ETV Bharat / bharat

ದೇಶದಲ್ಲಿ ಹೊಸದಾಗಿ 15,981 ಸೋಂಕಿತರು ಪತ್ತೆ.. ಕೇರಳದಲ್ಲೇ 8,867 ಕೇಸ್ ವರದಿ - Health ministry

ದೇಶದಲ್ಲಿನ 3,40,53,573 ಸೋಂಕಿತರ ಪೈಕಿ ಶೇ.98.08 ರಷ್ಟು ಅಂದರೆ 3,33,99,961 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ.

ದೇಶದಲ್ಲಿ ಹೊಸದಾಗಿ 15,981 ಸೋಂಕಿತರು ಪತ್ತೆ
ದೇಶದಲ್ಲಿ ಹೊಸದಾಗಿ 15,981 ಸೋಂಕಿತರು ಪತ್ತೆ
author img

By

Published : Oct 16, 2021, 10:34 AM IST

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 15,981 ಮಂದಿ ಕೊರೊನಾ​ ಸೋಂಕಿತರು ಪತ್ತೆಯಾಗಿದ್ದು, 166 ಮಂದಿ ಮೃತಪಟ್ಟಿದ್ದಾರೆ. ಆದರೆ ಈ ಪೈಕಿ ಕೇರಳ ರಾಜ್ಯವೊಂದರಲ್ಲೇ 8,867 ಕೇಸ್​ ಹಾಗೂ 67 ಸಾವು ವರದಿಯಾಗಿದೆ.

ಇದೀಗ ದೇಶದಲ್ಲಿನ ಒಟ್ಟು ಕೋವಿಡ್​ ಪ್ರಕರಣಗಳ ಸಂಖ್ಯೆ 3,40,53,573, ಹಾಗೂ ಮೃತರ ಸಂಖ್ಯೆ 4,51,980ಕ್ಕೆ ಹೆಚ್ಚಳವಾಗಿದೆ. ಒಟ್ಟು ಸೋಂಕಿತರ ಪೈಕಿ ಶೇ.98.08 ರಷ್ಟು ಅಂದರೆ 3,33,99,961 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಉಳಿದಂತೆ 2,01,632 ಕೇಸ್​​ಗಳು (ಶೇ.0.59) ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆ ಪಾಡು ಯಾರಿಗೂ ಬೇಡ: ಎಮರ್ಜೆನ್ಸಿ ವಾರ್ಡ್ ಫುಲ್- ಒಂದೇ ಬೆಡ್‌ನಲ್ಲಿ ಇಬ್ಬಿಬ್ಬರು ರೋಗಿಗಳು..!

97.23 ಕೋಟಿ ಡೋಸ್​ ವ್ಯಾಕ್ಸಿನೇಷನ್​

ದೇಶಾದ್ಯಂತ ಜನವರಿ 16ರಿಂದ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಈವರೆಗೆ 97,23,77,045 ಡೋಸ್​ ವ್ಯಾಕ್ಸಿನ್​ ನೀಡಲಾಗಿದೆ. ನಿನ್ನೆ ಒಂದೇ ದಿನದಲ್ಲಿ 8,36,118 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.