ETV Bharat / bharat

ಸ್ಪೂರ್ತಿದಾಯಕ ಕಥೆ: ಅಂದು ಮಧ್ಯಮ ವರ್ಗದ ಯುವತಿ..ಇಂದು ₹ 30 ಕೋಟಿ ವಹಿವಾಟು ಕಂಪನಿ ಒಡತಿ! - ತಮಿಳುನಾಡು

ಅಂದು ಆಕೆ ಮಧ್ಯಮ ವರ್ಗದ ಯುವತಿ. ಆದರೆ ಈಗ ಬರೋಬ್ಬರಿ 30 ಕೋಟಿ ರೂ. ವಹಿವಾಟು ಕಂಪನಿಯ ಒಡತಿ. ಕಣ್ಮಣಿಯ ಎಂಬ ಯುವತಿಯ ಸ್ಪೂರ್ತಿದಾಯಕ ಬದುಕಿನ ಪಯಣ ಹೀಗಿದೆ ನೋಡಿ.

Representative image
ಸಾಂದರ್ಭಿಕ ಚಿತ್ರ
author img

By

Published : Jan 23, 2023, 8:02 PM IST

ಚೆನ್ನೈ(ತಮಿಳುನಾಡು): ಚೆನ್ನಾಗಿ ಕೆಲಸ ಮಾಡಿದರೆ ಯಜಮಾನನಿಗೆ ಲಾಭ ತಂದುಕೊಡಬಹುದು. ಆದರೆ, ನೌಕರನಾಗಿಯೇ ಉಳಿಯುತ್ತೇನೆ ಎಂಬ ಆಲೋಚನೆಯೇ ಆಕೆಯನ್ನು ಉದ್ಯಮಿಯನ್ನಾಗಿ ಮಾಡಿತು. ಅಲ್ಲಿ ಯಶಸ್ವಿಯಾಗಿದ್ದಷ್ಟೇ ಅಲ್ಲ ಇಂಡೋ - ಕೆನಡಾ ಚೇಂಬರ್ ಆಫ್ ಕಾಮರ್ಸ್​ನ ಸಲಹೆಗಾರರ ಮಟ್ಟಕ್ಕೂ ಏರಿದಳು. ಇದು ಕಣ್ಮಣಿ ಎಂಬ ಯುವತಿಯ ಸ್ಪೂರ್ತಿದಾಯಕ ಬದುಕಿನ ಪಯಣ.

ಈಕೆಯ ಹೆಸರು ಕಣ್ಮಣಿ. ಚೆನ್ನೈ ಮೂಲದವಳು. ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದಾಗಿ ಪದವಿಯ ಎರಡನೇ ವರ್ಷದಲ್ಲಿ 'ಅಧ್ಯಯನ ಮುಂದುವರೆಸುವ' ಒಪ್ಪಂದದೊಂದಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಧನಶೇಖರ್ ಬಾಲಕೃಷ್ಣನ್ ಎಂಬುವವರನ್ನು ವಿವಾಹವಾದರು. ಅವರ ಪ್ರೋತ್ಸಾಹದಿಂದ ರಾಜಕೀಯ, ತತ್ವಶಾಸ್ತ್ರ ಮತ್ತು ಸಾರ್ವಜನಿಕ ವ್ಯವಹಾರಗಳಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಆಗಿ ಸೇವೆ: 1994ರಲ್ಲಿ ತಿಂಗಳಿಗೆ ರೂ.2 ಸಾವಿರ ಸಂಬಳಕ್ಕೆ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಆಗಿ ಸೇರಿಕೊಂಡರು. 8 ವರ್ಷಗಳ ಬಳಿಕ 80 ಸಾವಿರ ರೂ.ಸಂಬಳದೊಂದಿಗೆ ಬಿಸಿನೆಸ್ ಮುಖ್ಯಸ್ಥರಾದರು. ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ 2010ರಲ್ಲಿ ಅವರು ಕೆನಡಾಕ್ಕೆ ತೆರಳಿದರು. ಆರಂಭಿಕ ವರ್ಷಗಳಲ್ಲಿ ಪತಿ ಬೆಂಬಲಕ್ಕೆ ನಿಂತಿದ್ದರು. ಬಳಿಕ ಅವರ ಸರದಿ. ಮತ್ತೆ ಆರ್ಥಿಕ ಸಂಕಷ್ಟ. ಅದನ್ನು ನಿಭಾಯಿಸಲು ಕಾಫಿ ಶಾಪ್ ಸೇರಿಕೊಂಡರು. ನಂತರ ಕೆಲವೇ ತಿಂಗಳುಗಳಲ್ಲಿ ಸ್ಟಾರ್‌ಬಕ್ಸ್‌ಗೆ ಸ್ಥಳಾಂತರಗೊಂಡರು. ಮತ್ತು ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆ ಏರಿದರು.

