ETV Bharat / bharat

ಇನ್ಫಿ ಮೂರ್ತಿ ಪುತ್ರಿ ಅಕ್ಷತಾ ಆದಾಯ ತೆರಿಗೆ ವಿವಾದ: ತನಿಖೆಗೆ ಪತಿ ರಿಷಿ ಸುನಕ್​ ಆಗ್ರಹ - ಇನ್ಫೋಸಿಸ್​ನ ಅಕ್ಷತಾ ಮೂರ್ತಿ

ಇನ್ಫೋಸಿಸ್ ನಾರಾಯಣಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರ ಮೇಲೆ ನಾನ್​ ಡೊಮಿನಲ್​ ಆದಾಯಕ್ಕೆ ತೆರಿಗೆ ಕಟ್ಟದೇ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಮಾಧ್ಯಮಗಳಿಗೆ ವಿವರ ಸೋರಿಕೆ ಮಾಡಿದ್ದರ ಬಗ್ಗೆ ತನಿಖೆ ನಡೆಸಲು ಅಕ್ಷತಾರ ಪತಿ, ಬ್ರಿಟನ್‌ನ ವಿತ್ತ ಸಚಿವ ರಿಷಿ ಸುನಕ್​ ಆಗ್ರಹಿಸಿದ್ದಾರೆ.

Akshata Murty's
ರಿಷಿ ಸುನಕ್
author img

By

Published : Apr 10, 2022, 5:59 PM IST

ಲಂಡನ್: ಇನ್ಫೋಸಿಸ್​ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಪುತ್ರಿ, ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್​ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಮೇಲೆ ಕೇಳಿ ಬಂದ ತೆರಿಗೆ ವಂಚನೆ ಆರೋಪ ಮತ್ತು ತೆರಿಗೆ ವಿವರಗಳನ್ನು ಸೋರಿಕೆ ಮಾಡಿದ್ದರ ಬಗ್ಗೆ ತನಿಖೆ ನಡೆಸಲು ರಿಷಿ ಸುನಕ್​ ಇಂಗ್ಲೆಂಡ್​ ಸಂಸತ್ತಿಗೆ ಒತ್ತಾಯಿಸಿದ್ದಾರೆ.

ಅಕ್ಷತಾ ಮೂರ್ತಿ ಅವರ ಸಾಗರೋತ್ತರ ಆದಾಯಕ್ಕೆ ಇಂಗ್ಲೆಂಡ್​ನಲ್ಲಿ ತೆರಿಗೆ ಪಾವತಿಸದ ವಿವರಗಳನ್ನು ಸಂಸದರ ಸಿಬ್ಬಂದಿಯೇ ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ರಿಷಿ ಸುನಕ್​ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಹೇಳಿದ್ದಾರೆ. ಆದರೆ, ಈ ಆರೋಪ ನಿರಾಧಾರ ಎಂದು ಡೌನಿಂಗ್​ ಸ್ಟ್ರೀಟ್​ ತಿರಸ್ಕರಿಸಿದೆ.

ಸಂಸದ ರಿಷಿ ಸುನಕ್​ 2018ರಲ್ಲಿ ಸಂಸದರಾದಾಗ ನೀಡಲಾದ ವೈಯಕ್ತಿಕ ವಿವರಗಳ ಬಗ್ಗೆ ಸಂಸತ್ತಿನ ಕೆಲವೇ ಸಿಬ್ಬಂದಿಗೆ ಮಾತ್ರ ಮಾಹಿತಿ ಇರುತ್ತದೆ. ಹೀಗಾಗಿ ತನ್ನ ಪತ್ನಿಯ ತೆರಿಗೆ ವಿವರಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದರ ಬಗ್ಗೆ ತನಿಖೆ ಮಾಡಬೇಕು ಎಂದು ರಿಷಿ ಸುನಕ್​ ಆಗ್ರಹಿಸಿದ್ದಾರೆ.

ವಿವಾದವೇನು?: ಹಣಕಾಸು ಸಚಿವ ರಿಷಿ ಸುನಕ್​ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಭಾರತದಲ್ಲಿ ಗಳಿಸಿದ ಹಣಕ್ಕೆ ಬ್ರಿಟನ್​ನಲ್ಲಿ ತೆರಿಗೆ ಪಾವತಿಸಿಲ್ಲ. ಅಕ್ಷತಾ ಅವರು ಇನ್ಫೋಸಿಸ್​ನಲ್ಲಿ ಶೇ.0.9 ರಷ್ಟು ಷೇರು ಹೊಂದಿದ್ದಾರೆ. ಅಲ್ಲದೇ, ನೂರಾರು ಕೋಟಿ ರೂ. ಡಿವಿಡೆಂಡ್‌ಗಳನ್ನು ಗಳಿಸುತ್ತಾರೆ. ಈ ಹಣಕ್ಕೆ ಅವರು ಬ್ರಿಟನ್​ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿಲ್ಲ ಎಂದು ವಿವಾದ ಉಂಟಾಗಿದೆ.

ಅಲ್ಲದೇ, ರಿಷಿ ಸುನಕ್​ ಬ್ರಿಟನ್​ನ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದಾರೆ. ಪತ್ನಿ ಅಕ್ಷತಾ ಅವರೇ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ರಿಷಿ ಸುನಕ್​ರ ರಾಜಕೀಯ ಹಾದಿಗೆ ತೊಡಕಾಗಿದೆ.

ತೆರಿಗೆ ಪಾವತಿಗೆ ರೆಡಿ ಎಂದ ಅಕ್ಷತಾ: ತೆರಿಗೆ ವಿವಾದ ಉಂಟಾದ ಬಳಿಕ ಅಕ್ಷತಾ ಮೂರ್ತಿ ಭಾರತದಲ್ಲಿ ಗಳಿಸಿದ ಹಣಕ್ಕೂ ಬ್ರಿಟನ್​ನಲ್ಲಿ ತೆರಿಗೆ ಕಟ್ಟಲಾಗುವುದು ಎಂದು ಘೋಷಿಸಿದ್ದಾರೆ. ಕಾನೂನಾತ್ಮಕವಾಗಿ ನಾನ್​ ಡೊಮಿನಲ್​ ಆದಾಯಕ್ಕೆ ತೆರಿಗೆ ಕಟ್ಟುವ ಅಗತ್ಯವಿಲ್ಲದಿದ್ದರೂ ವಿವಾದ ಇತ್ಯರ್ಥಗೊಳಿಸಲು ತೆರಿಗೆ ಕಟ್ಟಲು ಮುಂದಾಗಿದ್ದಾರೆ.

ಇದನ್ನೂ ಓದಿ: ಸಮೃದ್ಧ ದೇಶಕ್ಕೆ ರೈತರ ಕಲ್ಯಾಣವೇ ಪ್ರಧಾನ: ಕೇಂದ್ರ ಕೃಷಿ ಯೋಜನೆಗಳ ಹೊಗಳಿದ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.