ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 20,038 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. 47 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 5,25,604ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸದ್ಯ ದೇಶದಲ್ಲಿ 1,39,073 ಸಕ್ರಿಯ ಪ್ರಕರಣಗಳಿವೆ. ನಿನ್ನೆ(ಗುರುವಾರ) 16,994 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,30,45,350ಕ್ಕೆ ಏರಿದೆ. ಸಾವಿನ ಪ್ರಮಾಣ ಶೇ.1.20 ರಷ್ಟಿದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇ. 98.48 ರಷ್ಟಿದೆ.
-
#COVID19 | India reports 20,038 fresh cases, 16,994 recoveries, and 47 deaths in the last 24 hours.
— ANI (@ANI) July 15, 2022 " class="align-text-top noRightClick twitterSection" data="
Active cases 1,39,073
Daily positivity rate 4.44% pic.twitter.com/GzzN9m3pcx
">#COVID19 | India reports 20,038 fresh cases, 16,994 recoveries, and 47 deaths in the last 24 hours.
— ANI (@ANI) July 15, 2022
Active cases 1,39,073
Daily positivity rate 4.44% pic.twitter.com/GzzN9m3pcx#COVID19 | India reports 20,038 fresh cases, 16,994 recoveries, and 47 deaths in the last 24 hours.
— ANI (@ANI) July 15, 2022
Active cases 1,39,073
Daily positivity rate 4.44% pic.twitter.com/GzzN9m3pcx
ದೈನಂದಿನ ಪಾಸಿಟಿವಿಟಿ ದರ ಶೇ. 4.44 ಮತ್ತು ಸಾಪ್ತಾಹಿಕ ಪಾಸಿಟಿವಿಟಿ ದರ ಶೇ.4.30ರಷ್ಟಿದೆ. ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಈವರೆಗೆ 199.47 ಕೋಟಿ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: ಇಂದಿನಿಂದ 75 ದಿನಗಳವರೆಗೆ ದೇಶಾದ್ಯಂತ ಉಚಿತ ಬೂಸ್ಟರ್ ಡೋಸ್ ವಿತರಣೆ