ETV Bharat / bharat

ಕಳೆದ 24 ಗಂಟೆಯಲ್ಲಿ 17 ಸಾವಿರದ ಗಡಿ ದಾಟಿದ ಕೋವಿಡ್ ಸಂಖ್ಯೆ!

ದೇಶದಲ್ಲಿ 17 ಸಾವಿರಕ್ಕೂ ಹೆಚ್ಚು ಕೋವಿಡ್​ ಪ್ರಕರಣಗಳು ಕಂಡು ಬಂದಿದ್ದು, 29 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

India reports fresh Covid cases, India reports covid death cases, India reports covid Active cases, India reports covid recovery cases, India reports covid vaccine doses, ಭಾರತವು ಹೊಸ ಕೋವಿಡ್ ಪ್ರಕರಣಗಳ ವರದಿ, ಭಾರತವು ಕೋವಿಡ್ ಸಾವಿನ ಪ್ರಕರಣಗಳ ವರದಿ, ಭಾರತವು ಕೋವಿಡ್ ಸಕ್ರಿಯ ಪ್ರಕರಣಗಳ ವರದಿ, ಭಾರತವು ಕೋವಿಡ್ ಚೇತರಿಕೆ ಪ್ರಕರಣಗಳ ವರದಿ, ಭಾರತವು ಕೋವಿಡ್ ಲಸಿಕೆ ಪ್ರಮಾಣ ವರದಿ.
ಆರೋಗ್ಯ ಸಚಿವಾಲಯ
author img

By

Published : Jul 2, 2022, 10:55 AM IST

ನವದೆಹಲಿ: ಭಾರತದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೋವಿಡ್ ಸೋಂಕಿತರ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 17,092 ಹೊಸ ಕೇಸ್​​​ಗಳು ದೃಢಪಟ್ಟಿದ್ದು, 29 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದೊಂದು ದಿನದಲ್ಲಿ 14,684 ಜನರು ಕೋವಿಡ್​​ನಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಈವರೆಗೆ ಒಟ್ಟು 4,28,51,590 ಜನರು ಗುಣಮುಖರಾಗಿದ್ದಾರೆ. ಸದ್ಯಕ್ಕೆ ದೇಶದಲ್ಲಿ 1,09,568 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸಾವಿನ ಸಂಖ್ಯೆ 5,25,168 ಕ್ಕೆ ಏರಿಕೆಯಾಗಿದೆ.

ಓದಿ: ರಾಜ್ಯದಲ್ಲಿಂದು 1,073 ಮಂದಿಗೆ ಕೋವಿಡ್‌ ಸೋಂಕು ದೃಢ, ಒಂದು ಸಾವು

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಇಲ್ಲಿಯವರೆಗೆ 86.32 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಶುಕ್ರವಾರ 4,12,570 ಮಂದಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದೆ. ಪ್ರಸ್ತುತ ಚೇತರಿಕೆ ಪ್ರಮಾಣವು ಪ್ರಸ್ತುತ ಶೇ 98.54 ರಷ್ಟಿದ್ದು, ದೈನಂದಿನ ಪಾಸಿಟಿವಿಟಿ ದರವು ಶೇ 4.14 ರಷ್ಟಿದೆ. ಇಲ್ಲಿಯವರೆಗೆ 197.84 ಕೋಟಿ ಕೊರೊನಾ ಡೋಸ್​ಗಳನ್ನು ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.