ETV Bharat / bharat

ಭಾರತ ಹಿಂದೂ ರಾಷ್ಟ್ರ, ಇಲ್ಲಿ ಮುಸ್ಲಿಮರು ಸುರಕ್ಷಿತ: ಮೋಹನ್ ಭಾಗವತ್ - Israel and Hamas fighting

ಉಕ್ರೇನ್ ಮತ್ತು ಇಸ್ರೇಲ್‌ನಲ್ಲಿ ನಡೆಯುತ್ತಿರುವ ರೀತಿಯ ಸಂಘರ್ಷಗಳು ಭಾರತದಲ್ಲಿ ಇಲ್ಲ. ಇದು ಹಿಂದೂಗಳ ದೇಶ, ಅದಕ್ಕಾಗಿಯೇ ಮುಸ್ಲಿಮರು ಇಲ್ಲಿ ಸುರಕ್ಷಿತರು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Mohan Bhagwat
ಮೋಹನ್ ಭಾಗವತ್
author img

By PTI

Published : Oct 22, 2023, 10:36 AM IST

ನಾಗ್ಪುರ (ಮಹಾರಾಷ್ಟ್ರ) : ಹಿಂದೂ ಧರ್ಮವು ಎಲ್ಲಾ ಪಂಗಡಗಳನ್ನು ಗೌರವಿಸುತ್ತದೆ. ಇಂದು ಹಮಾಸ್-ಇಸ್ರೇಲ್ ಯುದ್ಧಕ್ಕೆ ಕಾರಣವಾಗುವ ವಿಷಯಗಳ ಬಗ್ಗೆ ಭಾರತ ಎಂದಿಗೂ ಜಗಳವಾಡಲಿಲ್ಲ. ಇದು ಹಿಂದೂಗಳ ದೇಶವಾಗಿದ್ದು, ಮುಸ್ಲಿಮರೂ ಇಲ್ಲಿ ಅತ್ಯಂತ ಸುರಕ್ಷಿತರು. ಒಬ್ಬ ಹಿಂದೂ ಮಾತ್ರ ಇದನ್ನು ಮಾಡಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವರ್ಷಾಚರಣೆ ಪ್ರಯುಕ್ತ ನಾಗ್ಪುರದ ಶಾಲೆಯೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, "ಈ ದೇಶದಲ್ಲಿ ಎಲ್ಲಾ ಪಂಗಡಗಳು ಮತ್ತು ನಂಬಿಕೆಗಳನ್ನು ಗೌರವಿಸುವ ಧರ್ಮ ಮತ್ತು ಸಂಸ್ಕೃತಿ ಇದೆ. ಅದುವೇ ಹಿಂದೂ ಧರ್ಮ. ಇದು ಹಿಂದೂಗಳ ದೇಶ. ಇದರರ್ಥ ನಾವು ಇತರೆ ಎಲ್ಲ ಧರ್ಮಗಳನ್ನು ತಿರಸ್ಕರಿಸುತ್ತೇವೆ ಎಂದಲ್ಲ. ಇಲ್ಲಿ ಮುಸ್ಲಿಮರಿಗೂ ಭದ್ರತೆ ನೀಡಲಾಗಿದೆ. ಭಾರತ ಮಾತ್ರ ಇದನ್ನು ಮಾಡುತ್ತಿದೆ, ಬೇರೆ ದೇಶಗಳಲ್ಲಿ ಹೀಗಾಗುವುದಿಲ್ಲ. ಎಲ್ಲೆಡೆ ಹೋರಾಟ ನಡೆಯುತ್ತಿದೆ'' ಎಂದು ಹೇಳಿದರು.

ಇದನ್ನೂ ಓದಿ : ಹಿಂದೂಗಳಿಲ್ಲದ ಭಾರತವಿಲ್ಲ, ಭಾರತವಿಲ್ಲದೆ ಹಿಂದೂಗಳಿಲ್ಲ : ಮೋಹನ್ ಭಾಗವತ್

ನೀವು ಉಕ್ರೇನ್ ಯುದ್ಧ, ಹಮಾಸ್-ಇಸ್ರೇಲ್ ಯುದ್ಧದ ಬಗ್ಗೆ ಕೇಳಿರಬೇಕು. ನಮ್ಮ ದೇಶದಲ್ಲಿ ಇಂತಹ ವಿಷಯಗಳ ಮೇಲೆ ಯುದ್ಧಗಳು ನಡೆದಿಲ್ಲ. ಶಿವಾಜಿ ಮಹಾರಾಜರ ಕಾಲದಲ್ಲಿ ನಡೆದ ದಾಳಿಯೂ ಅದೇ ಮಾದರಿಯದ್ದು. ಆದರೆ, ಈ ವಿಚಾರದಲ್ಲಿ ನಾವು ಯಾರೊಂದಿಗೂ ಜಗಳವಾಡಿಲ್ಲ. ಅದಕ್ಕೇ ನಾವು ಹಿಂದೂಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ : ಇಡೀ ವಿಶ್ವಕ್ಕೆ ಭಾರತದ ಅವಶ್ಯಕತೆ ಇದೆ : ಮೋಹನ್ ಭಾಗವತ್

ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಬಳಿಕ ಸುಮಾರು 1400 ಜನರು ಕೊಲ್ಲಲ್ಪಟ್ಟಿದ್ದಾರೆ. ನಂತರ ಇಸ್ರೇಲ್, ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಅನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದ್ದು, ಗಾಜಾದಲ್ಲಿ ಸುಮಾರು 4,300 ಪ್ಯಾಲೆಸ್ಟೈನಿಯರು ಸಾವನ್ನಪ್ಪಿದ್ದಾರೆ. ಗಾಜಾದ ಆಸ್ಪತ್ರೆಯ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ 500 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಹಾಗೆಯೇ, ಇಸ್ರೇಲ್ ದೇಶವು ಗಾಜಾದಲ್ಲಿ ನೀರು ಸರಬರಾಜು ನಿಲ್ಲಿಸಿದ ನಂತರ ಜನರು ಹಸಿವು ಮತ್ತು ಬಾಯಾರಿಕೆಯಿಂದ ಬಳಲಿದ್ದು, ಆಸ್ಪತ್ರೆಗಳು ಮತ್ತು ಶಾಲೆಗಳು ಸ್ಥಗಿತಗೊಂಡಿವೆ. ಇದೀಗ ಲೆಬನಾನ್ ನ ಭಯೋತ್ಪಾದಕ ಭಯೋತ್ಪಾದಕ ಸಂಘಟನೆ ಹೆಜ್ಬೊಲ್ಲಾ ಕೂಡ ಹಮಾಸ್ ಜೊತೆ ಕೈಜೋಡಿಸಿದೆ. ಹೀಗಾಗಿ, ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಅತ್ಯಂತ ಅಪಾಯಕಾರಿಯಾಗಿದೆ.

ಇದನ್ನೂ ಓದಿ : ಸನಾತನ ಧರ್ಮಕ್ಕೆ ಯಾರ ಪ್ರಮಾಣಪತ್ರವೂ ಬೇಕಿಲ್ಲ : ಮೋಹನ್​ ಭಾಗವತ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.