ನವದೆಹಲಿ: ರಷ್ಯಾ ದಾಳಿಯಿಂದ ತೀವ್ರ ತೊಂದರೆಗೊಳಗಾಗಿರುವ ಯುದ್ಧಪೀಡಿತ ಉಕ್ರೇನ್ಗೆ ಇದೀಗ ಭಾರತ ಮಾನವೀಯ ದೃಷ್ಟಿಯಿಂದ ನೆರವು ನೀಡಲು ಮುಂದಾಗಿದ್ದು, ಪ್ರಮುಖ ಔಷಧಗಳು ಹಾಗೂ ಅಗತ್ಯವಸ್ತುಗಳನ್ನು ರವಾನಿಸಿದೆ. ಉಕ್ರೇನ್ನ ನೆರೆರಾಷ್ಟ್ರ ಪೋಲೆಂಡ್ ಮೂಲಕ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಭಾರತ ನಿರ್ಧರಿಸಿದೆ.
-
India🇮🇳 is sending humanitarian aid and medical supplies to war-hit #Ukraine
— PIB in Maharashtra 🇮🇳 (@PIBMumbai) March 2, 2022 " class="align-text-top noRightClick twitterSection" data="
A special Indian Air Force aircraft carrying relief material from Hindon airbase near Delhi will reach #Bucharest later this evening pic.twitter.com/Uylz6eefTd
">India🇮🇳 is sending humanitarian aid and medical supplies to war-hit #Ukraine
— PIB in Maharashtra 🇮🇳 (@PIBMumbai) March 2, 2022
A special Indian Air Force aircraft carrying relief material from Hindon airbase near Delhi will reach #Bucharest later this evening pic.twitter.com/Uylz6eefTdIndia🇮🇳 is sending humanitarian aid and medical supplies to war-hit #Ukraine
— PIB in Maharashtra 🇮🇳 (@PIBMumbai) March 2, 2022
A special Indian Air Force aircraft carrying relief material from Hindon airbase near Delhi will reach #Bucharest later this evening pic.twitter.com/Uylz6eefTd
ರಷ್ಯಾ ದಾಳಿಯಿಂದ ತತ್ತರಿಸಿ ಹೋಗಿರುವ ಉಕ್ರೇನ್ ಈಗಾಗಲೇ ಪ್ರಮುಖ ದೇಶಗಳಿಂದ ಮಾನವೀಯ ನೆರವು ಕೇಳಿದ್ದು, ಭಾರತದ ಮುಂದೆ ಕೂಡ ತನ್ನ ಸಂಕಷ್ಟ ಹೇಳಿಕೊಂಡಿತ್ತು. ಈ ವೇಳೆ ಅಗತ್ಯ ನೆರವು ನೀಡುವುದಾಗಿ ಕೇಂದ್ರ ಘೋಷಣೆ ಮಾಡಿತ್ತು. ಇದೇ ವಿಷಯವಾಗಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿತ್ತು.
ಇದನ್ನೂ ಓದಿ: ತಾಜ್ಮಹಲ್ಗೆ ಬಂದು ಪಾಕ್ ಪರ ಘೋಷಣೆ; ಯುವಕನಿಗೆ ಥಳಿಸಿ ಪೊಲೀಸರಿಗೊಪ್ಪಿಸಿದ ಜನರು
ಕಳೆದ ಏಳು ದಿನಗಳಿಂದ ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದ್ದು, ಪ್ರಮುಖ ಎಲ್ಲ ನಗರಗಳ ಮೇಲೆ ನಿರಂತರ ಬಾಂಬ್, ಕ್ಷಿಪಣಿ ದಾಳಿ ನಡೆಸುತ್ತಿರುವ ಕಾರಣ ಸಾವಿರಾರು ಜನರು ಈಗಾಗಲೇ ತಮ್ಮ ಪ್ರಾಣ ಕಳೆದುಕೊಂಡಿದ್ದು, ಅಷ್ಟೇ ಪ್ರಮಾಣದಲ್ಲಿ ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.