ಇಸ್ಲಾಮಾಬಾದ್: ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಹೆಸರನ್ನು ಜಿನ್ಗೆ ಇಟ್ಟಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ.
ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಅಪಹಾಸ್ಯ ಮಾಡುವ ಕಾರಣದಿಂದ ಹಾಗೂ ಜಿನ್ನಾ ಅವರು ಇಸ್ಲಾಂ ನಿಷಿದ್ಧವಾದ ಸೇವಿಸುತ್ತಿದ್ದರು ಎಂದು ಆರೋಪಿಸಿ ಈ ಹೆಸರನ್ನು ಇಡಲಾಗಿದೆ ಎನ್ನಲಾಗಿದೆ.
-
Now who’s behind this? PTM or PDM?
— Aamer Khan (@AamerMKhan) November 30, 2020 " class="align-text-top noRightClick twitterSection" data="
Zalimo Jawab Do #Ginnah Ka Hisab Do pic.twitter.com/Mc5FsBoq88
">Now who’s behind this? PTM or PDM?
— Aamer Khan (@AamerMKhan) November 30, 2020
Zalimo Jawab Do #Ginnah Ka Hisab Do pic.twitter.com/Mc5FsBoq88Now who’s behind this? PTM or PDM?
— Aamer Khan (@AamerMKhan) November 30, 2020
Zalimo Jawab Do #Ginnah Ka Hisab Do pic.twitter.com/Mc5FsBoq88
ಸಾಮಾಜಿಕ ಜಾಲತಾಣದಲ್ಲಿ ಜಿನ್ ಬಾಟಲಿಯ ಎರಡು ಭಾವಚಿತ್ರಗಳು ಹರಿದಾಡುತ್ತಿದ್ದು, ಈ ಲಂಡನ್ ಜಿನ್ಅನ್ನು ಗಿಡಮೂಲಿಕೆಗಳು, ಮಸಾಲೆ ಹಾಗೂ ಒಣ ಹಣ್ಣುಗಳಿಂದ ತಯಾರಿಸಲಾಗಿದೆ ಎಂದು ಬಾಟಲ್ ಮೇಲೆ ಬರೆಯಲಾಗಿದೆ.
ಇದರ ಜೊತೆಗೆ ಮೊಹಮ್ಮದ್ ಅಲಿ ಜಿನ್ನಾ ಪಾಕಿಸ್ತಾನದ ಸಂಸ್ಥಾಪಕರಾಗಿದ್ದು, 1947ರಲ್ಲಿ ಪಾಕಿಸ್ತಾನವೆಂಬ ಜಾತ್ಯತೀತ ರಾಷ್ಟ್ರ ಉಗಮಿಸಲು ಕಾರಣರಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ದಶಕಗಳ ನಂತರ ವಾಷಿಂಗ್ಟನ್ ಡಿಸಿಯ ಬೆಂಬಲಿಗರ ಸಹಾಯದಿಂದ ಈ ದೇಶವನ್ನು ಸರ್ವಾಧಿಕಾರಿ ಆಳಿದ್ದು, ಈ ವೇಳೆ ದೇಶವನ್ನು ಶಿಖರದಿಂದ ತಳ್ಳಲಾಯಿತು. ಕೆಲವು ಧಾರ್ಮಿಕ ವ್ಯಕ್ತಿಗಳು ಈ ದೇಶವನ್ನು ಹಾಳು ಮಾಡಿದರು ಎಂದು ಬರೆಲಾಗಿದೆ.
ಕೊನೆಯಲ್ಲಿ ಇಸ್ಲಾಂ ನಿಷಿದ್ಧವಾದವುಗಳನ್ನು ಜಿನ್ನಾ ಇಷ್ಟಪಡುತ್ತಿದ್ದು, ಸಂತೋಷವಾಗಿದ್ದ ಮನುಷ್ಯನ ನೆನಪಿನಲ್ಲಿ ಈ ಜಿನ್ ತಯಾರಿಸಲಾಗಿದೆ ಎಂದು ಹೇಳಲಾಗಿದೆ. ಈ ಟ್ವಿಟರ್ ಪಾಕಿಸ್ತಾನದಾದ್ಯಂತ ಹರಿದಾಡುತ್ತಿದ್ದು, ವಿಭಿನ್ನ ಕಮೆಂಟ್ಗಳೂ ಕೂಡ ಬರುತ್ತಿವೆ.