ETV Bharat / bharat

ಸಿರಿಯಾ, ಟರ್ಕಿ ಭೂಕಂಪನ: ರಕ್ಷಣಾ, ವೈದ್ಯ ತಂಡದೊಂದಿಗೆ ತೆರಳಿದ ಭಾರತ - earthquake

ಪ್ರಬಲ ಭೂಕಂಪನದಿಂದ ತತ್ತರಿಸಿದ ಟರ್ಕಿ ಸಿರಿಯಾ- ಸಂತ್ರಸ್ತ ದೇಶಗಳಿಗೆ ತೆರಳಿದ ಭಾರತ ರಕ್ಷಣಾ ಪಡೆ- 48 ಜನರಿದ್ದ ಎನ್​ಡಿಆರ್​ಎಫ್​ ಪಡೆ- ಟರ್ಕಿ ಸಿರಿಯಾಗೆ ಭಾರತದಿಂದ ಕ್ಷಿಪ್ರ ನೆರವು

earthquake
ಸಿರಿಯಾ, ಟರ್ಕಿ ಭೂಕಂಪನ
author img

By

Published : Feb 7, 2023, 7:51 AM IST

Updated : Feb 7, 2023, 8:39 AM IST

ನವದೆಹಲಿ: ಸಿರಿಯಾ, ಟರ್ಕಿಯಲ್ಲಿ ಉಂಟಾದ ಪ್ರಬಲ ಭೂಕಂಪನದಿಂದಾಗಿ ಸಾವಿರಾರು ಜೀವಗಳು ಸಮಾಧಿಯಾಗಿದ್ದು, ಇಡೀ ವಿಶ್ವವೇ ಮಮ್ಮುಲು ಮರುಗುವಂತಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳ ಕ್ಷಿಪ್ರ ನೆರವು ನೀಡಲು ಭಾರತ 48 ಜನರ ರಕ್ಷಣಾ, ವೈದ್ಯ ಪಡೆಯ ಮೊದಲ ತಂಡ ಅಲ್ಲಿಗೆ ತೆರಳಿದೆ. ಪ್ರಕೃತಿ ಮುನಿಸಿಗೆ ವಿನಾಶಕಾರಿ ಪ್ರಮಾಣದಲ್ಲಿ ಹಾನಿಯಾದ ದೇಶಗಳಿಗೆ ನೆರವು ನೀಡುವುದಾಗಿ ಪ್ರಧಾನಮಂತ್ರಿ ಕಾರ್ಯಾಲಯ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಭಾರತೀಯ ವಾಯುಪಡೆಯ ವಿಮಾನದಲ್ಲಿ ಪರಿಹಾರ ಸಾಮಗ್ರಿಗಳ ಜೊತೆಗೆ ಮೊದಲ ತಂಡ ಟರ್ಕಿಗೆ ಹಾರಿದೆ.

  • #TurkeyEarthquake | Last night, an Indian Air Force C-17 left for Turkey with search & rescue teams of the National Disaster Response Force (NDRF). This aircraft is part of a larger relief effort that will be undertaken by the IAF along with other Indian organisations: IAF pic.twitter.com/bLbn5SbHcP

    — ANI (@ANI) February 7, 2023 " class="align-text-top noRightClick twitterSection" data=" ">

ಪುರುಷ ಮತ್ತು ಮಹಿಳಾ ಸಿಬ್ಬಂದಿ, ನುರಿತ ಶ್ವಾನದಳಗಳು, ವೈದ್ಯಕೀಯ ಸಾಮಗ್ರಿಗಳು, ಸುಧಾರಿತ ಕೊರೆಯುವ ಉಪಕರಣಗಳು ಸೇರಿದಂತೆ ಇತರ ಸಾಧನಗಳನ್ನು ಒಳಗೊಂಡಂತೆ ಪರಿಣಿತ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ(ಎನ್​ಡಿಆರ್​ಎಫ್​) ತಂಡ ನೆರವಿಗೆ ತೆರಳಿತು. ಟರ್ಕಿ ಮತ್ತು ಸಿರಿಯಾಗೆ ಭಾರತದಿಂದ ಮಾನವೀಯ ನೆರವು ನೀಡಲು ವಿಪತ್ತು ಪರಿಹಾರ ತಂಡಗಳು ಸಜ್ಜಾಗಿವೆ.

