ETV Bharat / bharat

ಸಹಬಾಳ್ವೆಗೆ ಭಾರತವು ವಿಶ್ವಕ್ಕೇ ಮಾದರಿ: ಮುಸ್ಲಿಂ ವರ್ಲ್ಡ್ ಲೀಗ್ ಸೆಕ್ರೆಟರಿ ಜನರಲ್ ಶ್ಲಾಘನೆ

author img

By

Published : Jul 11, 2023, 6:38 PM IST

ಭಾರತವು ಹಿಂದೂ ಬಾಹುಳ್ಯ ದೇಶವಾದರೂ ಜಾತ್ಯತೀತ ರಾಷ್ಟ್ರವಾಗಿದೆ ಎಂದು ಭಾರತದ ಏಕತೆಯಲ್ಲಿನ ವೈವಿಧ್ಯತೆ ಮುಸ್ಲಿಂ ವರ್ಲ್ಡ್ ಲೀಗ್ (MWL) ಸೆಕ್ರೆಟರಿ ಜನರಲ್ ಶೇಖ್ ಡಾ. ಮೊಹಮ್ಮದ್ ಬಿನ್ ಅಬ್ದುಲ್ ಕರೀಮ್ ಅಲ್-ಇಸ್ಸಾ ಶ್ಲಾಘಿಸಿದ್ದಾರೆ.

Secretary-General Sheikh Dr Mohammed bin Abdulkarim Al-Issa,

ನವದೆಹಲಿ: ಭಾರತವು ಹಿಂದೂ ಬಾಹುಳ್ಯ ದೇಶವಾದರೂ ಅದರ ಸಂವಿಧಾನದಲ್ಲಿ ಬರೆದಂತೆ ಅದು ಜಾತ್ಯತೀತ ರಾಷ್ಟ್ರವಾಗಿದೆ ಮತ್ತು ಭಾರತೀಯ ಮುಸ್ಲಿಮರು ತಾವು ಭಾರತೀಯರಾಗಿರುವುದಕ್ಕೆ ಮತ್ತು ಭಾರತದ ಸಂವಿಧಾನದ ಬಗ್ಗೆ ಹೆಮ್ಮೆ ಹೊಂದಿದ್ದಾರೆ ಎಂದು ಮುಸ್ಲಿಂ ವರ್ಲ್ಡ್ ಲೀಗ್ (MWL) ಸೆಕ್ರೆಟರಿ ಜನರಲ್ ಶೇಖ್ ಡಾ. ಮೊಹಮ್ಮದ್ ಬಿನ್ ಅಬ್ದುಲ್ ಕರೀಮ್ ಅಲ್-ಇಸ್ಸಾ ಹೇಳಿದರು.

6 ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ಅವರು ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಎನ್‌ಎಸ್‌ಎ ಅಜಿತ್ ದೋವಲ್ ಅವರ ಉಪಸ್ಥಿತಿಯಲ್ಲಿ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದರು. ಡಾ ಅಬ್ದುಲ್ ಕರೀಮ್ ಅಲ್ -ಇಸ್ಸಾ ಅವರ ಭೇಟಿಯು ಸೌಮ್ಯವಾದ, ಶಾಂತಿಯುತ ಸಹಬಾಳ್ವೆ ಮತ್ತು ಸರ್ವಧರ್ಮದ ಏಕತೆಯ ಸಂದೇಶವನ್ನು ತಿಳಿಸುವ ಗುರಿಯನ್ನು ಹೊಂದಿದೆ.

"ನಾವು ಹಂಚಿಕೊಳ್ಳುವ ಸಾಮಾನ್ಯ ಉದ್ದೇಶದೊಂದಿಗೆ ನಾವು ವಿಭಿನ್ನ ಸಮುದಾಯಗಳು ಮತ್ತು ವೈವಿಧ್ಯತೆಯನ್ನು ತಲುಪುತ್ತೇವೆ. ನಾವು ಭಾರತೀಯ ಜ್ಞಾನದ ಬಗ್ಗೆ ಸಾಕಷ್ಟು ಕೇಳಿದ್ದೇವೆ ಮತ್ತು ಭಾರತೀಯ ಬುದ್ಧಿವಂತಿಕೆಯು ಮಾನವೀಯತೆಗೆ ಸಾಕಷ್ಟು ಕೊಡುಗೆ ನೀಡಿದೆ ಎಂಬುದು ನಮಗೆ ತಿಳಿದಿದೆ. ನಾವೆಲ್ಲರೂ ಶಾಂತಿಯುತವಾಗಿ ಸಹಬಾಳ್ವೆ ನಡೆಸುವ ಒಂದೇ ಗುರಿಯನ್ನು ಹೊಂದಿದ್ದೇವೆ" ಎಂದು ಅವರು ಹೇಳಿದರು.

