ನವದೆಹಲಿ: ಒಂದೇ ದಿನ 1 ಕೋಟಿಗೂ ಅಧಿಕ ಕೊರೊನಾ ಲಸಿಕೆ ನೀಡುವ ಮೂಲಕ ಭಾರತ ಹೊಸ ಮೈಲಿಗಲ್ಲು ನೆಟ್ಟಿದೆ. ಶುಕ್ರವಾರ ಹೊಸ ದಾಖಲೆ ಬರೆದಿರುವ ಭಾರತ, ಒಂದೇ ದಿನ 1 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ.
ಒಟ್ಟು 1 ಕೋಟಿ 63 ಸಾವಿರದ 931 ಜನರಿಗೆ ಶುಕ್ರವಾರ ಲಸಿಕೆ ಹಾಕಲಾಗಿದೆ. ಇದರಲ್ಲಿ ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಅಂದ್ರೆ 28,62,649, ಕರ್ನಾಟಕದಲ್ಲಿ 1,079,588, ಮಹಾರಾಷ್ಟ್ರದಲ್ಲಿ 9,84,117 ಡೋಸ್ಗಳನ್ನು ವಿತರಣೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, 1 ಕೋಟಿ ತಲುಪುವುದು ಮಹತ್ವದ ಮೈಲಿಗಲ್ಲು. ಲಸಿಕೆ ಪಡೆದವರಿಗೆ ಹಾಗೂ ಲಸಿಕೆ ಹಾಕುವಲ್ಲಿ ಯಶಸ್ವಿಯಾದವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
-
Record vaccination numbers today!
— Narendra Modi (@narendramodi) August 27, 2021 " class="align-text-top noRightClick twitterSection" data="
Crossing 1 crore is a momentous feat. Kudos to those getting vaccinated and those making the vaccination drive a success.
">Record vaccination numbers today!
— Narendra Modi (@narendramodi) August 27, 2021
Crossing 1 crore is a momentous feat. Kudos to those getting vaccinated and those making the vaccination drive a success.Record vaccination numbers today!
— Narendra Modi (@narendramodi) August 27, 2021
Crossing 1 crore is a momentous feat. Kudos to those getting vaccinated and those making the vaccination drive a success.
ಒಂದೇ ದಿನದಲ್ಲಿ 1 ಕೋಟಿ ಲಸಿಕೆ ನೀಡುವ ಮೂಲಕ ದೇಶ ಇತಿಹಾಸ ಸೃಷ್ಟಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಖಾತೆಯ ಸಚಿವ ಮನ್‍ಸುಖ್ ಮಾಂಡವ್ಯ ಹೇಳಿದ್ದಾರೆ.
ಕೊರೊನಾ ಮೂರನೇ ಅಲೆ ಭೀತಿ ಹಾಗೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಲಸಿಕೆ ಉತ್ಸವ ಆಯೋಜಿಸಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ.
(ವ್ಯಾಕ್ಸಿನ್ ಆನ್ ವ್ಹೀಲ್ಗೆ ಸಿಎಂ ಚಾಲನೆ : ಹಳ್ಳಿ ಹಳ್ಳಿಗಳಿಗೂ ಬಸ್ ನಲ್ಲಿ ಬರಲಿದೆ ಕೊರೊನಾ ಲಸಿಕೆ)