ETV Bharat / bharat

ಲವ್ ಜಿಹಾದ್ ಪ್ರಕರಣದ ಮೊದಲ ತೀರ್ಪು ಪ್ರಕಟ: ಯೋಗಿ ಸರ್ಕಾರಕ್ಕೆ ಧನ್ಯವಾದ ಹೇಳಿದ ಸಂತ್ರಸ್ತೆಯ ಕುಟುಂಬ

ಕಾನ್ಪುರದಲ್ಲಿ ಲವ್ ಜಿಹಾದ್ ಕಾಯ್ದೆಯಡಿ ಮೊದಲ ತೀರ್ಪು ಪ್ರಕಟಿಸಲಾಗಿದ್ದು, ತ್ವರಿತ ತೀರ್ಪು ನೀಡಿದ್ದಕ್ಕಾಗಿ ಸಂತ್ರಸ್ತೆ ಕುಟುಂಬವು ನ್ಯಾಯಾಲಯ ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದೆ.

author img

By

Published : Dec 22, 2021, 7:10 PM IST

In first ever Kanpur love jihad hearing, accused sentenced to 10 years in jail alongside Rs 30,000 fine

ಕಾನ್ಪುರ (ಉತ್ತರ ಪ್ರದೇಶ): ಲವ್ ಜಿಹಾದ್ ಪ್ರಕರಣದಲ್ಲಿ ಮೊದಲ ಬಾರಿಗೆ ಕಾನ್ಪುರ ನ್ಯಾಯಾಲಯವು ಆರೋಪಿಯೊಬ್ಬನಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 30,000 ರೂ. ದಂಡ ವಿಧಿಸಿ ಆದೇಶ ನೀಡಿದೆ. ಉತ್ತರ ಪ್ರದೇಶದಲ್ಲೇ ಮೊದಲ ತೀರ್ಪು ಇದಾಗಿದೆ.

ಅನ್ಯ ಧರ್ಮೀಯ ವ್ಯಕ್ತಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆ ತಾಯಿ ಇಲ್ಲಿನ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆ ವ್ಯಕ್ತಿಯ ಮೇಲೆ ಪೋಸ್ಕೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆಯಡಿ ದೂರು ದಾಖಲು ಮಾಡಿಕೊಂಡ ಇಲ್ಲಿಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯ ಇಂದು ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 30,000 ರೂ. ದಂಡ ವಿಧಿಸಿ ಆದೇಶ ಕೊಟ್ಟಿದೆ.

ಘಟನೆಯ ಹಿನ್ನೆಲೆ: ಈ ಘಟನೆ ನಡೆದಿದ್ದು ಮೇ 15, 2017 ರಂದು. ಜುಹಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾನ್ಪುರದ ಕಚ್ಚಿ ಬಸ್ತಿ ಪ್ರದೇಶದ ನಿವಾಸಿಯಾದ ಜಾವೇದ್ ಎಂಬಾತ ಮುನ್ನಾ ಎಂಬ ಹೆಸರಿನಲ್ಲಿ ತನ್ನನ್ನು ತಾನು ಹಿಂದೂ ಎಂದು ಹೇಳಿಕೊಂಡು ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ.

ಅಲ್ಲದೇ ನಿನ್ನನ್ನು ಮದುವೆಯಾಗುವುದಾಗಿ ಹೇಳಿ ಬಾಲಕಿಯನ್ನು ಪ್ರೇಮದ ಬಲೆಗೆ ಹಾಕಿಕೊಂಡಿದ್ದನು. ಬಳಿಕ ಇಬ್ಬರು ಪರಾರಿಯಾಗಿದ್ದರು. ಕೆಲವು ದಿನಗಳ ಬಳಿಕ ವ್ಯಕ್ತಿಯ ಅಸಲಿ ಮುಖವಾಡ ಗೊತ್ತಾಗುತ್ತಿದ್ದಂತೆ ಬಾಲಕಿಯು ಪೋಷಕರೊಂದಿಗೆ ಆಗಮಿಸಿ ಜೂಹಿಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಸಂವಿಧಾನದ ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ದೂರು ದಾಖಲು ಮಾಡಿಕೊಂಡಿದ್ದರು.

ಜಾವೇದ್ ಮದುವೆಯ ನೆಪದಲ್ಲಿ ತನ್ನೊಂದಿಗೆ ಕರೆದೊಯ್ದು ಮೋಸ ಮಾಡಿದ್ದಾನೆ. ಬಲವಂತ ಪಡಿಸಿ ಅತ್ಯಾಚಾರ ಮಾಡಿದ್ದಾನೆ. ಅವರ ನಿವಾಸ ತಲುಪಿದ ನಂತರವೇ ಆತನ ಅಸಲಿ ಧರ್ಮ ಯಾವುದು ಎಂದು ಗೊತ್ತಾಗಿದೆ ಎಂದು ಸಂತ್ರಸ್ತೆ ನ್ಯಾಯಾಲಯದ ಮುಂದೆ ತನ್ನ ಅಳಲು ತೋಡಿಕೊಂಡಿದ್ದಳು. ಇನ್ನು ಸಂತ್ರಸ್ತೆಯ ಹೇಳಿಕೆಯನ್ನು ಆಲಿಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ಜಾವೇದ್‌ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.

ತ್ವರಿತ ತೀರ್ಪಿಗಾಗಿ ಸಂತ್ರಸ್ತೆಯ ಕುಟುಂಬವು ನ್ಯಾಯಾಲಯ ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದೆ.

ಇದನ್ನೂ ಓದಿ: ದೇಶದ ಜನರಿಗೆ ಬೂಸ್ಟರ್‌ ಡೋಸ್‌ ಯಾವಾಗ ಕೊಡ್ತೀರಾ? ಸರ್ಕಾರಕ್ಕೆ ರಾಹುಲ್‌ ಗಾಂಧಿ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.