ವಿಶಾಖಪಟ್ಟಣಂ(ಆಂಧ್ರಪ್ರದೇಶ):ಭಾರತೀಯ ನೌಕಾಪಡೆಯ ಅತ್ಯಂತ ಹಳೆಯ ಹೈಡ್ರೋಗ್ರಾಫಿಕ್ ಸರ್ವೆ ಹಡಗು ಐಎನ್ಎಸ್ ಸಂಧ್ಯಾಕ್ಗೆ ಜೂನ್ 4 ರಂದು ವಿಶಾಖಪಟ್ಟಣಂನ ನೇವಲ್ ಡಾಕ್ ಯಾರ್ಡ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿದಾಯ ಹೇಳಲಾಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಈಸ್ಟರ್ನ್ ನೇವಲ್ ಕಮಾಂಡ್‌ನ ಪ್ರಸ್ತುತ ಧ್ವಜ ಅಧಿಕಾರಿ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಅಜೇಂದ್ರ ಬಹದ್ದೂರ್ ಸಿಂಗ್ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು.
ನಾಲ್ಕು ದಶಕಗಳ ಸೇವೆಯ ಅವಧಿಯಲ್ಲಿ, 'ಐಎನ್ಎಸ್ ಸಂಧ್ಯಾಕ್' ಭಾರತೀಯ ಪರ್ಯಾಯ ದ್ವೀಪದ ಅಂಡಮಾನ್ ಸಮುದ್ರದ ಪಶ್ಚಿಮ ಮತ್ತು ಪೂರ್ವ ಕರಾವಳಿಗಳಲ್ಲಿ 200 ಕ್ಕೂ ಹೆಚ್ಚು ಪ್ರಮುಖ ಹೈಡ್ರೋಗ್ರಾಫಿಕ್ ಸಮೀಕ್ಷೆಗಳನ್ನು ಕೈಗೊಂಡಿದೆ. ನೆರೆಯ ರಾಷ್ಟ್ರಗಳಲ್ಲಿ ಸಹ ಸಮೀಕ್ಷೆಗಳನ್ನು ನಡೆಸಿದೆ.
ಮೆಡಿಕಲ್, ಇಂಜಿನಿಯರಿಂಗ್ ಸೀಟ್ಗಾಗಿ ಕನಿಷ್ಠ ಪರೀಕ್ಷೆ ಅಂಕಕ್ಕಾಗಿ ಸಿಇಟಿ ಪರೀಕ್ಷೆ: ಅಶ್ವತ್ಥ್ ನಾರಾಯಣ್