ವೈವಿಧ್ಯತೆಯ ಪರಿಕಲ್ಪನೆಯು ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗಬಾರದು. ನಾವು ಅದನ್ನು ಗೌರವಿಸಬೇಕು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು. ಭಾರತೀಯ ಸಮಾಜವನ್ನು ಉಲ್ಲೇಖಿಸಿ ಮಾತನಾಡಿದ ಡಾ ಅಬ್ದುಲ್ ಕರೀಮ್ ಅಲ್-ಇಸ್ಸಾ, ಭಾರತವು ಹಿಂದೂ ಬಹುಸಂಖ್ಯಾತ ರಾಷ್ಟ್ರವಾಗಿದೆ. ಆದರೆ, ಅದರ ಸಂವಿಧಾನದಲ್ಲಿ ಬರೆದಂತೆ ಇದು ಜಾತ್ಯತೀತ ದೇಶವಾಗಿದೆ. ಇಲ್ಲಿ ವೈವಿಧ್ಯತೆ ಇದೆ. ನಾವು ಭಾರತದಲ್ಲಿ ಎಲ್ಲರೊಂದಿಗೆ ತೊಡಗಿಸಿಕೊಳ್ಳುತ್ತೇವೆ. ಪಂಡಿತ್ ರವಿಶಂಕರ್ ಮತ್ತು ಹಲವಾರು ನಾಯಕರು ಸೇರಿದಂತೆ ನಾವು ಸದ್ಗುರುಗಳೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದೇವೆ ಎಂದರು.

ನಾವು ಭಾರತೀಯ ಮುಸ್ಲಿಮರ ಬಗ್ಗೆ ಹಲವಾರು ವಿಷಯಗಳನ್ನು ಕೇಳುತ್ತೇವೆ. ಅವರು ಈ ಸಹಬಾಳ್ವೆಯಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸಿದ್ದಾರೆ. ಭಾರತವು ಸಹಬಾಳ್ವೆಗೆ ಉತ್ತಮ ಮಾದರಿಯಾಗಿದೆ. ಸಹಬಾಳ್ವೆಯಲ್ಲಿ ನಕಾರಾತ್ಮಕ ಪ್ರವೃತ್ತಿ ಇರುತ್ತದೆ. ಆದರೆ, ಭಾರತದಲ್ಲಿ ಮಾತ್ರ ಶಾಂತಿಯುತ ಸಹಬಾಳ್ವೆಯಲ್ಲಿ ಸಕಾರಾತ್ಮಕ ಪ್ರವೃತ್ತಿ ಇರುವುದನ್ನು ನಾವು ಕಾಣುತ್ತೇವೆ ಎಂದು ಅವರು ಹೇಳಿದರು. ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಮುಸ್ಲಿಂ ವರ್ಲ್ಡ್ ಲೀಗ್ (MWL) ಸೆಕ್ರೆಟರಿ ಜನರಲ್ ಭಾರತಕ್ಕೆ ಭೇಟಿ ನೀಡಿದ್ದು ಗಮನಾರ್ಹ.

ಇಸ್ಲಾಮಿಕ್ ಸಂಸ್ಕೃತಿ ಮತ್ತು ನಾಗರಿಕತೆಯು ಪ್ರೀತಿಗೆ ಮುಕ್ತವಾಗಿದೆ, ಸಂವಾದದಲ್ಲಿ ತೊಡಗಿಸಿಕೊಳ್ಳಲು ಮುಕ್ತವಾಗಿದೆ ಮತ್ತು ಸಂವಿಧಾನವನ್ನು ಗೌರವಿಸುತ್ತದೆ. ಮುಸ್ಲಿಮರು ಶಾಂತಿಯ ದ್ಯೋತಕವಾಗಿದ್ದಾರೆ. ಇಸ್ಲಾಂ ಪ್ರಾಯೋಗಿಕವಾಗಿದೆ ಮತ್ತು ಇತರರನ್ನು ಗೌರವಿಸುತ್ತದೆ ಮತ್ತು ಶಾಂತಿ ಮತ್ತು ಸಹೋದರತ್ವವನ್ನು ಉತ್ತೇಜಿಸುತ್ತದೆ. ನಾವು ಪರಸ್ಪರ ದೂರವಿರುವಾಗ ನಮ್ಮ ವಿವಾದಗಳನ್ನು ಒಟ್ಟಾಗಿ ಸೇರಿಕೊಂಡು ಬಗೆಹರಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ : 370ನೇ ವಿಧಿ ರದ್ದು ಪ್ರಶ್ನಿಸಿದ ಅರ್ಜಿ: ಸುಪ್ರೀಂ ಕೋರ್ಟ್​ನಲ್ಲಿ ಪ್ರತಿದಿನ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.