ಇಂಡೋ ಕೆನಡಾ ವಿದ್ಯಾರ್ಥಿ ಸೇವೆ ಆರಂಭ: 2015ರಲ್ಲಿ ಮತ್ತೆ ಶೈಕ್ಷಣಿಕ ಸಮಾಲೋಚನೆ ಸಂಸ್ಥೆಗೆ ತೆರಳಿದರು. ಒಂದೂವರೆ ವರ್ಷ ಕೆಲಸ ಮಾಡಿದ ನಂತರ, ವಿದ್ಯಾರ್ಥಿ ಸೇವೆಗಳ ಬೇಡಿಕೆಯನ್ನು ಅವರು ಅರ್ಥಮಾಡಿಕೊಂಡರು. ಎಷ್ಟೇ ಪ್ರಯತ್ನ ಪಟ್ಟರೂ ಯಜಮಾನನಿಗೆ ಲಾಭವಾಗಲಿ ಎಂದುಕೊಂಡಿದ್ದರು. ಆದರೆ, ಬೆಳೆಯಲು ಆಗಲಿಲ್ಲ ಎನಿಸಿತು. ಹಾಗಾಗಿ ನಾನು ರಾಜೀನಾಮೆ ನೀಡಿ 2016ರಲ್ಲಿ ರೂ.2 ಲಕ್ಷದಲ್ಲಿ ಇಂಡೋ ಕೆನಡಾ ವಿದ್ಯಾರ್ಥಿ ಸೇವೆ ಆರಂಭಿಸಿದರು.

₹ 30 ಕೋಟಿ ವಹಿವಾಟು: ಶೀಘ್ರದಲ್ಲೇ ತನ್ನ ಸಂವಹನ ಕೌಶಲ್ಯದಿಂದ ಗ್ರಾಹಕರನ್ನು ಅವರು ಆಕರ್ಷಿಸಿದರು. ಭಾರತೀಯ ವಿದ್ಯಾರ್ಥಿಗಳು ಆಹಾರಕ್ಕಾಗಿ ಪರದಾಡುತ್ತಿರುವುದನ್ನು ಗಮನಿಸಿದ ಅವರು ' ಟೇಕ್‌ ಅವೇ ಎಂಬ ಕಂಪನಿ ಆರಂಭಿಸಿದರು. ಈ ಕಂಪನಿಯ ವಹಿವಾಟು ರೂ.30 ಕೋಟಿಗೂ ಹೆಚ್ಚು. ಅವರು ವಿವಿಧ ದೇಶಗಳ ಗ್ರಾಹಕರನ್ನು ಹೊಂದಿದ್ದಾರೆ. ಆಕೆಯ ಕೆಲಸವನ್ನು ಗಮನಿಸಿದ ಸ್ಥಳೀಯ ಸರ್ಕಾರ ಆಕೆಯನ್ನು ಇಂಡೋ - ಕೆನಡಾ ಚೇಂಬರ್ ಆಫ್ ಕಾಮರ್ಸ್‌ಗೆ ಸಲಹೆಗಾರರನ್ನಾಗಿ ನೇಮಿಸಿತು. ಭಾರತದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಸಮ್ಮೇಳನದ ನೇತೃತ್ವವನ್ನೂ ಕಣ್ಮಣಿ ವಹಿಸಿದ್ದರು.

ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು: ಎಷ್ಟೇ ಕಷ್ಟ ಬಂದರೂ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸಬೇಕೆಂಬುದು ಕಣ್ಮಣಿ ಪೋಷಕರ ಆಸೆಯಂತೆ. ಇಬ್ಬರು ಮಕ್ಕಳಿಗೂ ಸರಿಸಮಾನವಾಗಿ ವಿದ್ಯಾಭ್ಯಾಸ ಕೊಡಿಸಿದರು. ''ನನ್ನ ತಂದೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಅನಾರೋಗ್ಯದ ಕಾರಣ ಅವರು ಬೇಗನೆ ನಿವೃತ್ತಿ ಪಡೆದರು. ಬಳಿಕ ವ್ಯಾಪಾರವನ್ನು ಪ್ರಾರಂಭಿಸಿದರು. ಅಲ್ಲಿ ಅವರು ನಷ್ಟವನ್ನು ಅನುಭವಿಸಿದರು.

ಬಳಿಕ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತ ನನ್ನ ತಾಯಿ ಮತ್ತು ತಂದೆ ನಮ್ಮನ್ನು ಸಾಕಲು ಕಷ್ಟಪಡುತ್ತಿದ್ದರು. ಜೀವನದಲ್ಲಿ ಮುಂದೆ ಸಾಗಲು ಬರೀ ಓದಿದರೆ ಸಾಲದು ಎಂದು ಅಮ್ಮನಿಗೆ ಗೊತ್ತಿತ್ತು. ಅದಕ್ಕೆ ಓದುವ ಜತೆಗೆ ಆಟ, ನಾಟಕ ಎಲ್ಲದಕ್ಕೂ ಪ್ರೋತ್ಸಾಹ ನೀಡಿದರು. ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಅಮ್ಮ ಚಿನ್ನಾಭರಣ ಮಾರುವ ಮೂಲಕ ಶುಲ್ಕ ಪಾವತಿಸಿದ್ದಾರೆ" ಎಂದು ಕಣ್ಮಣಿ ನೆನಪಿಸಿಕೊಳ್ಳುತ್ತಾರೆ.

ಅನುಭವ ತುಂಬಾ ಉಪಯುಕ್ತ: "ನಾನು ಏನೇ ಮಾಡಿದರೂ ಕುಟುಂಬಕ್ಕೆ ಸಮಾನ ಆದ್ಯತೆ ನೀಡುತ್ತೇನೆ. ವಾರಾಂತ್ಯದಲ್ಲಿ ನಾನು ಫೋನ್ ಮುಟ್ಟುವುದಿಲ್ಲ. 20ರ ಹರೆಯದಲ್ಲಿ ವ್ಯಾಪಾರ ಆರಂಭಿಸಿ ವಿಫಲವಾದರೂ, ಆ ಅನುಭವವು ತುಂಬಾ ಉಪಯುಕ್ತವಾಗಿದೆ. ಇಷ್ಟದ ಕ್ಷೇತ್ರದ ಬಗ್ಗೆ ತಿಳಿವಳಿಕೆ, ಪ್ರಾಮಾಣಿಕತೆ, ತಪ್ಪುಗಳನ್ನು ಒಪ್ಪಿಕೊಳ್ಳುವಂಥ ಗುಣಗಳನ್ನು ಅಳವಡಿಸಿಕೊಂಡರೆ ಯಶಸ್ಸು, ಆದಾಯ ಎರಡೂ ಬರುತ್ತದೆ" ಎಂಬುವುದು ಯುವಜನತೆಗೆ ಕಣ್ಮಣಿ ನೀಡುವ ಸಂದೇಶ.

ಇದನ್ನೂ ಓದಿ: ನಾನು ರಾಜಕುಮಾರಿ ಅಲ್ಲ, ಅನುಭವದಿಂದ ಕಲಿತವಳು; ನೈಕಾ ಸಿಇಒ ಅದ್ವೈತ ನಾಯರ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.