ETV Bharat / bharat

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ತಾಜ್ ಮಹಲ್‌ಗಿಂತಲೂ ಸುಂದರವಾದ ದೇಶದ ಅತಿ ದೊಡ್ಡ ಮಸೀದಿ - ತಾಜ್ ಮಹಲ್

ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಕಾರ್ಯವು 70 ಪ್ರತಿಶತದಷ್ಟು ಪೂರ್ಣಗೊಂಡಿದೆ. ಈ ಬೆನ್ನಲ್ಲೇ ಅಯೋಧ್ಯೆಯಲ್ಲಿ ಭಾರತದ ಅತಿ ದೊಡ್ಡ ಮಸೀದಿ ನಿರ್ಮಾಣದ ಕುರಿತು ಚರ್ಚೆ ನಡೆಯುತ್ತಿದೆ.

masjid
ಮಸೀದಿ
author img

By ETV Bharat Karnataka Team

Published : Dec 15, 2023, 1:49 PM IST

Updated : Dec 15, 2023, 2:55 PM IST

ಅಯೋಧ್ಯೆ: ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ಪವಿತ್ರ ನಗರವಾದ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ನಿರ್ಮಾಣ ಕೆಲಸ ಶೇಕಡಾ 70 ಕ್ಕಿಂತಲೂ ಹೆಚ್ಚು ಪೂರ್ಣಗೊಂಡಿದೆ. 9 ನವೆಂಬರ್ 2019 ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲಾಗುತ್ತಿದೆ. ಆದರೆ, ಅಯೋಧ್ಯೆಯಿಂದ 25 ಕಿಲೋಮೀಟರ್ ದೂರದಲ್ಲಿರುವ ಧನ್ನಿಪುರದಲ್ಲಿ ಮಸೀದಿ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಹೀಗಾಗಿ, ಶೀಘ್ರದಲ್ಲೇ ನಿರ್ಮಾಣ ಕಾರ್ಯ ಆರಂಭಿಸುವ ಕುರಿತು ಪ್ರಬಲ ಚರ್ಚೆ ನಡೆಯುತ್ತಿದೆ.

ದೇಶದ ಅತಿ ದೊಡ್ಡ ಮಸೀದಿ ನಿರ್ಮಾಣ: ಅಯೋಧ್ಯೆಯ ಧನ್ನಿಪುರದಲ್ಲಿ ನಿರ್ಮಿಸಲಿರುವ ಮಸೀದಿಗೆ 'ಮೊಹಮ್ಮದ್ ಬಿನ್ ಅಬ್ದುಲ್ಲಾ' ಎಂದು ಹೆಸರಿಡಲು ಉದ್ದೇಶಿಸಲಾಗಿದೆ. ಮುಂಬೈ ಬಿಜೆಪಿ ಮುಖಂಡ ಮತ್ತು ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಜಿ ಅರಾಫತ್ ಶೇಖ್ ಅವರು ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಹೊಸ ಮಸೀದಿಯಲ್ಲಿ ವಿಶ್ವದ ಅತಿದೊಡ್ಡ ಕುರಾನ್ ಕೂಡ ಇರುತ್ತದೆ. ಇದು 21 ಅಡಿ ಎತ್ತರ ಮತ್ತು 36 ಅಡಿ ಅಗಲ ಇರಲಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ, ದೇಶದ ಎಲ್ಲ ಮಸೀದಿಗಳ ಸಂಘಟನೆಯಾದ ಆಲ್ ಇಂಡಿಯಾ ರಾಬ್ತಾ-ಎ-ಮಸ್ಜಿದ್ (AIRM) ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ಧನ್ನಿಪುರದಲ್ಲಿ ನಿರ್ಮಾಣವಾಗಲಿರುವ ಉದ್ದೇಶಿತ ಮಸೀದಿಗೆ 'ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ' ಎಂದು ಹೆಸರಿಸಲು ನಿರ್ಧರಿಸಿದೆ. ಇದು ಭಾರತದ ಅತಿ ದೊಡ್ಡ ಮಸೀದಿಯಾಗಲಿದೆ ಮತ್ತು ಭಾರತದ ಅತಿ ದೊಡ್ಡ ಕುರಾನ್ ಕೂಡ ಇದರಲ್ಲಿ ಸ್ಥಾನ ಪಡೆಯಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಮಹಿಳೆಯರಿಗೂ ನಮಾಜ್ ಮಾಡಲು ಜಾಗ ನೀಡಲಾಗುವುದು: ಮುಂಬೈ ಬಿಜೆಪಿ ಮುಖಂಡ ಮತ್ತು ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಜಿ ಅರಾಫತ್ ಶೇಖ್ ಮಾತನಾಡಿ, 2019ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಮಂಜೂರು ಮಾಡಿದ ಸ್ಥಳದಲ್ಲಿ ನಿರ್ಮಿಸಲಾಗುವ ಹೊಸ ಮಸೀದಿಯು ಭಾರತದ ಅತಿದೊಡ್ಡ ಮಸೀದಿಯಾಗಲಿದೆ. ಐದು ಸಾವಿರ ಪುರುಷರು ಮತ್ತು ನಾಲ್ಕು ಸಾವಿರ ಮಹಿಳೆಯರು ಸೇರಿದಂತೆ ಒಂಬತ್ತು ಸಾವಿರ ಮಂದಿ ಈ ಮಸೀದಿಯಲ್ಲಿ ಒಟ್ಟಿಗೆ ನಮಾಜ್ ಮಾಡಲು ಸಾಧ್ಯವಾಗುತ್ತದೆ. ಇಡೀ ಮಸೀದಿ ಸಂಕೀರ್ಣವು ವೈದ್ಯಕೀಯ, ಶೈಕ್ಷಣಿಕ ಮತ್ತು ಸಾಮಾಜಿಕ ಸೌಲಭ್ಯಗಳನ್ನು ಹೊಂದಿದ್ದು, ಹೆಚ್ಚುವರಿ ಭೂಮಿಯನ್ನು ಖರೀದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರು ಉದ್ಯಮಿಯಿಂದ ಅಯೋಧ್ಯೆಗೆ 48 ಗಂಟೆಗಳ ಕೊಡುಗೆ : ತಮಿಳುನಾಡಿನಲ್ಲಿ ವಿಶೇಷವಾಗಿ ತಯಾರಿ

ಮಸೀದಿಯಲ್ಲಿರುವ ಕಾರಂಜಿಗಳು ಸಂಜೆಯ ಪ್ರಾರ್ಥನೆ ಬಳಿಕ ಜೀವಂತಿಕೆ ಪಡೆದುಕೊಳ್ಳುತ್ತವೆ. ಇದು ತಾಜ್ ಮಹಲ್‌ಗಿಂತಲೂ ಸುಂದರವಾಗಿರುತ್ತದೆ. ಶಾಂತಿ ಮತ್ತು ಸೌಹಾರ್ದತೆಗಾಗಿ ಈ ಸ್ಮಾರಕವನ್ನು ನೋಡಲು ಎಲ್ಲ ಧರ್ಮದ ಜನರು ಬರುತ್ತಾರೆ. ಆದರೆ, ಮಸೀದಿ ನಿರ್ಮಾಣಕ್ಕೆ ಸಂಬಂಧಿಸಿದ ಕಾಗದದ ವಿಧಿವಿಧಾನಗಳು ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ, ಮಸೀದಿಯ ನಿರ್ಮಾಣ ಪ್ರಾರಂಭಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.

Last Updated : Dec 15, 2023, 2:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.