ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಭಾರತದೊಳಗೆ ನುಸುಳುತ್ತಿದ್ದ ಉಗ್ರನ ಯತ್ನ ವಿಫಲವಾಗಿದ್ದು, ಆತನನ್ನು ಬೇಟೆಯಾಡುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ.
ಎಲ್ಒಸಿ ಬಳಿ ಅನುಮಾನಾಸ್ಪದ ಚಲನವಲನ ಗಮನಿಸಿದ ಸೇನಾ ಸಿಬ್ಬಂದಿ ತಕ್ಷಣವೇ ಎಚ್ಚೆತ್ತುಕೊಂಡಿದೆ. ಈ ವೇಳೆ ಉಗ್ರರ ಹಾಗೂ ಸೇನಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಗಡಿಯೊಳಗೆ ನುಸುಳಲೆತ್ನಿಸುತ್ತಿದ್ದ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದಂತೇವಾಡದಲ್ಲಿ 5 ಕೆಜಿ ತೂಕದ ಟಿಫಿನ್ ಬಾಂಬ್ ವಶ: ಅನಾಹುತ ತಪ್ಪಿಸಿದ ಭದ್ರತಾ ಪಡೆ
ಮೃತ ಉಗ್ರನಿಂದ ಎಕೆ -47 ರೈಫಲ್ ವಶಪಡಿಸಿಕೊಳ್ಳಲಾಗಿದ್ದು, ಪೂಂಚ್ ವಲಯದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕಾರ್ಯಾಚರಣೆ ಮುಂದುವರೆದಿದೆ.
ಸೇನಾ ಪಡೆಗಳ ಎಚ್ಚರಿಕೆಯ ಈ ಕ್ರಮವು ಎಲ್ಒಸಿಯಲ್ಲಿ ಯಾವುದೇ ದುಷ್ಕೃತ್ಯವನ್ನು ತಡೆಯುವ ಸಂಕಲ್ಪವನ್ನು ತೋರಿಸುತ್ತದೆ ಎಂದು ಭಾರತೀಯ ಸೇನೆ ಹೇಳಿದೆ.