ETV Bharat / bharat

LOCಯಲ್ಲಿ NDA ನೇತೃತ್ವದ ಅಧಿಕಾರವಧಿಯಲ್ಲಿ ಅತಿ ಹೆಚ್ಚು ಸಾವು-ನೋವು : RTI ವರದಿಯಿಂದ ಬಹಿರಂಗ - ಪ್ರಫುಲ್ ಸರ್ದಾ

ಈಗಾಗಲೇ ನಾಲ್ಕು ಭದ್ರತಾ ಪಡೆಗಳ ಸಿಬ್ಬಂದಿ ಮೃತಪಟ್ಟಿದ್ದಾರೆ. 6 ಮಂದಿ ಸೇನಾ ಸಿಬ್ಬಂದಿ, ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ ಅಧಿಕಾರವಧಿಗೆ ಹೋಲಿಸಿದರೆ, ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಗಡಿಗಳು ಅಸುರಕ್ಷಿತವಾಗಿವೆ ಎಂದು ಸರ್ದಾ ಹೇಳಿದ್ದಾರೆ..

India-Pakistan
India-Pakistan
author img

By

Published : Aug 30, 2021, 8:48 PM IST

ಪುಣೆ(ಮಹಾರಾಷ್ಟ್ರ) : ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಎರಡೂ ಕಡೆಯಿಂದ ನಡೆದ ಗುಂಡಿನ ದಾಳಿಯಲ್ಲಿ ಗರಿಷ್ಠ ಸಾವು-ನೋವುಗಳು ಸಂಭವಿಸಿವೆ ಎಂದು ಇತ್ತೀಚಿನ ಆರ್‌ಟಿಐ ವರದಿ ಬಹಿರಂಗಪಡಿಸಿದೆ.

ಪುಣೆಯ ಕಾರ್ಯಕರ್ತ ಪ್ರಫುಲ್ ಸರ್ದಾ ನೀಡಿರುವ ಮಾಹಿತಿ ಪ್ರಕಾರ, 2010ರಿಂದ ಫೆಬ್ರವರಿ 2021ರವರೆಗೆ 14,411 ಗಡಿಯಾಚೆಗಿನ ಗುಂಡಿನ ದಾಳಿಗಳು ನಡೆದಿವೆ. 267 ಜೀವಗಳನ್ನು ಬಲಿ ತೆಗೆದುಕೊಂಡಿವೆ ಎಂದು ತಿಳಿದು ಬಂದಿದೆ.

ಎಸ್​​-ಜೆಕೆ ನಿರ್ದೇಶಕರಾದ ಸುಲೇಖಾ ಪ್ರಕಾರ, ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 2010-2014ರ ನಡುವೆ 1,178 ಗುಂಡಿನ ದಾಳಿಗಳು ನಡೆದಿವೆ. 2015 ರಿಂದ ಫೆಬ್ರವರಿ 2021ರವರೆಗೆ (ಬಿಜೆಪಿ ನೇತೃತ್ವದ ಸರ್ಕಾರ) 13,235 ಗುಂಡಿನ ದಾಳಿಗಳು ನಡೆದಿವೆ. ಈ ವೇಳೆ ಒಟ್ಟು 138 ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅವಧಿಗೆ ಹೋಲಿಸಿದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾವು-ನೋವುಗಳ ಸಂಖ್ಯೆ ಅಂದಾಜು ಆರುಪಟ್ಟು ಹೆಚ್ಚಾಗಿದೆ ಎಂದು ಸರ್ದಾ ತಿಳಿಸಿದ್ದಾರೆ. ಎನ್​ಡಿಎ ಆಡಳಿತದಲ್ಲಿ ಒಟ್ಟು 229 ನಾಗರಿಕರ ಸಾವು-ನೋವು ಸಂಭವಿಸಿವೆ. ಉಭಯ ರಾಷ್ಟ್ರಗಳ ಗುಂಡಿನ ಚಕಮಕಿಯಲ್ಲಿ ಯೋಧರು, ನಾಗರಿಕರು ಸೇರಿ ಒಟ್ಟು 1,143 ಜನರು ಗಾಯಗೊಂಡಿದ್ದಾರೆ.

2015ರಿಂದ ಗಡಿ ವ್ಯಾಜ್ಯಗಳು ನಿರಂತರವಾಗಿ ಹೆಚ್ಚುತ್ತಿವೆ. 405ರಿಂದ 449 (2016), 971 (2017), 2,140 (2018), 3,479 (2019) ಮತ್ತು 2020 ರಲ್ಲಿ 5,133 ಗುಂಡಿನ ದಾಳಿಗಳು ನಡೆದಿವೆ. 2021ರ ಮೊದಲ ಎರಡು ತಿಂಗಳಲ್ಲಿ 658 ಗುಂಡಿನ ದಾಳಿಗಳು ದಾಖಲಾಗಿವೆ.

ಈಗಾಗಲೇ ನಾಲ್ಕು ಭದ್ರತಾ ಪಡೆಗಳ ಸಿಬ್ಬಂದಿ ಮೃತಪಟ್ಟಿದ್ದಾರೆ. 6 ಮಂದಿ ಸೇನಾ ಸಿಬ್ಬಂದಿ, ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ ಅಧಿಕಾರವಧಿಗೆ ಹೋಲಿಸಿದರೆ, ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಗಡಿಗಳು ಅಸುರಕ್ಷಿತವಾಗಿವೆ ಎಂದು ಸರ್ದಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.