ETV Bharat / bharat

ಶೀಘ್ರದಲ್ಲೇ ಭಾರತ ಬಾಹ್ಯಾಕಾಶ 4.0ರ ಭಾಗವಾಗಲಿದೆ: ಡಾ. ವಿಜಯ್ ಕುಮಾರ್ ಸಾರಸ್ವತ್ - ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್

ಹೆಸರಾಂತ ವಿಜ್ಞಾನಿ ಮತ್ತು ಡಿಆರ್‌ಡಿಒ ಮಾಜಿ ಮಹಾನಿರ್ದೇಶಕ ವಿಜಯ್ ಕುಮಾರ್ ಸಾರಸ್ವತ್ ಅವರು ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಮತ್ತು ಈ ಸಾಧನೆಯು ಜಾಗತಿಕ ಬಾಹ್ಯಾಕಾಶ ಆರ್ಥಿಕತೆ 4.0 ನಲ್ಲಿ ಭಾರತವನ್ನು ಮುಂಚೂಣಿಗೆ ತರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Dr Vijay Kumar Saraswat
ವಿಜಯ್ ಕುಮಾರ್ ಸಾರಸ್ವತ್
author img

By ETV Bharat Karnataka Team

Published : Aug 24, 2023, 7:03 AM IST

ನವದೆಹಲಿ : ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದೆ. ಇಸ್ರೋದ ಐತಿಹಾಸಿಕ ಸಾಧನೆಯನ್ನು ಖ್ಯಾತ ವಿಜ್ಞಾನಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಮಹಾನಿರ್ದೇಶಕ (ಡಿಜಿ) ಡಾ. ವಿಜಯ್ ಕುಮಾರ್ ಸಾರಸ್ವತ್ ಅವರು ಶ್ಲಾಘಿಸಿದ್ದಾರೆ. ಜೊತೆಗೆ, ಭಾರತವು ಜಾಗತಿಕವಾಗಿ ಹೊರಹೊಮ್ಮುತ್ತಿರುವ ಬಾಹ್ಯಾಕಾಶ ಆರ್ಥಿಕತೆಯ ಭಾಗವಾಗಲು ಮುನ್ನುಗ್ಗುತ್ತಿದೆ ಎಂದು ಹೇಳಿದರು.

'ಈಟಿವಿ ಭಾರತ' ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಭಿಪ್ರಾಯ ಹಂಚಿಕೊಂಡ ಸಾರಸ್ವತ್, "ಭಾರತವು ತನ್ನ ಸ್ಪರ್ಧಾತ್ಮಕತೆಯೊಂದಿಗೆ ಜಾಗತಿಕ ಬಾಹ್ಯಾಕಾಶ ಆರ್ಥಿಕತೆ 4.0 ನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸ್ಪೇಸ್ 4.0 ಬಾಹ್ಯಾಕಾಶ ಕ್ಷೇತ್ರದ ವಿಕಸನವು ಹೊಸ ಯುಗವನ್ನೇ ಪ್ರತಿನಿಧಿಸುತ್ತದೆ, ಈ ಯುಗವು ಸರ್ಕಾರಗಳು, ಖಾಸಗಿ ವಲಯ, ಸಮಾಜ ಮತ್ತು ರಾಜಕೀಯದ ನಡುವಿನ ಪರಸ್ಪರ ಹೊಂದಾಣಿಕೆಯ ಮೂಲಕ ತೆರೆದುಕೊಳ್ಳುತ್ತದೆ" ಎಂದಿದ್ದಾರೆ.

"ನಮ್ಮ ಎಲ್ಲಾ ಮಿಷನ್‌ಗಳು ಕಡಿಮೆ ವೆಚ್ಚದಲ್ಲಿದ್ದು, ಆದರೂ ನಾವು ಯಶಸ್ಸು ಗಳಿಸುತ್ತಿದ್ದೇವೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಉಪಗ್ರಹವನ್ನು ಉಡಾವಣೆ ಮಾಡಬಹುದು ಎನ್ನುವುದನ್ನು ಭಾರತ ತೋರಿಸಿಕೊಟ್ಟಿದೆ. ಹಾಗೆಯೇ, ಬಾಹ್ಯಾಕಾಶ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಪ್ರಮುಖ ದೇಶಗಳೊಂದಿಗೆ ನಾವು ಸಹಯೋಗ ಹೊಂದಿದ್ದೇವೆ. ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಬದಲಾವಣೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಬಾಹ್ಯಾಕಾಶ ಯಾತ್ರೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಪ್ರಚೋದಿಸಲಾಗಿದೆ. ನಾವು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ನೀಡುತ್ತಿದ್ದೇವೆ. ಹೆಚ್ಚಿನ ಯುವಕರು ಭವಿಷ್ಯದಲ್ಲಿ ಬಾಹ್ಯಾಕಾಶ ಇಂಜಿನಿಯರ್‌ಗಳಾಬೇಕೆಂದು ಬಯಸುತ್ತಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ : Chandrayaan-3 ಸಾಫ್ಟ್ ಲ್ಯಾಂಡಿಂಗ್ ಯಶಸ್ವಿ: ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ, ಹೆಚ್​ಡಿಡಿ.. ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ

ಚಂದ್ರಯಾನ 3 ರ ಯಶಸ್ವಿ ಲ್ಯಾಂಡಿಂಗ್ ಉಲ್ಲೇಖಿಸಿ ಮಾತನಾಡಿದ ಅವರು, "ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ 3 ನ ಸಾಫ್ಟ್ ಲ್ಯಾಂಡಿಂಗ್ ಕಾರ್ಯಾಚರಣೆಯು ದೇಶಕ್ಕೆ ಸ್ವಾಯತ್ತತೆಯನ್ನು ತಂದುಕೊಡುತ್ತದೆ. ಈ ಕಾರ್ಯಾಚರಣೆಯ ತಯಾರಿಯು ಅತ್ಯುತ್ತಮವಾಗಿದ್ದು, ಇದವರೆಗೂ ಯಾವುದೇ ರಾಷ್ಟ್ರವು ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಲ್ಯಾಂಡಿಂಗ್​ ಮಾಡಿಲ್ಲ. ವಿಕ್ರಮ್ ಲ್ಯಾಂಡರ್‌ ಲ್ಯಾಂಡಿಂಗ್ ಪ್ರಕ್ರಿಯೆಯು ತುಂಬಾ ಸಂಕೀರ್ಣವಾಗಿತ್ತು. ಆದ್ರೆ, ಇಸ್ರೋ ವಿಜ್ಞಾನಿಗಳ ಪ್ರಯತ್ನ ಫಲಕೊಟ್ಟಿದೆ. ತಂತ್ರಜ್ಞಾನದ ಪುನರುತ್ಪಾದನೆ ಹಾಗೂ ಬಹಳಷ್ಟು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅಳವಡಿಕೆಯಿಂದ ಮಿಷನ್ ಯಶಸ್ವಿಯಾಗಿದೆ. ಪರಿಣಾಮ, ನಾವು ಉತ್ತಮ ಫಲಿತಾಂಶ ಕಾಣಬಹುದು ಎಂಬ ಭರವಸೆ ಹೊಂದಿದ್ದೇವೆ" ಎಂದರು.

ಮುಂದಿನ ದಿನಗಳಲ್ಲಿ ಭಾರತವು ಕೈಗೊಳ್ಳಲಿರುವ ಮಿಷನ್‌ ಕಾರ್ಯಾಚರಣೆ ಬಗ್ಗೆ ಮಾತನಾಡಿದ ಅವರು, "ಚಂದ್ರಯಾನ 3 ಮುಂದೆ ನಡೆಸಲಿರುವ ಅನೇಕ ಚಂದ್ರಯಾನಗಳಿಗೆ ಅಡಿಪಾಯ ಹಾಕಿದೆ. ನಾವು ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಯೋಜಿಸುತ್ತಿದ್ದೇವೆ. ಅಷ್ಟೇ ಅಲ್ಲದೆ, ಮಂಗಳಯಾನ ಮತ್ತು ಶುಕ್ರ ಗ್ರಹದ ಮೇಲೆ ಸಹ ಮತ್ತಷ್ಟು ಕೆಲಸ ಮಾಡಲಿದ್ದೇವೆ. ಕಮಾಂಡ್, ಕಂಟ್ರೋಲ್, ಟ್ರ್ಯಾಕಿಂಗ್, ಸಿಸ್ಟಂಗಳ ಉಡಾವಣೆ ಮತ್ತು ಉಪಗ್ರಹಗಳ ಕುಶಲತೆಗಾಗಿ ಆಳವಾದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ" ಎಂದರು.

ಇದನ್ನೂ ಓದಿ : ಶತಕೋಟಿ ವರ್ಷಗಳಿಂದ ಸೂರ್ಯನ ಬೆಳಕನ್ನೇ ಕಾಣದ ಚಂದ್ರನ ದಕ್ಷಿಣ ಧ್ರುವ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.