ನಿರ್ಮಲ್(ತೆಲಂಗಾಣ) : ಮೂವರ ಹೆಸರುಗಳು ಒಂದೇ ಇರುವುದು ಸರ್ವೇ ಸಾಮಾನ್ಯ.. ಆ ಮೂವರು ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವುದೂ ಕೂಡ ಸಾಮಾನ್ಯವೇ.. ಆ ಮೂವರು ಒಂದೇ ಕೋರ್ಸ್ ಓದೂ ಕೂಡ ಸಾಮಾನ್ಯ ಎನಿಸಬಹುದು.
ಮೂವರು ಸರ್ಕಾರಿ ಉದ್ಯೋಗ ಪಡೆದು, ಒಂದೇ ಇಲಾಖೆಯಲ್ಲಿ ಸಹದ್ಯೋಗಿಗಳಾಗಿ ಕೆಲಸ ಮಾಡುವುದು ಸಾಮಾನ್ಯವಾದ ವಿಚಾರವೇನಲ್ಲ. ಆದರೆ, ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ಮೂವರು ಯುವತಿಯರು ಇಂಥದ್ದೊಂದು ಪ್ರಸಂಗಕ್ಕೆ ಸಾಕ್ಷಿಯಾಗಿದ್ದಾರೆ.
ಮೋರೆ ಮೌನಿಕಾ, ಸಿಬ್ಬುಲ ಮೌನಿಕಾ, ಕುಂಟಾ ಮೌನಿಕಾ.. ಮನೆಯ ಹೆಸರುಗಳನ್ನು ಹೊರತುಪಡಿಸಿದರೆ, ಅವರ ಹೆಸರಿನ ಜೊತೆಯಲ್ಲಿ ಹಲವಾರು ಸಾಮ್ಯತೆಗಳು ಕಂಡು ಬರುತ್ತವೆ. ಇವರೆಲ್ಲ ಒಂದೇ ಶಾಲೆಯಲ್ಲಿ ಓದಿ, ಈಗ ಸಹದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದು ಕಾಕತಾಳೀಯವಾದರೂ ಅಚ್ಚರಿಯ ಸಂಗತಿ.
ಈ ಮೂವರು ನಿರ್ಮಲ್ ಜಿಲ್ಲೆಯ ಲೋಕೇಶ್ವರ ಮಂಡಲದಲ್ಲಿ ಕಂಡು ಬರುವ ಹಡ್ಗಾಂ, ಲೋಕೇಶ್ವರಂ ಮತ್ತು ರಾಜೂರ ಗ್ರಾಮಗಳಿಗೆ ಸೇರಿದವರಾಗಿದ್ದಾರೆ. ಮೂವರೂ ಲೋಕೇಶ್ವರದ ಶಾರದಾ ವಿದ್ಯಾಮಂದಿರದಲ್ಲಿ 10ನೇ ತರಗತಿವರೆಗೆ ಓದಿದ್ದಾರೆ.
ನಂತರ ಅವರು 2014ರಲ್ಲಿ ತಮ್ಮ ಕೃಷಿ ಡಿಪ್ಲೊಮಾ ಪೂರ್ಣಗೊಳಿಸಿದರು. 2017ರಲ್ಲಿ ಈ ಮೂವರೂ ವಲಯ ಕೃಷಿ ವಿಸ್ತರಣಾ ಅಧಿಕಾರಿಗಳ (ಎಇಒ) ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಈಗ ಅವರು ಲೋಕೇಶ್ವರದಲ್ಲಿ ಮಂಡಲದಲ್ಲಿ ಕೆಲಸ ಮಾಡುತ್ತಿದ್ದಾರೆ.
ಕಚೇರಿಗೆ ನೇಮಕವಾದ ಮೂವರ ಹೆಸರು ಒಂದೇ ಆಗಿರುವುದನ್ನು ಕಂಡು ಕೆಲವರು ಅಚ್ಚರಿಗೊಂಡಿದ್ದಾರೆ. ಅದೇ ಹೆಸರು.. ಅದೇ ಶಾಲೆ, ಅದೇ ಮಂಡಲ.. ಒಂದೇ ಕಚೇರಿಯಲ್ಲಿ ಕೆಲಸ. ಕೆಲವರಿಗೆ ವಿಚಿತ್ರ. ಕೆಲವರಿಗೆ ಕುತೂಹಲ. ಇನ್ನೂ ಕೆಲವರಿಗೆ ಕನ್ಫ್ಯೂಸ್.
ಇದನ್ನೂ ಓದಿ: ಸ್ಯಾಂಡಲ್ವುಡ್ ನಟಿಯ ಸಹೋದರನ ಮೇಲೆ ಅತ್ಯಾಚಾರ ಆರೋಪ
ಮೂವರೂ ಒಂದೇ ಶಾಲೆಯಲ್ಲಿ ಓದಿದ್ದೇವೆ. ಈಗ ಅದೇ ಶಾಲೆಯ ಪಕ್ಕದಲ್ಲೇ ಕಚೇರಿ ಇದೆ. ಆಗಾಗ ಶಿಕ್ಷಕರು ಬಂದು ನಮಗೆ ಇನ್ನಷ್ಟು ಸ್ಫೂರ್ತಿ ನೀಡುತ್ತಾರೆ. ಮೂವರು ಶಾಲೆ ಕಡೆಗೆ ಹೋದಾಗ ಅವರೂ ಖುಷಿಪಡುತ್ತಾರೆ. ನಮಗೆ ತುಂಬಾ ಸಂತೋಷವಾಗಿದೆ. ಇದೆಲ್ಲವೂ ಆಕಸ್ಮಿಕವಾಗಿ ನಡೆದಿದೆ ಎಂದು ಆ ಮೂವರು ಹೇಳುವ ಮಾತು.