ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡ ನಂತರ ಅದರಿಂದ ಮಾನಸಿಕ ಒತ್ತಡಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಆತನ ಸ್ನೇಹಿತರು ಕೆಲಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.