ETV Bharat / bharat

ಅಂತಾರಾಷ್ಟ್ರೀಯ ಡ್ರಗ್ಸ್​ ದಂಧೆ ಭೇದಿಸಿದ ಪೊಲೀಸರು.. ತಮಿಳುನಾಡಿನ ಇಬ್ಬರು ಪೆಡ್ಲರ್​ಗಳ ಬಂಧನ

author img

By

Published : Dec 13, 2022, 9:25 AM IST

ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​ಗೆ ಕೊರಿಯರ್​ ಪಾರ್ಸಲ್​ಗಳಲ್ಲಿಟ್ಟು ಡ್ರಗ್ಸ್​ ಸಾಗಣೆ ಮಾಡುತ್ತಿದ್ದ ಇಬ್ಬರು ಅಂತಾರಾಷ್ಟ್ರೀಯ ಪೆಡ್ಲರ್​ಗಳನ್ನು ಹೈದರಾಬಾದ್​ನಲ್ಲಿ ಬಂಧಿಸಲಾಗಿದೆ.

international-narcotics-peddling-racket
ಅಂತಾರಾಷ್ಟ್ರೀಯ ಡ್ರಗ್ಸ್​ ದಂಧೆ ಬೇಧಿಸಿದ ಪೊಲೀಸರು

ಹೈದರಾಬಾದ್(ತೆಲಂಗಾಣ): ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​​ಗೆ ಮಾದಕದ್ರವ್ಯ ಸಾಗಿಸುತ್ತಿದ್ದ ಅಂತಾರಾಷ್ಟ್ರೀಯ ಇಬ್ಬರು ಪೆಡ್ಲರ್​ಗಳನ್ನು ಹೈದರಾಬಾದ್​ನಲ್ಲಿ ಸೋಮವಾರ ಬಂಧಿಸಲಾಗಿದೆ. ಬಂಧಿತರು ತಮಿಳುನಾಡು ಮೂಲದವರು ಎಂದು ಗುರುತಿಸಲಾಗಿದೆ. 9 ಕೋಟಿ ಮೌಲ್ಯದ 8.5 ಕೆಜಿ ಮಾದಕ ವಸ್ತು ಸೇರಿದಂತೆ ಮತ್ತಿತರ ಮಾದಕದ್ರವ್ಯವನ್ನು ವಶಕ್ಕೆ ಪಡೆಯಲಾಗಿದೆ.

4 ದಿನಗಳ ಹಿಂದೆ ತಮಿಳುನಾಡಿನಿಂದ ಹೈದರಾಬಾದ್​ಗೆ ಬಂದ ಪೆಡ್ಲರ್​ಗಳು ಇಲ್ಲಿನ ವ್ಯಕ್ತಿಗೆ ಈ​ ಮಾದಕವಸ್ತುವನ್ನು ಸರಬರಾಜು ಮಾಡಿದ್ದಾರೆ. ಬಳಿಕ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​ಗೆ ಕಳುಹಿಸಬೇಕಿದ್ದ ಮಾದಕವಸ್ತುವನ್ನು ಹೈದರಾಬಾದ್ ಮತ್ತು ಪುಣೆಯ ಕೊರಿಯರ್ ಪಾರ್ಸೆಲ್ ಏಜೆನ್ಸಿಗಳ ಮೂಲಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ಗೆ ಸಾಗಿಸಲು ಬಟ್ಟೆಯೊಂದಿಗೆ ಪ್ಲಾಸ್ಟಿಕ್ ಕವರ್‌ಗಳಲ್ಲಿ ತಲಾ 200 ಗ್ರಾಂ ಡ್ರಗ್‌ಗಳನ್ನು ಹಾಕಿ ಪೆಟ್ಟಿಗೆಯ ಒಳಗಡೆ ಬಚ್ಚಿಟ್ಟಿದ್ದರು.

ಈ ಮಾಹಿತಿ ಅರಿತ ಪೊಲೀಸರು, ಆರೋಪಿಗಳು ಉಳಿದುಕೊಂಡಿದ್ದ ಲಾಡ್ಜ್​ ಮೇಲೆ ದಾಳಿ ಮಾಡಿ, ಇಬ್ಬರನ್ನು ಹಿಡಿದು ಅವರ ಬಳಿಯಿದ್ದ 8.5 ಕಿಲೋಗ್ರಾಂ ಡ್ರಗ್ಸ್​, 4 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿದ್ದಾರೆ. ಈ ವರ್ಷ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗೆ ಸುಮಾರು 70 ಕೆಜಿ ಡ್ರಗ್ಸ್​​​ ಕಳುಹಿಸಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾನಗಳ ಕಾರ್ಗೋದಲ್ಲಿ ಸಾಗಣೆ: ಬಂಧಿತ ಪೆಡ್ಲರ್​ಗಳು ಈ ಡ್ರಗ್ಸ್​ ಕಳುಹಿಸಲು ನಾನಾ ತಂತ್ರ ರೂಪಿಸುತ್ತಿದ್ದರು. ಪುಣೆ, ಹೈದರಾಬಾದ್‌ನಲ್ಲಿರುವ ಅಂತಾರಾಷ್ಟ್ರೀಯ ಕೊರಿಯರ್ ಸೇವೆಗಳನ್ನು ಬಳಸಿಕೊಂಡು, ಅದರಲ್ಲಿ ಕಳುಹಿಸಲಾಗುತ್ತಿದ್ದ ಬಟ್ಟೆ, ಬಳೆಯ ಬಾಕ್ಸ್‌ಗಳು, ಬೇಬಿ ವೇರ್ ಗಿಫ್ಟ್ ಪ್ಯಾಕ್‌ಗಳು ಇತ್ಯಾದಿಗಳಲ್ಲಿ ಅನ್ನು ರಹಸ್ಯವಾಗಿ ಬಚ್ಚಿಟ್ಟು, ನಕಲಿ ವಿಳಾಸದ ಪುರಾವೆಗಳನ್ನು ನೀಡಿ ಪಾರ್ಸೆಲ್​ ಮಾಡಲಾಗುತ್ತಿತ್ತು.

ಓದಿ: ಮೊರ್ಬಿ ಸೇತುವೆ ದುರಂತ: ಸಂತ್ರಸ್ತರಿಗೆ ₹4 ಲಕ್ಷ ಹೆಚ್ಚುವರಿ ಪರಿಹಾರ, ಪುರಸಭೆ ವಿಸರ್ಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.