ನವದೆಹಲಿ: ದೇಶದಲ್ಲಿ ನಿನ್ನೆ ಒಂದೇ ದಿನ 38,948 ಮಂದಿ ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, 219 ಸೋಂಕಿತರು ಬಲಿಯಾಗಿದ್ದಾರೆ. ಈ ಪೈಕಿ ಕೇರಳದಲ್ಲೇ ಸಿಂಹಪಾಲು ಇದ್ದು, ಅಲ್ಲಿ 26,701 ಕೇಸ್ಗಳು ಹಾಗೂ 74 ಸಾವು ವರದಿಯಾಗಿದೆ.
ಗುಣಮುಖರ ಪ್ರಮಾಣ ಶೇ.97.44ಕ್ಕೆ ಏರಿಕೆ
ಭಾರತದಲ್ಲಿ ಇಲ್ಲಿಯವರೆಗೆ ಒಟ್ಟು 3,30,27,621 ಮಂದಿಗೆ ವೈರಸ್ ಅಂಟಿದಂತಾಗಿದ್ದು, ಮೃತರ ಸಂಖ್ಯೆ 4,40,752ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ ಶೇ.97.44 ರಷ್ಟು ಅಂದರೆ 3,21,81,995 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 4,04,874 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಭಾರತದಲ್ಲಿ ಆಗಸ್ಟ್ ತಿಂಗಳ ವ್ಯಾಕ್ಸಿನೇಷನ್ ಪ್ರಮಾಣ G7 ರಾಷ್ಟ್ರಗಳಿಗಿಂತಲೂ ಹೆಚ್ಚು..
ಆಗಸ್ಟ್ ತಿಂಗಳಿನಲ್ಲಿ ದಾಖಲೆಯ ವ್ಯಾಕ್ಸಿನೇಷನ್ : ಜನವರಿ 16ರಿಂದ ದೇಶಾದ್ಯಂತ ಕೊರೊನಾ ಲಸಿಕಾಭಿಯಾನ ಆರಂಭಿಸಲಾಗಿದ್ದು, ಈವರೆಗೆ 68,75,41,762 ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ಆಗಸ್ಟ್ ತಿಂಗಳಿನಲ್ಲಿ ದಾಖಲೆಯ ಮಟ್ಟದಲ್ಲಿ ಭಾರತದಾದ್ಯಂತ ಕೋವಿಡ್ ಲಸಿಕೆ ನೀಡಲಾಗಿದೆ. ಈ ಪ್ರಮಾಣವು ಎಲ್ಲಾ ಜಿ7 ರಾಷ್ಟ್ರಗಳಿಗಿಂತಲೂ ಹೆಚ್ಚಿದ್ದು, ಜಾಗತಿಕ ಭೂಪಟದಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.