ಹೈದರಾಬಾದ್: ಭಾರತೀಯ ವಾಯುಪಡೆಗೆ 2022ರ ವೇಳೆಗೆ 36 ರಫೇಲ್ ವಿಮಾನಗಳ ಸೇರ್ಪಡೆಯಾಗಲಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ಶನಿವಾರ ಹೇಳಿದ್ದಾರೆ. ರಫೇಲ್ ಯುದ್ಧ ವಿಮಾನಗಳ ಯೋಜನೆಗೆ ಸಂಬಂಧಿಸಿದಂತೆ ಎಲ್ಲ ತಯಾರಿಗಳು ನಡೆದಿದೆ ಎಂದು ಭದೌರಿಯಾ ತಿಳಿಸಿದ್ದಾರೆ.
ತೆಲಂಗಾಣದ ದುಂಡಿಗಲ್‌ನ ವಾಯುಪಡೆಯ ಅಕಾಡೆಮಿಯಲ್ಲಿ ಸಂಯೋಜಿತ ಪದವಿ ಪರೇಡ್ (ಸಿಜಿಪಿ) ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋವಿಡ್ ಸಂಬಂಧಿ ವಿಚಾರಗಳ ಸಲುವಾಗಿ ಸ್ವಲ್ಪ ಮಟ್ಟಿಗೆ ವಿಳಂಬವಾಗಿದೆ. ಆದರೆ, ರಫೇಲ್ ಯುದ್ಧ ವಿಮಾನ ಸೇರ್ಪಡೆ ವಿಚಾರದಲ್ಲಿ ಗುರಿ ಒಂದೇ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
59 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ 36 ರಫೇಲ್ ಜೆಟ್‌ಗಳನ್ನು ಖರೀದಿಸಲು ಭಾರತವು 2016ರಲ್ಲಿ ಫ್ರಾನ್ಸ್‌ನೊಂದಿಗೆ ಅಂತರ್ ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿತ್ತು. ರಕ್ಷಣಾ ಸಚಿವ ರಾಜನಾಥ ಸಿಂಗ್ ಫೆಬ್ರವರಿಯಲ್ಲಿ 2022ರ ಏಪ್ರಿಲ್ ವೇಳೆಗೆ ದೇಶವು ಸಂಪೂರ್ಣ ಯುದ್ಧ ವಿಮಾನಗಳನ್ನು ಹೊಂದಿರುತ್ತದೆ ಎಂದು ಹೇಳಿದ್ದರು ಎಂದು ಭದೌರಿಯಾ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಪ್ರವಾಹ ನಿರ್ವಹಣೆಗಾಗಿ ಸಮನ್ವಯತೆ ಸಾಧಿಸಲು ಉಭಯ ರಾಜ್ಯಗಳ ತೀರ್ಮಾನ: ಸಿಎಂ
ಇಂಡೋ - ಚೀನಾ ಗಡಿಯಲ್ಲಿನ ಪೂರ್ವ ಲಡಾಖ್ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಭದೌರಿಯಾ ಎರಡೂ ಕಡೆಗಳ ಮಾತುಕತೆ ನಡೆಯುತ್ತಿದೆ. ಘರ್ಷಣೆಯ ಸ್ಥಳಗಳಿಂದ ಎರಡೂ ದೇಶಗಳು ಸೇನೆಯನ್ನು ತೆರೆವುಗೊಳಿಸುವುದು ಅತ್ಯಂತ ಮುಖ್ಯ ಎಂದು ಭದೌರಿಯಾ ಅಭಿಪ್ರಾಯಪಟ್ಟಿದ್ದಾರೆ.