ನವದೆಹಲಿ: ಪ್ರಸಿದ್ಧ ವಿಮಾನಯಾನ ಸಂಸ್ಥೆ ಇಂಡಿಗೋ ಪ್ರಯಾಣಿಕರಿಗೆ ವಿಶೇಷ ಕೊಡುಗೆಯೊಂದನ್ನು ನೀಡುತ್ತಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಲಾಗುವುದು ಎಂದು ಘೋಷಿಸಿದೆ. ಇಂದಿನಿಂದ (ಡಿಸೆಂಬರ್ 23) ಡಿಸೆಂಬರ್ 25ರವರೆಗೆ ಮೂರು ದಿನಗಳ ಕಾಲ ಈ ಸೇಲ್ ನಡೆಯಲಿದೆ.
ದೇಶೀಯ ಪ್ರಯಾಣಕ್ಕೆ ರೂ.2,023 ಮತ್ತು ಅಂತಾರಾಷ್ಟ್ರೀಯ ಪ್ರಯಾಣಕ್ಕೆ 4999ರೂ. ಟಿಕೆಟ್ ದರ ನಿಗದಿ ಪಡಿಸಲಾಗಿದೆ ಎಂದು ಪ್ರಕಟಿಸಿದೆ. ಈ ಟಿಕೆಟ್‌ಗಳು ಜನವರಿ 15 ರಿಂದ ಏಪ್ರಿಲ್ 14, 2023 ರ ನಡುವಿನ ಪ್ರಯಾಣಕ್ಕೆ ಲಭ್ಯವಿರುತ್ತವೆ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.
ಟಿಕೆಟ್‌ಗಳು ಲಭ್ಯವಾಗುವವರೆಗೆ ಈ ಆಫರ್ ಮಾನ್ಯವಾಗಿರುತ್ತದೆ ಎಂದು ಇಂಡಿಗೋ ಬಹಿರಂಗಪಡಿಸಿದೆ. ಈ ವಿಶೇಷ ರಿಯಾಯಿತಿಯನ್ನು ಯಾವುದೇ ಇತರ ಕೊಡುಗೆ, ಪ್ರಚಾರ ಅಥವಾ ಯೋಜನೆಯೊಂದಿಗೆ ಸಂಯೋಜಿಸಲಾಗಿಲ್ಲ. ಅಲ್ಲದೆ, ಇಂಡಿಗೋ ಗುಂಪಿನ ಬುಕಿಂಗ್ ಕೂಡ ಅನ್ವಯಿಸುವುದಿಲ್ಲ. ಗ್ರಾಹಕರು ಹೆಚ್ಚುವರಿ ಕ್ಯಾಶ್‌ಬ್ಯಾಕ್ ಪಡೆಯಬಹುದು ಎಂದು ಎಚ್‌ಎಸ್‌ಬಿಸಿ ಹೇಳಿದೆ.
ವಿಮಾನಯಾನ ಕ್ಷೇತ್ರ ಹಿಂದಿಗಿಂತ ಹೆಚ್ಚು ಚೇತರಿಸಿಕೊಂಡಿರುವುದನ್ನು ಸಂಭ್ರಮಿಸುವ ಅಂಗವಾಗಿ ಈ ಕೊಡುಗೆ ನೀಡಲಾಗಿದೆ. ಹೊಸ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಹೆಚ್ಚಿನ ಜನರು ಪ್ರಯಾಣಿಸಲು ಆಸಕ್ತಿ ತೋರುತ್ತಿದ್ದು, ರಜಾ ಕಾಲದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಈ ಚಳಿಗಾಲದ ಮಾರಾಟವನ್ನು ತರಲಾಗಿದೆ ಎಂದು ಇಂಡಿಗೋದ ಗ್ಲೋಬಲ್ ಸೇಲ್ಸ್ ಮುಖ್ಯಸ್ಥ ವಿನಯ್ ಮಲ್ಹೋತ್ರಾ ಹೇಳಿದ್ದಾರೆ.
ಇಂಡಿಗೋ ಒಟ್ಟು 290 ವಿಮಾನಗಳನ್ನು ಹೊಂದಿದೆ ಮತ್ತು ದಿನಕ್ಕೆ 1600 ವಿಮಾನಗಳನ್ನು ನಿರ್ವಹಿಸುತ್ತದ್ದು, 76 ದೇಶೀಯ ಮತ್ತು 26 ಅಂತಾರಾಷ್ಟ್ರೀಯ ತಾಣಗಳನ್ನು ಹೊಂದಿದೆ.