ಪುಣೆ, ಮಹಾರಾಷ್ಟ್ರ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ 2ನೇ ಪಂದ್ಯ ನಡೆಯುತ್ತಿದೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕರ್ನಾಟಕದ ಕುವರ ಕೆ.ಎಲ್.ರಾಹುಲ್ ಅರ್ಧಶತಕ ದಾಖಲಿಸಿ, ತಂಡಕ್ಕೆ ಆಸರೆಯಾಗಿದ್ದಾರೆ. ಕೊಹ್ಲಿ 79 ಎಸೆತಗಳಲ್ಲಿ 66 ರನ್ ದಾಖಲಿಸಿ, ಆದಿಲ್ ರಶೀದ್ ಬೌಲಿಂಗ್ನಲ್ಲಿ ಜಾಸ್ ಬಟ್ಲರ್ಗೆ ಕ್ಯಾಚ್ ಒಪ್ಪಿಸಿದ್ದಾರೆ.
-
FIFTY!@klrahul11 with a well-made half-century off 66 deliveries.
— BCCI (@BCCI) March 26, 2021 " class="align-text-top noRightClick twitterSection" data="
Live - https://t.co/RrLvC1S7EI #INDvENG @Paytm pic.twitter.com/smZiLDwyF6
">FIFTY!@klrahul11 with a well-made half-century off 66 deliveries.
— BCCI (@BCCI) March 26, 2021
Live - https://t.co/RrLvC1S7EI #INDvENG @Paytm pic.twitter.com/smZiLDwyF6FIFTY!@klrahul11 with a well-made half-century off 66 deliveries.
— BCCI (@BCCI) March 26, 2021
Live - https://t.co/RrLvC1S7EI #INDvENG @Paytm pic.twitter.com/smZiLDwyF6
ರಾಹುಲ್ 66 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಸಾಕಷ್ಟು ಟೀಕೆಗಳ ನಂತರ ಕಂಬ್ಯಾಕ್ ಮಾಡಿದ್ದಾರೆ. ರೋಹಿತ್ ಶರ್ಮಾ 25 ಎಸೆತಗಳಲ್ಲಿ 25 ರನ್ಗಳಿಸಿ ಸ್ಯಾಮ್ ಕುರ್ರಾನ್ ಎಸೆತದಲ್ಲಿ ಔಟ್ ಆಗಿದ್ದು, ಶಿಖರ್ ಧವನ್ 17 ಎಸೆತಗಳಲ್ಲಿ ರೀಸ್ ಟೋಪ್ಲೆ ಬೌಲಿಂಗ್ನಲ್ಲಿ ಬೆನ್ಸ್ಟೋಕ್ಗೆ ಕ್ಯಾಚ್ ಒಪ್ಪಿಸುವ ಮೂಲಕ ಪೆವಿಲಿಯನ್ಗೆ ಮರಳಿದ್ದಾರೆ.
ಇದನ್ನೂ ಓದಿ: IND vs ENG: ಎರಡನೇ ಬಾರಿ ತಪ್ಪು ಮಾಡಿದ ಬೆನ್ಸ್ಟೋಕ್ಸ್, ಅಂಪೈರ್ಗಳ ಎಚ್ಚರಿಕೆ
ಈಗ ಸದ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 33 ಓವರ್ಗಳಲ್ಲಿ 164 ರನ್ ಗಳಿಸಿದ್ದು, ರನ್ ವೇಗ ಹೆಚ್ಚಿಸಿಕೊಳ್ಳಬೇಕಿದೆ.
ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದು ಬಿಗಿರುವ ಟೀಮ್ ಇಂಡಿಯಾ ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸುವ ಮೂಲಕ ಸರಣಿ ಕೈ ವಶ ಮಾಡಿಕೊಳ್ಳುವ ತವಕದಲ್ಲಿದ್ದರೆ, ಇತ್ತ ಇಂಗ್ಲೆಂಡ್ ತಂಡ ಗೆದ್ದು ಸರಣಿ ಉಳಿಸಿಕೊಳ್ಳಲು ಸಜ್ಜಾಗಿದೆ.