ETV Bharat / bharat

FIDE ವಿಶ್ವ ರ‍್ಯಾಪಿಡ್ ಚೆಸ್‌: ಕಂಚಿನ ಪದಕ ಗೆದ್ದ ಭಾರತದ ಸವಿತಾಶ್ರೀ ಬಾಸ್ಕರ್ - ವಿಶ್ವ ರ‍್ಯಾಪಿಡ್ ಚೆಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ

FIDE ವಿಶ್ವ ರ‍್ಯಾಪಿಡ್ ಚೆಸ್‌ನಲ್ಲಿ ಭಾರತೀಯ ಚೆಸ್​ ಆಟಗಾರ್ತಿ ಸವಿತಾಶ್ರೀ ಬಾಸ್ಕರ್ ಮಹಿಳಾ ವಿಭಾಗದಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.

Savithashri Baskar
ಕಂಚಿನ ಪದಕ ಗೆದ್ದ ಭಾರತದ ಸವಿತಾಶ್ರೀ ಬಾಸ್ಕರ್
author img

By

Published : Dec 29, 2022, 8:00 PM IST

ಕಜಕಿಸ್ತಾನ: ಇಲ್ಲಿಯ ಅಲ್ಮಾಟಿಯಲ್ಲಿ ನಡೆದ FIDE ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್​ನ​​ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ ವಿಭಾಗದಲ್ಲಿ ಭಾರತದ 15 ವರ್ಷದ ಚೆಸ್​ ಆಟಗಾರ್ತಿ ಮಾಸ್ಟರ್ ಸವಿತಾಶ್ರೀ ಬಾಸ್ಕರ್ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೂರನೇ ಭಾರತೀಯ ಮತ್ತು ಎರಡನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಕ್ಕೂ ಮೊದಲು ಚೆಸ್​ ಮಾಸ್ಟರ್​ ವಿಶ್ವನಾಥ್​ ಆನಂದ ಮತ್ತು ಮಹಿಳಾ ಆಟಗಾರ್ತಿ ಕೊನೇರು ಹಂಪಿ ಪದಕ ಗೆದ್ದಿದ್ದರು. 36ನೇ ಶ್ರೇಯಾಂಕದೊಂದಿಗೆ ಪ್ರಥಮ ಬಾರಿಗೆ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾಗವಹಿಸಿದ ಸವಿತಾ 11 ಸುತ್ತಿನ ಪಂದ್ಯದಗಳಲ್ಲಿ 8 ಗೆಲುವು, ಎರಡು ಡ್ರಾ ಸಾಧಿಸುವ ಮೂಲಕ ಮೂರನೇ ಸ್ಥಾನವನ್ನು ಪಡೆದುಕೊಂಡರು.

ಪಂದ್ಯದ ಒಂಬತ್ತನೇ ಸುತ್ತಿನಲ್ಲಿ ಕಜಕಿಸ್ತಾನದ ಝನ್ಸಾಯಾ ಅಬ್ದುಮಲಿಕ್ ಎಂಬುವವರ ವಿರುದ್ಧ ಸೋಲು ಕಂಡ ಸವಿತಾ 10 ನೇ ಸುತ್ತಿನಲ್ಲಿ ಸಿಂಗಾಪುರದ ಕಿಯಾನ್ಯುನ್ ಗಾಂಗ್ ಅವರನ್ನು ಸೋಲಿಸುವ ಮೂಲಕ ಪುನರಾಗಮನ ಮಾಡಿದರು. ಅಂತಿಮ ಸುತ್ತಿನಲ್ಲಿ ಕಜಕಿಸ್ತಾನದ ದಿನರಾ ಸದುಕಾಸೋವಾ ಅವರೊಂದಿಗೆ ಡ್ರಾ ಮಾಡಿಕೊಳ್ಳುವ ಮೂಲಕ ಅವರು ಅಗ್ರ ಎರಡು ಸ್ಥಾನಗಳಿಗೆ ಏರಲು ಸಾಧ್ಯವಾಗದೇ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಪ್ರಸ್ತುತ ಸವಿತಾ ವಿಶ್ವ ರ‍್ಯಾಂಕಿಂಗ್‌ನಲ್ಲಿ 79ನೇ ಸ್ಥಾನದಲ್ಲಿದ್ದಾರೆ.

ಇನ್ನು ಪ್ಲೇ- ಆಫ್‌ನಲ್ಲಿ ಚೀನಾದ ಟಾನ್ ಝೊಂಗ್ಯಿ ಕಜಕಿಸ್ತಾನದ ಸದುಕಾಸೋವಾ ಅವರನ್ನು ಸೋಲಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಏತನ್ಮಧ್ಯೆ ವಿಶ್ವದ ನಂಬರ್ ಒನ್ ಮ್ಯಾಗ್ನಸ್ ಕಾರ್ಲ್ಸನ್ ಮುಕ್ತ ವಿಭಾಗದ ಪ್ರಶಸ್ತಿಯನ್ನು ಪಡೆದುಕೊಂಡರು. ಟೂರ್ನಿಯಲ್ಲಿ ಭಾರತದ 19 ವರ್ಷದ ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗೈಸಿ ಐದನೇ ಸ್ಥಾನ ಪಡೆದರು. ಶಖ್ರಿಯಾರ್ ಮಮೆಡಿಯಾರೋವ್ (ಅಜೆರ್ಬೈಜಾನ್) ಅವರನ್ನು ಸೋಲಿಸುವ ಮೂಲಕ ಎರಿಗೈಸಿ ಒಂಬತ್ತು ಅಂಕಗಳೊಂದಿಗೆ 13ನೇ ಸುತ್ತನ್ನು ಕೊನೆಗೊಳಿಸಿದರು. ಇತರ ಭಾರತೀಯ ಆಟಗಾರರ ಪೈಕಿ ನಿಹಾಲ್ ಸರಿನ್ 10, ವಿದಿತ್ ಸಂತೋಷ್ ಗುಜರಾತಿ 15, ಸೂರ್ಯ ಶೇಖರ್ ಗಂಗೂಲಿ 20 ಮತ್ತು ರೌನಕ್ ಸಾಧ್ವನಿ 33ನೇ ಸ್ಥಾನವನ್ನು ಪಡೆದರು.

ಇದನ್ನೂ ಓದಿ: ಹಿಜಾಬ್​ಗೆ ವಿರೋಧ ವ್ಯಕ್ತಪಡಿಸಿದ ಇರಾನಿನ್ ಚೆಸ್​​ ಆಟಗಾರ್ತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.