ETV Bharat / bharat

ಕೌಟುಂಬಿಕ ಕಲಹ.. ಪತ್ನಿಯ ಮೇಲೆಯೇ ಆ್ಯಸಿಡ್ ಎರಚಿದ ಕಿರಾತಕ - Tamilnadu latest news

ಕೌಟುಂಬಿಕ ಕಲಹ ಹಿನ್ನೆಲೆ ಪತಿಯೇ ಪತ್ನಿಯ ಮೇಲೆ ಆ್ಯಸಿಡ್ ಎರಚಿರುವ ಘಟನೆ ತಮಿಳುನಾಡು ಜಿಲ್ಲೆಯ ಸೇಲಂ ಜಿಲ್ಲೆಯಲ್ಲಿ ನಡೆದಿದೆ.

ಪತ್ನಿಯ ಮೇಲೆಯೇ ಆ್ಯಸಿಡ್ ಎರಚಿದ ಕಿರಾತಕ
ಪತ್ನಿಯ ಮೇಲೆಯೇ ಆ್ಯಸಿಡ್ ಎರಚಿದ ಕಿರಾತಕ
author img

By

Published : Aug 31, 2021, 7:35 PM IST

ಸೇಲಂ (ತಮಿಳುನಾಡು): ಕೌಟುಂಬಿಕ ಕಲಹ ಹಿನ್ನೆಲೆ ಬಸ್​ ನಿಲ್ದಾಣದಲ್ಲಿ ನಿಂತಿದ್ದ ಪತ್ನಿಯ ಮೇಲೆ ಪತಿಯೇ ಆ್ಯಸಿಡ್ ಎರಚಿರುವ ಘಟನೆ ಸೇಲಂ ಜಿಲ್ಲೆಯಲ್ಲಿ ನಡೆದಿದೆ.

53 ವರ್ಷದ ಯೇಸುದಾಸ್​ ಮತ್ತು ರೇವತಿ ಕಳೆದ 20 ವರ್ಷಗಳ ಹಿಂದೆ ಮದುವೆಯಾಗಿದ್ದು, ಮೂವರು ಗಂಡು ಮಕ್ಕಳಿದ್ದಾರೆ. ಆದರೆ, ದಂಪತಿ ಮಧ್ಯೆ ಆಗಾಗ್ಗೆ ಕಲಹಗಳು ಉಂಟಾಗುತ್ತಿದ್ದು, ಮಹಿಳೆ ಪತಿಯನ್ನು ತೊರೆದು ತವರುಮನೆಯಲ್ಲಿ ವಾಸಿಸುತ್ತಿದ್ದಳು. ಅಲ್ಲದೆ, ತಾಯಿಯೊಂದಿಗೆ ಬಂದು ರೇವತಿ ಪತಿಯ ವಿರುದ್ಧ ಸೇಲಂ ಮಹಿಳಾ ಠಾಣೆಗೆ ದೂರು ನೀಡಿದ್ದಳು.

ಕಂಪ್ಲೆಂಟ್ ನೀಡಿದ ಬಳಿಕ ಬಸ್​ ನಿಲ್ದಾಣದಲ್ಲಿ ನಿಂತಿದ್ದ ವೇಳೆ, ರೇವತಿ ಮೇಲೆ ಯೇಸುದಾಸ್ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ಘಟನೆಯಲ್ಲಿ ರೇವತಿ ಮುಖ, ಕುತ್ತಿಗೆ ಸುಟ್ಟಿದೆ. ಗಾಬರಿಗೊಂಡ ತಾಯಿ ಆಕೆಯನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ, ಅವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಮಹಿಳೆಗೆ ಚುಡಾಯಿಸಿದ ಆರೋಪ.. ಸ್ಥಳೀಯರಿಂದ ಪರಿಸರವಾದಿ ಡಿ.ವಿ.ಗಿರೀಶ್ ಮೇಲೆ ಹಲ್ಲೆ

ಆಸ್ಪತ್ರೆಗೆ ಭೇಟಿ ನೀಡಿದ ಸೇಲಂ ಪೊಲೀಸ್ ಆಯುಕ್ತ ನಜ್ಮುಲ್ ಹೊಡಾ ಮಾಹಿತಿ ಸಂಗ್ರಹಿಸಿದ್ದು, ಆರೋಪಿ ಪತ್ತೆಗಾಗಿ ತಂಡ ರಚಿಸಿದ್ದರು. ಘಟನೆ ನಡೆದ ಕೆಲ ಹೊತ್ತಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.