ETV Bharat / bharat

ಗಡಿಯಲ್ಲಿ ಸೇನೆ ಹಿಂತೆಗೆತ: ನಾಳೆ ಮತ್ತೊಂದು ಸುತ್ತಿನ ಭಾರತ-ಚೀನಾ ಮಿಲಿಟರಿ ಮಾತುಕತೆ

author img

By

Published : Apr 8, 2021, 6:33 AM IST

ಶುಕ್ರವಾರ 11ನೇ ಸುತ್ತಿನ ಮಿಲಿಟರಿ ಹಂತದ ಮಾತುಕತೆ ನಡೆಸುವ ಬಗ್ಗೆ ಭಾರತ-ಚೀನಾ ಕಡೆಯವರು ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ. ಈ ವೇಳೆ ಗೋಪ್ರಾ ಮತ್ತು ಹಾಟ್ ಸ್ಪ್ರಿಂಗ್ಸ್‌ನಲ್ಲಿ ಸೈನ್ಯವನ್ನು ಶೀಘ್ರವಾಗಿ ಹಿಂತೆಗೆದುಕೊಳ್ಳುವಂತೆ ಭಾರತ ಒತ್ತಾಯಿಸಲಿದೆ. ಜೊತೆಗೆ ಡೆಪ್ಸಾಂಗ್ ಬಯಲು ಪ್ರದೇಶಗಳಲ್ಲಿ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಲಿದೆ.

India-China military talks
India-China military talks

ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಮುಂದಿನ ಸುತ್ತಿನ ಭದ್ರತಾ ಕಮಾಂಡರ್ ಮಟ್ಟದ ಮಾತುಕತೆ ಶುಕ್ರವಾರ ನಡೆಯಲಿದೆ. ಈ ಮಾತುಕತೆಯ ವೇಳೆ, ಪೂರ್ವ ಲಡಾಖ್‌ನಲ್ಲಿ ಉಳಿದಿರುವ ಘರ್ಷಣೆ ಕೇಂದ್ರಗಳಲ್ಲಿ ಸೈನ್ಯವನ್ನು ತೆರವು ಮಾಡುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಗೋಪ್ರಾ ಮತ್ತು ಹಾಟ್ ಸ್ಪ್ರಿಂಗ್ಸ್‌ನಲ್ಲಿ ಸೇನೆಯನ್ನು ಶೀಘ್ರವಾಗಿ ಹಿಂತೆಗೆದುಕೊಳ್ಳುವಂತೆ ಭಾರತ ಒತ್ತಾಯಿಸಲಿದೆ. ಡೆಪ್ಸಾಂಗ್ ಬಯಲು ಪ್ರದೇಶಗಳಲ್ಲಿ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಚರ್ಚೆಯೂ ನಡೆಯಲಿದೆ.

ಪ್ಯಾಂಗೊಂಗ್ ಸರೋವರ ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆಯ ನಂತರ ಕಳೆದ ಮೇ 5ರಂದು ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಗಡಿರೇಖೆ ಗಲಭೆ ಸ್ಫೋಟಗೊಂಡಿತು.

ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ಪರಿಣಾಮವಾಗಿ ಉಭಯ ಪಕ್ಷಗಳು ಫೆಬ್ರವರಿಯಲ್ಲಿ ಪ್ಯಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಿವೆ.

ಫೆಬ್ರವರಿ 20ರಂದು ನಡೆದ ಮಿಲಿಟರಿ ಮಾತುಕತೆಯಲ್ಲಿ ಡೆಪ್ಸಾಂಗ್, ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಸೇರಿದಂತೆ ಮಹೋನ್ನತ ಸಮಸ್ಯೆಗಳನ್ನು ಪರಿಹರಿಸಲು ಭಾರತ ಒತ್ತಾಯಿಸಿತು.

ಉಭಯ ದೇಶಗಳ ನಡುವಿನ ಒಟ್ಟಾರೆ ಸಂಬಂಧಗಳಿಗೆ ಗಡಿಯುದ್ದಕ್ಕೂ ಶಾಂತಿ ಮತ್ತು ಸ್ನೇಹ ಅಗತ್ಯ ಎಂದು ಭಾರತ ಒತ್ತಾಯಿಸುತ್ತಿದೆ. ಕಳೆದ ವಾರ ಪೂರ್ವ ಲಡಾಖ್‌ನ ಉಳಿದ ಪ್ರದೇಶಗಳಲ್ಲಿ ಸೈನ್ಯವನ್ನು ಶೀಘ್ರವಾಗಿ ಹಿಂತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಚೀನಾ ತನ್ನೊಂದಿಗೆ ಕೆಲಸ ಮಾಡಲಿದೆ ಎಂದು ಭಾರತ ಆಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.