ಓದಿ: ಟರ್ಕಿ, ಸಿರಿಯಾದಲ್ಲಿ ಭೀಕರ ಭೂಕಂಪ: ಮಲಗಿದ್ದಲ್ಲೇ ಸಜೀವ ಸಮಾಧಿಯಾದ 640ಕ್ಕೂ ಅಧಿಕ ಜನ! ಕ್ಷಣ ಕ್ಷಣಕ್ಕೆ ಹೆಚ್ಚಾಗುತ್ತಿರುವ ಸಾವಿನ ಸಂಖ್ಯೆ

NDRF ತಂಡ ಅಗತ್ಯ ಸಾಮಗ್ರಿಗಳ ಜೊತೆಗೆ ತೆರಳುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಬಾಗ್ಚಿ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು, ಘಟನೆಗೆ ತೀವ್ರ ಸಂತಾಪ ಸೂಚಿಸಿ, ಭಾರತವು ಸಂತ್ರಸ್ತ ದೇಶಕ್ಕೆ ಸಕಲ ನೆರವು ನೀಡಲಿದೆ ಎಂದು ಘೋಷಿಸಿದ್ದರು.

ಭಾರತದಲ್ಲಿರುವ ಟರ್ಕಿಯ ರಾಯಭಾರಿ ಫಿರತ್ ಸುನೆಲ್ ಅವರು ಭಾರತ ಸರ್ಕಾರದ ನೆರವಿಗೆ ಕೃತಜ್ಞತೆ ಸಲ್ಲಿಸಿದರು. "ಅಗತ್ಯಕ್ಕೆ ಬೇಕಾಗುವವ ನಿಜವಾದ ಸ್ನೇಹಿತ" ಎಂದು ಹೇಳಿದರು. ಇದಕ್ಕಾಗಿ ಅವರು ಟರ್ಕಿಶ್​ ಭಾಷೆಯಲ್ಲಿನ ಗಾದೆಯನ್ನೂ ಉಲ್ಲೇಖಿಸಿದ್ದಾರೆ.

  • #WATCH | As you know, a massive earthquake took place in Turkey and Syria. The Government of India as a measure of HADR (Humanitarian Assistance & Disaster Relief) operations, has taken a decision to send two teams of NDRF to Turkey: Mohsen Shahedi, DIG, Operation & Training NDRF pic.twitter.com/yaMCVIcCzs

ವಿಶ್ವದೆಲ್ಲೆಡೆಯಿಂದ ನೆರವಿನ ವಾಗ್ದಾನ: ವಿಶ್ವದ ಹಲವು ರಾಷ್ಟ್ರಗಳ ನಾಯಕರು ಟರ್ಕಿ ಮತ್ತು ಸಿರಿಯಾದ ರಕ್ಷಣೆಗೆ ಧಾವಿಸುವುದಾಗಿ ತಿಳಿಸಿವೆ. ವಿಶ್ವಸಂಸ್ಥೆಯಲ್ಲಿ ವಿನಾಶಕಾರಿ ಭೂಕಂಪನದಲ್ಲಿ ಮಡಿದವರಿಗೆ ಒಂದು ನಿಮಿಷ ಮೌನ ಸಂತಾಪ ಸೂಚಿಸಲಾಯಿತು.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಟರ್ಕಿ ಮತ್ತು ಸಿರಿಯಾದ ಅಧ್ಯಕ್ಷರಿಗೆ ಸಂತಾಪ ಸಂದೇಶ ಕಳುಹಿಸಿ, ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ವಿಪತ್ತು ಸ್ಥಳಗಳಲ್ಲಿ ನೆರವಿಗೆ ರಷ್ಯಾದ ರಕ್ಷಣಾ ತಂಡಗಳನ್ನು ಎರಡೂ ದೇಶಗಳಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ.

ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಟ್ವೀಟ್‌ ಮಾಡಿ, "ಜೀವಹಾನಿ ಮತ್ತು ವಿನಾಶದಿಂದ ತೀವ್ರವಾಗಿ ದುಃಖಿತನಾಗಿದ್ದೇನೆ. ಸಮನ್ವಯದೊಂದಿಗೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯವಿರುವ ಯಾವುದೇ ನೆರವನ್ನ ಒದಗಿಸಲಾಗುವುದು" ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್​ ಪ್ರಧಾನಮಂತ್ರಿ ರಿಷಿ ಸುನಕ್ ಕಂಪನಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಭೂಕಂಪದಲ್ಲಿ ಸಿಲುಕಿದವರನ್ನು ರಕ್ಷಿಸುತ್ತಿರುವ ತಂಡವನ್ನು ಶ್ಲಾಘಿಸಿ, ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಇಂಗ್ಲೆಂಡ್​ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಇದರೊಂದಿಗೆ ಹಲವಾರು ರಾಷ್ಟ್ರಗಳ ನಾಯಕರು ಕೂಡ ತಮ್ಮ ಪಡೆಗಳನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ.

ಓದಿ: ಪ್ರಬಲ ಭೂಕಂಪನಕ್ಕೆ ತತ್ತರಿಸಿದ ಸಿರಿಯಾ, ಟರ್ಕಿ.. 3500ಕ್ಕೂ ಹೆಚ್ಚು ಜನರು ಸಜೀವ ಸಮಾಧಿ

Last Updated : Feb 7, 2023, 8:39 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.