ETV Bharat / bharat

ಐಎನ್​ಎಸ್ ವಿಕ್ರಾಂತ್ ಕಾರ್ಯಾರಂಭ: ಕೇಂದ್ರದ ವಿರುದ್ಧ ಕಾಂಗ್ರೆಸ್ ಅಸಮಾಧಾನ - ಐಎನ್​ಎಸ್​ ವಿಕ್ರಾಂತ್ ವಿಮಾನವಾಹಕ ನೌಕೆ

ಐಎನ್​ಎಸ್​ ವಿಕ್ರಾಂತ್ ವಿಮಾನವಾಹಕ ನೌಕೆಯನ್ನು ಕಾರ್ಯಾಚರಣೆಗಿಳಿಸಿದ ಕೇಂದ್ರ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಅಪಸ್ವರ ಎತ್ತಿದೆ. ಐಎನ್​ಎಸ್​ ವಿಕ್ರಾಂತ್ ನಿರ್ಮಾಣವಾಗುವಲ್ಲಿ 1999 ರಿಂದ ಆಡಳಿತದಲ್ಲಿದ್ದ ಎಲ್ಲ ಸರ್ಕಾರಗಳ ಪಾಲಿದೆ ಎಂದು ಅದು ಹೇಳಿದೆ.

ಐಎನ್​ಎಸ್ ವಿಕ್ರಾಂತ್ ಕಾರ್ಯಾರಂಭ: ಕೇಂದ್ರದ ವಿರುದ್ಧ ಕಾಂಗ್ರೆಸ್ ಅಸಮಾಧಾನ
INS Vikrant Commissioning: Congress angry with Centre
author img

By

Published : Sep 2, 2022, 1:50 PM IST

ಮುಂಬೈ: ಭಾರತದ ಮೊದಲ ಸ್ವದೇಶಿ ವಿನ್ಯಾಸದ ಮತ್ತು ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಕಾರ್ಯಾರಂಭದ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಶುಕ್ರವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಐಎನ್‌ಎಸ್ ವಿಕ್ರಾಂತ್ ನಿರ್ಮಾಣವಾಗಿದ್ದು 1999 ರಿಂದ ಎಲ್ಲಾ ಸರ್ಕಾರಗಳ ಸಾಮೂಹಿಕ ಪ್ರಯತ್ನವಾಗಿದೆ ಎಂದು ಪ್ರಧಾನಿ ಒಪ್ಪಿಕೊಳ್ಳುತ್ತಾರೆಯೇ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಭಾರತದ ಪ್ರಥಮ ಸ್ವದೇಶಿ ವಿಮಾನವಾಹಕ ನೌಕೆ ಐಎನ್​ಎಸ್​ ವಿಕ್ರಾಂತ್ 1999 ರಿಂದ ಎಲ್ಲಾ ಸರ್ಕಾರಗಳ ಸಾಮೂಹಿಕ ಪ್ರಯತ್ನದ ಫಲವಾಗಿ ಇಂದು ಕಾರ್ಯಾಚರಣೆ ಆರಂಭಿಸಿದೆ. ಇದನ್ನು ಪ್ರಧಾನಮಂತ್ರಿ ಒಪ್ಪಿಕೊಳ್ಳುವರೇ? 1971 ರ ಯುದ್ಧದಲ್ಲಿ ನಮಗೆ ಉತ್ತಮ ಸೇವೆ ಸಲ್ಲಿಸಿದ ಮೂಲ ಐಎನ್​ಎಸ್​ ವಿಕ್ರಾಂತ್ ಅನ್ನು ಸಹ ನೆನಪಿಸಿಕೊಳ್ಳೋಣ. ತುಂಬಾ ಟೀಕೆಗೊಳಗಾದ ಕೃಷ್ಣ ಮೆನನ್ ಅದನ್ನು ಯುಕೆಯಿಂದ ಭಾರತಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಪ್ರಧಾನಿ ಮೋದಿ ಅವರು ಇಂದು ಕೊಚ್ಚಿಯ ಕೊಚ್ಚಿ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಐಎನ್‌ಎಸ್ ವಿಕ್ರಾಂತ್‌ಗೆ ಚಾಲನೆ ನೀಡಿದರು. ಐಎನ್​ಎಸ್​ ವಿಕ್ರಾಂತ್ 1990 ರ ದಶಕದ ಅಂತ್ಯದಲ್ಲಿ ನಿರ್ಗಮನವಾಗಿತ್ತು ಮತ್ತು ವಿಮಾನವಾಹಕ ನೌಕೆಯ ವಿನ್ಯಾಸ, ನಿರ್ಮಾಣವನ್ನು 2003 ರಲ್ಲಿ ಮಂಜೂರು ಮಾಡಲಾಯಿತು. ನಂತರದ ಐಎನ್​ಎಸ್​ ವಿಕ್ರಾಂತ್ ಅನ್ನು ಕೊಚ್ಚಿಯಲ್ಲಿ ಆಗಸ್ಟ್ 12, 2013 ರಂದು ನಿರ್ಮಾಣ ಮಾಡಲು ಆರಂಭಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.