ನವದೆಹಲಿ: ಭಾರತದಲ್ಲಿ ಹೊಸದಾಗಿ 31,222 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3,30,58,843ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 290 ಜನರು ವೈರಸ್ಗೆ ಬಲಿಯಾಗಿದ್ದು, ಮೃತರ ಸಂಖ್ಯೆ 4,41,042 ಆಗಿದೆ.
ನಿನ್ನೆ 42,942 ಜನರು ವೈರಸ್ನಿಂದ ಗುಣಮುಖರಾಗಿದ್ದು, ಈವರೆಗೆ 3,22,24,937 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ 3,92,864 ಸಕ್ರಿಯ ಪ್ರಕರಣಗಳಿವೆ.
ಸೆಪ್ಟೆಂಬರ್ 6 ರಂದು 15,26,056 ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ನಿನ್ನೆವರೆಗೆ 56,31,89,348 ಸ್ಯಾಂಪಲ್ಗಳನ್ನು ಟೆಸ್ಟ್ ಮಾಡಲಾಗಿದೆ. ಈವರೆಗೆ 69,90,62,776 ವ್ಯಾಕ್ಸಿನ್ ಡೋಸ್ಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಕೇರಳದಲ್ಲಿ ನಿಫಾ ಭೀತಿ: ಬಾವಲಿ - ಮೇಕೆಯ ಮಾದರಿ ಸಂಗ್ರಹಿಸಿದ ಪಶುಸಂಗೋಪನಾ ಇಲಾಖೆ