ನವದೆಹಲಿ: ಕಳೆದ 24 ಗಂಟೆಯಲ್ಲಿ 1,00,636 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 2,427 ಸೋಂಕಿನಿಂದ ಮಂದಿ ಸಾವನ್ನಪ್ಪಿದ್ದಾರೆ. 1,74,399 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಈವರೆಗಿನ ಅಂಕಿಅಂಶ:
ದೇಶದಲ್ಲಿ ಈವರೆಗೆ ಒಟ್ಟು 2,89,09,975 ಕೊರೊನಾ ಪ್ರಕರಣಗಳು ದಾಖಲಾಗಿವೆ. 2,71,59,180 ಸೋಂಕಿತರು ಗುಣಮುಖರಾಗಿದ್ದಾರೆ. ಸುಮಾರು 3,49,186 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 14,01,609 ಸಕ್ರಿಯ ಕೋವಿಡ್ ಪ್ರಕರಣಗಳಿವೆ.
ಕೋವಿಡ್ ಪರೀಕ್ಷೆ:
ಜೂನ್ 6 ರ ವರೆಗೆ 36,63,34,111 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ನಿನ್ನೆ ಒಂದೇ ದಿನ 15,87,589 ಸ್ಯಾಂಪಲ್ಸ್ ಪರೀಕ್ಷೆ ಮಾಡಲಾಗಿದೆ ಎಂದು ICMR ತಿಳಿಸಿದೆ.
ಲಸಿಕೆ ವಿತರಣೆ:
ದೇಶಾದ್ಯಂತ ಇಲ್ಲಿಯವರೆಗೆ 23,27,86,482 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ.