ETV Bharat / bharat

ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಮುಖ

India COVID 19 update report: ಹೊಸದಾಗಿ 6,561 ಜನರಿಗೆ ಸೋಂಕು ಪತ್ತೆಯಾಗಿದೆ. ಇದರಲ್ಲಿ 142 ಮಂದಿ ಮೃತಪಟ್ಟಿದ್ದಾರೆ.

Covid infections
Covid infections
author img

By

Published : Mar 3, 2022, 12:19 PM IST

ದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಸತತವಾಗಿ ಕಳೆದ 25 ದಿನಗಳಿಂದ ಒಂದು ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾಗುತ್ತಿವೆ.

ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ನೀಡಿರುವ ಅಂಕಿ-ಅಂಶಗಳ ಪ್ರಕಾರ ಹೊಸದಾಗಿ 6,561 ಜನರಿಗೆ ಮಾತ್ರವೇ ಸೋಂಕು ಪತ್ತೆಯಾಗಿದೆ. ಇದರಲ್ಲಿ 142 ಮಂದಿ ಮೃತಪಟ್ಟಿದ್ದಾರೆ. ಹೊಸ ಪ್ರಕರಣಗಳೊಂದಿಗೆ ಸಕ್ರಿಯ ರೋಗಿಗಳು 77,152 ಇದ್ದಾರೆ. ಇದರಿಂದ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ ಶೇ.0.18 ಮಾತ್ರವೇ ಇದ್ದು, ಶೇ.98.62 ಚೇತರಿಕೆ ಪ್ರಮಾಣ ಇದೆ.

ದೇಶಾದ್ಯಂತ ಇದುವರೆಗೆ 4,29,45,160 ಮಂದಿಗೆ ಕೋವಿಡ್ ಸೋಂಕು ತಲುಗಿದೆ. ಅಲ್ಲದೇ, 5,14,388 ಜನ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ನಿತ್ಯವೂ ಪಾಸಿಟಿವಿಟಿ ದರ ಶೇ.0.74 ಇದೆ. ವಾರದಲ್ಲಿ ಶೇ.0.99 ರಷ್ಟು ದಾಖಲಾಗಿದೆ. ಇಲ್ಲಿಯವರೆಗೆ 4,23,53,620 ಸೋಂಕಿನಿಂದ ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ ಕೂಡ 0.74ರಷ್ಟು ಮಾತ್ರವೇ ಇದೆ.

  • " class="align-text-top noRightClick twitterSection" data="">

ಇತ್ತ, ಕೋವಿಡ್​​ನಿಂದ ರಕ್ಷಣೆಗಾಗಿ ಲಸಿಕೆ ವಿತರಣೆ ಕಾರ್ಯವೂ ಚುರುಕಾಗಿದೆ. ಇದುವರೆಗೂ 178.02 ಕೋಟಿ ಡೋಸ್​ ಲಸಿಕೆಯನ್ನು ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.