ETV Bharat / bharat

ಭಾರಿ ಹಿಮಪಾತದ ನಡುವೆಯೂ ಗರ್ಭಿಣಿಯನ್ನ ಆಸ್ಪತ್ರೆಗೆ ದಾಖಲಿಸಿದ ಭಾರತೀಯ ಸೇನೆ

author img

By

Published : Jan 12, 2023, 5:46 PM IST

Updated : Jan 12, 2023, 7:01 PM IST

ಸ್ಟ್ರೆಚರ್​ ಮೂಲಕ ಮಹಿಳೆ ಹೊತ್ತುಕೊಂಡು ಆಸ್ಪತ್ರೆಗೆ ದಾಖಲು - ಹಿಮಪಾತದಿಂದಾಗಿ ಸಂಪೂರ್ಣವಾಗಿ ಸಂಚಾರ ಅಸ್ತವ್ಯಸ್ತ - ಕುಟುಂಬಸ್ಥರು ಮತ್ತು ವೈದ್ಯರಿಂದ ಕೃತಜ್ಞತೆ.

indian-army-evacuates-pregnant-woman-amid-heavy-snow
ಭಾರೀ ಹಿಮಪಾತದ ನಡುವೆಯು ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಭಾರತೀಯ ಸೇನೆ
ಭಾರಿ ಹಿಮಪಾತದ ನಡುವೆಯೂ ಗರ್ಭಿಣಿಯನ್ನ ಆಸ್ಪತ್ರೆಗೆ ದಾಖಲಿಸಿದ ಭಾರತೀಯ ಸೇನೆ

ಕಲರೂಸ್(ಜಮ್ಮು ಮತ್ತು ಕಾಶ್ಮೀರ):​ ಜಮ್ಮು ಮತ್ತು ಕಾಶ್ಮೀರದ ಉತ್ತರ ಜಿಲ್ಲೆಯ ಬಾರಾಮುಲ್ಲಾದ ಬನ್ಯಾರ ಪ್ರದೇಶದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭೀಣಿಯನ್ನು ಭಾರಿ ಹಿಮಪಾತದ ನಡುವೆ ಭಾರತೀಯ ಸೇನಾ ಪಡೆ ಸ್ಟ್ರೆಚರ್​ನಲ್ಲಿ ಮಹಿಳೆಯನ್ನು ಹೊತ್ತುಕೊಂಡು ಆಸ್ಪತ್ರೆಗೆ ದಾಖಲಿಸಿದೆ.

ಬುಧವಾರ ರಾತ್ರಿ 8.30ಕ್ಕೆ ಸರ್ಕುಲಿ ಗ್ರಾಮದ ಸರಪಂಚ್​ನಿಂದ ತುರ್ತು ಕರೆ ಸ್ವೀಕರಿಸದ ಸೇನಾ ತಂಡವು, ಗರ್ಭಿಣಿ ಮಹಿಳೆಯ ಸ್ಥಿತಿ ಬಹಳ ಗಂಭೀರವಾಗಿದ್ದು, ಆಸ್ಪತ್ರೆಗೆ ತಲುಪಿಸುವಂತೆ ಸೇನೆ ಬಳಿ ವಿನಂತಿಸಿಕೊಂಡರು. ಹಿಮಪಾತದಿಂದಾಗಿ ಸಂಪೂರ್ಣವಾಗಿ ಸಂಚಾರ ಅಸ್ತವ್ಯಸ್ತವಾಗಿದ್ದು, ಮಹಿಳೆ ಇರುವ ಸ್ಥಳಕ್ಕೆ ಯಾವುದೇ ವಾಹನಗಳು ಸಂಚರಿಸಲು ಸಾಧ್ಯವಿರಲಿಲ್ಲ.

ಹಾಗಾಗೀ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಭಾರತೀಯ ಸೇನಾ ಸಿಬ್ಬಂದಿಯು ಮಹಿಳೆ ಇರುವ ಜಾಗಕ್ಕೆ ತಲುಪಿ ತಕ್ಷಣವೇ, ಸ್ಟ್ರೆಚರ್​ ಮೂಲಕ ಮಹಿಳೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಹಿಮಪಾತದ ನಡುವೆಯು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಿಸಿದ್ದಾರೆ. ಭಾರತೀಯ ಸೇನೆಯ ಸಮಯೋಚಿತ ಕಾರ್ಯದಿಂದಾಗಿ ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಭಾರತೀಯ ಸೇನೆಗೆ ಮಹಿಳೆಯ ಕುಟುಂಬಸ್ಥರು ಮತ್ತು ವೈದ್ಯರು ಕೃತಜ್ಞತೆ ಸಲ್ಲಿಸಿದರು.

ಹಿಮಪಾತದಿಂದಾಗಿ ಕಾರ್ಮಿಕ ಸಾವು: ಜಮ್ಮು ಮತ್ತು ಕಾಶ್ಮೀರದ ಗಂದರ್​ಬಾಲ್​ ಜಿಲ್ಲೆಯ ಸೋನಾಮಾರ್ಗ್​ನಲ್ಲಿ ಗುರುವಾರ ಹಿಮಕುಸಿತದಿಂದಾಗಿ ಕಾರ್ಮಿಕ ​ಸಾವಾನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಬಲ್​ ಪ್ರದೇಶದ ಬಳಿ ಝೋಜಿಲಾ ಸುರಂಗದ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಡೆಯುವ ಪ್ರದೇಶದ ಮೇಲೆ ಹಿಮಪಾತ ಸಂಭವಿಸಿದೆ ಇದರಿಂದಾಗಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ.

ಉತ್ತರ ಭಾರತದ ಜಮ್ಮು ಮತ್ತು ಕಾಶ್ಮೀರ, ಲಡಾಖ್,​ ಹಿಮಾಚಲ ಪ್ರದೇಶ ಮತ್ತು ಉತ್ತರಾಖಾಂಡದಲ್ಲಿ ಜನವರಿ 11 ರಿಂದ 13 ನಡುವೆ ಮಳೆ ಮತ್ತು ಹಿಮಪಾತವಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುನ್ಸೂಚನೆ ಪ್ರಕಾರ, ಭಾರಿ ಹಿಮಪಾತದಿಂದಾಗಿ ಮರಗಳು ಮತ್ತು ಬೆಟ್ಟಗಳು ಹಿಮದಿಂದ ಆವೃತ್ತವಾಗಿದ್ದು, ಕನಿಷ್ಠ ತಾಪಮಾನ 1 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. ಜನವರಿ 13 ರಂದು ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆಯಿದೆ. ಪಾದರಸವು -3 ಡಿಗ್ರಿಯಷ್ಟು ತಾಪಮಾನ ಇಳಿಯಬಹುದು ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ. ಉತ್ತರ ಭಾರತದಲ್ಲಿ ಜನವರಿ 14 ರಿಂದ 19 ರವರೆ ತೀವ್ರವಾದ ಚಳಿ ಇರಲಿದೆ ಎಂದು ಹವಾಮಾನ ತಜ್ಞರು ಗುರುವಾರ ತಿಳಿಸಿದ್ದಾರೆ.

ಚಳಿಯಲ್ಲಿ ನಡುಗುತ್ತಿರುವ ರಾಜಧಾನಿ: ಕಳೆದ 23 ವರ್ಷಗಳ ಇತಿಹಾಸದಲ್ಲಿ ರಾಜಧಾನಿಯಲ್ಲಿ ಅತ್ಯಂತ ತೀವ್ರವಾದ ಚಳಿ ದಾಖಲಾಗಿದೆ. ವಿಪರೀತ ಚಳಿಯಿಂದಾಗಿ ಆಸ್ಪತ್ರೆಯಲ್ಲಿ ಉಸಿರಾಟ ಮತ್ತು ಹೃದಯ ಸಂಬಂಧಿ ಕಾಯಿಲೆಯ ರೋಗಿಗಳ ಸಂಖ್ಯೆಯು ಹೆಚ್ಚಾಗುತ್ತಿದೆ ಎಂದ ಸರ್​ ಗಂಗಾರಾಮ್​ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಜೊತಗೆ, ಕೊರೆಯುವ ಚಳಿಗೆ ಮೆದುಳಿನ ಪಾರ್ಶ್ವವಾಯು ಮತ್ತು ಮೆದುಳಿನಲ್ಲಿ ರಕ್ತಸ್ರಾವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹಿರಿಯ ನರ ವಿಜ್ಞಾನಿ ಡಾ. ಸಿಎಸ್​ ಅಗರ್ವಾಲ್​ ತಿಳಿಸಿದ್ದಾರೆ.

ಅಧಿಕ ರಕ್ತತೊತ್ತಡದಿಂದ ಬಳಲುತ್ತಿರುವ ಜನರು ತಣ್ಣನೆಯ ಸ್ಥಳಗಳಿಗೆ ಪ್ರಯಾಣಿಸಿದಾಗ, ಅವರ ದೇಹದಲ್ಲಿ ಆಮ್ಲಜನಕದ ಮಟ್ಟವು ಕಡಿಮೆಯಾಗುತ್ತದೆ. ಇದರಿಂದಾಗಿ ಮೆದುಳಿನ ಸ್ಟ್ರೋಕ್​ ಮತ್ತು ಮೆದುಳಿನ ರಕ್ತಸ್ರಾವ ಉಂಟಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಆಂಬ್ಯುಲೆನ್ಸ್​ ಸಿಗದೇ ಕೈಗಾಡಿಯಲ್ಲೇ ಅನಾರೋಗ್ಯಪೀಡಿತ ಪತ್ನಿಯ ಆಸ್ಪತ್ರೆಗೆ ಕರೆದೊಯ್ದ ಪತಿ

Last Updated : Jan 12, 2023, 7:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.