ಜಮ್ಮು: ಪಾಕಿಸ್ತಾನಿ ನುಸುಳುಕೋರನೊಬ್ಬನನ್ನು ಬಿಎಸ್ಎಫ್ ಯೋಧರು ಕೊಂದು ಹಾಕಿದ್ದಾರೆ. ಜಮ್ಮು ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಿಂದ ಸೋಮವಾರ ಬೆಳಗ್ಗೆ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ನುಸುಳುಕೋರ ಗಡಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ.
ದೇಶದೊಳಗೆ ನುಸುಳುವ ಉದ್ದೇಶದಿಂದಲೇ ವ್ಯಕ್ತಿಯೊಬ್ಬ ಗಡಿ ಬೇಲಿ ದಾಟುತ್ತಿರುವುದನ್ನು ಕಾವಲಿಗಿದ್ದ ಯೋಧರು ಗಮನಿಸಿದ್ದು, ತಕ್ಷಣ ಕ್ರಮ ಕೈಗೊಂಡಿದ್ದಾರೆ ಎಂದು ಬಿಎಸ್ಎಫ್ ವಕ್ತಾರರು ಹೇಳಿದರು. ಮುಂದೆ ಬರಬೇಡ ಎಂದು ಸಾಕಷ್ಟು ಬಾರಿ ನಾವು ಆತನಿಗೆ ಎಚ್ಚರಿಸಿದರೂ ಆತ ಕೇಳದೇ ಗಡಿಯೊಳಗೆ ನುಸುಳಲು ಯತ್ನಿಸಿದ ಎಂದು ಬಿಎಸ್ಎಫ್ ವಕ್ತಾರ ತಿಳಿಸಿದರು.
ನುಸುಳುಕೋರನ ಮೇಲೆ ಮೂರು ಸುತ್ತು ಗುಂಡು ಹಾರಿಸಿದ ನಂತರ ಆತನ ದೇಹವು ಬೇಲಿಯ ಬಳಿಯಲ್ಲೇ ಸಿಕ್ಕಿದೆ. ನಂತರ ಮೃತದೇಹವನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಯಿತು.
ಇದನ್ನು ಓದಿ:ಅಮರನಾಥ ಯಾತ್ರೆಗೂ ಮುನ್ನ ಕಾಶ್ಮೀರದಲ್ಲಿ ದಾಳಿಗೆ ಸಂಚು.. ಶಸ್ತ್ರಾಸ್ತ್ರಗಳೊಂದಿಗೆ ಉಗ್ರ ಅಂದರ್