ಉದಯಪುರ(ರಾಜಸ್ಥಾನ): ಅಭಿವೃದ್ಧಿಶೀಲ ರಾಷ್ಟ್ರಗಳು, ಜಾಗತಿಕ ದಕ್ಷಿಣ ಮತ್ತು ಮುಂದುವರಿದ ಆರ್ಥಿಕತೆಗಳ ನಡುವೆ ಗೆಲುವು-ಗೆಲುವಿನ ಸಹಯೋಗವನ್ನು ರೂಪಿಸುವತ್ತ ಭಾರತದ ಜಿ 20 ಅಧ್ಯಕ್ಷತೆಯ ಗಮನ ಕೇಂದ್ರೀಕೃತವಾಗಿರುತ್ತದೆ ಎಂದು ಜಿ 20 ಶೃಂಗಸಭೆಯಲ್ಲಿ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿದರು.
ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಜಿ20 ಶೆರ್ಪಾದಲ್ಲಿ ಮಾತನಾಡಿದ ಅವರು, ನಾವು ಹೊಸ ವಿಧಾನಗಳನ್ನು ನಿರ್ಮಿಸಬೇಕಾಗಿದೆ. ಇದು ಅಭಿವೃದ್ಧಿ ಹೊಂದಿದ ಜಗತ್ತು ಮತ್ತು ಉದಯೋನ್ಮುಖ ಆರ್ಥಿಕತೆಗಳೆರಡಕ್ಕೂ ಒಂದು ವಿಶಿಷ್ಟ ವೇದಿಕೆಯಾಗಿದೆ. ಆದ್ದರಿಂದ ನಾವು ಪ್ರಮುಖ ವಿಷಯಗಳಲ್ಲಿ ಜಗತ್ತಿಗೆ ಪ್ರಯೋಜನವಾಗುವ ವಿಧಾನಗಳನ್ನು ನಿರ್ಮಿಸಬೇಕಾಗಿದೆ ಎಂದರು.
ಭಾರತದ ಅಧ್ಯಕ್ಷತೆಯ ಜಿ20 ಸಭೆ ನಡೆಯುತ್ತಿದೆ. ಇಲ್ಲಿ ಭಾರತ ಮಾಡಿದ ಟಿಪ್ಪಣಿಗಳು ಮತ್ತು ಆದ್ಯತೆಗಳ ಅವಲೋಕನ ನಡೆಯುತ್ತದೆ. ಈ ವೇದಿಕೆಯ ಮೊದಲ ಕಾಳಜಿ ಯಾರ ಅಗತ್ಯವು ಅತ್ಯಂತ ದೊಡ್ಡದಾಗಿದೆ ಎಂಬುದರ ಬಗ್ಗೆ ಇರಬೇಕು. ಆದ್ದರಿಂದ ನಾವು ಜಾಗತಿಕ ದಕ್ಷಿಣದ ಬಗ್ಗೆಯೂ ಗಮನ ಹರಿಸಬೇಕಾಗಿದೆ. ನಮ್ಮ G20 ಅಧ್ಯಕ್ಷತೆಯು ಥೀಮ್‌ಗೆ ಅನುಗುಣವಾಗಿ ಎಲ್ಲರ ಏಕತೆಯನ್ನು ಪ್ರತಿಪಾದಿಸಲು ಪ್ರಯತ್ನಿಸುತ್ತಿದೆ. ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯವನ್ನು ಒಳಗೊಂಡಿದೆ ಎಂದು ಹೇಳಿದರು.
ಇದನ್ನೂ ಓದಿ:ರಾಜಸ್ಥಾನದಲ್ಲಿ ಜಿ20 ಶೆರ್ಪಾ ಸಭೆ ಆರಂಭ.. ಜಾಗತಿಕ ಬಿಕ್ಕಟ್ಟಿನ ಬಗ್ಗೆ ರಾಜತಾಂತ್ರಿಕರ ಚರ್ಚೆ