ETV Bharat / bharat

ದೇಶದಲ್ಲಿ 4 ದಿನದ ಬಳಿಕ 20 ಸಾವಿರಕ್ಕಿಂತ ಕಡಿಮೆ ಕೋವಿಡ್‌ ಸೋಂಕಿತರು ಪತ್ತೆ - 20 ಸಾವಿರದಿಂದ ಇಳಿದ ಕೊರೊನಾ ಕೇಸ್​

ದೇಶದಲ್ಲಿ ಕೊರೊನಾ ಇಂದು ಅಲ್ಪ ಇಳಿಕೆ ಕಂಡಿದೆ. ಸತತ 4 ದಿನಗಳಲ್ಲಿ 20 ಸಾವಿರಕ್ಕೂ ಅಧಿಕ ಕೇಸುಗಳು ದಾಖಲಾಗಿದ್ದವು.

india-covid report
4 ದಿನದ ಬಳಿಕ 20 ಸಾವಿರದಿಂದ ಇಳಿದ ಕೊರೊನಾ
author img

By

Published : Jul 18, 2022, 9:52 AM IST

ನವದೆಹಲಿ: ದೇಶದಲ್ಲಿ ನಾಲ್ಕು ದಿನಗಳ ಬಳಿಕ ಕೋವಿಡ್​ ಪ್ರಕರಣಗಳ ಸಂಖ್ಯೆ 20 ಸಾವಿರಕ್ಕಿಂತ ಕೆಳಗಿಳಿದಿದೆ. ಕಳೆದ 24 ಗಂಟೆಗಳಲ್ಲಿ 16,935 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ಅವಧಿಯಲ್ಲಿ 51 ಮಂದಿ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 5,25,751ಕ್ಕೆ ಏರಿಕೆಯಾಗಿದೆ.

ದೇಶದಲ್ಲೀಗ 1,44,264 ಸಕ್ರಿಯ ಪ್ರಕರಣಗಳಿವೆ. ಒಂದೇ ದಿನದಲ್ಲಿ 16,069 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,30,97,510ಕ್ಕೇರಿದೆ. ಸಾವಿನ ಪ್ರಮಾಣ ಶೇ.1.20 ರಷ್ಟಿದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇ. 98.47 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೈನಂದಿನ ಪಾಸಿಟಿವಿಟಿ ದರ ಶೇ. 6.48 ಮತ್ತು ಸಾಪ್ತಾಹಿಕ ಪಾಸಿಟಿವಿಟಿ ದರ ಶೇ.4.58ರಷ್ಟಿದೆ. 24 ಗಂಟೆ ಅವಧಿಯಲ್ಲಿ 2,61,470 (ಶೇ.86.96) ಜನರಿಗೆ ಕೊರೊನಾ ಟೆಸ್ಟ್​ ಮಾಡಲಾಗಿದೆ. ನಿನ್ನೆ ಒಂದೇ ದಿನದಲ್ಲಿ 4,46,671 ಡೋಸ್​ ಕೊರೊನಾ ಲಸಿಕೆ ನೀಡುವ ಮೂಲಕ ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಈವರೆಗೆ 200 ಕೋಟಿಗೂ ಅಧಿಕ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ನಿಲ್ಲದ ಗುಂಡಿನ ದಾಳಿ: ಮಾಲ್‌ನಲ್ಲಿ ನಾಲ್ವರು ಬಲಿ, ಇಬ್ಬರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.