ETV Bharat / bharat

ಕೊರೊನಾ ವೈರಸ್ ನಾಶ ಪಡಿಸುವ ಯಂತ್ರ ಅಭಿವೃದ್ಧಿಪಡಿಸಿದ IIT ಪಾಟ್ನಾ - ಕೊರೊನಾ ವೈರಸ್ ನಾಶ ಪಡಿಸುವ ಯಂತ್ರ ಅಭಿವೃದ್ಧಿಪಡಿಸಿದ IIT ಪಾಟ್ನಾ

ನಾವು ಈ ಯಂತ್ರವನ್ನು ₹1.5 ಲಕ್ಷದಿಂದ ₹3.5 ಲಕ್ಷದವರೆಗೆ ಮೂರು ಮಾದರಿಗಳಲ್ಲಿ ಅಭಿವೃದ್ಧಿಪಡಿಸಿದ್ದೇವೆ. ಯಂತ್ರದ ಜೀವಿತಾವಧಿಯು ಕನಿಷ್ಠ ಹತ್ತು ವರ್ಷಗಳು ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಸೇವೆಯ ಅಗತ್ಯವಿರುತ್ತದೆ ಎಂದು ತಿಳಿಸಿದ್ದಾರೆ..

IIT Patna develops machine to destroy coronavirus
ಕೊರೊನಾ ವೈರಸ್ ನಾಶ ಪಡಿಸುವ ಯಂತ್ರ ಅಭಿವೃದ್ಧಿಪಡಿಸಿದ IIT ಪಾಟ್ನಾ
author img

By

Published : Oct 31, 2021, 8:17 PM IST

ಪಾಟ್ನಾ : ಕೊರೊನಾ ವೈರಸ್​ ಕೊಲ್ಲುವ ಯಂತ್ರವೊಂದನ್ನು ಇಲ್ಲಿನ IIT ಅಭಿವೃದ್ಧಿಪಡಿಸಿದೆ. ಮೊದಲ ಬಾರಿಗೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪಾಟ್ನಾ ಈ ಯಂತ್ರವನ್ನು ಅಭಿವೃದ್ಧಿಪಡಿಸಿದೆ. ಇದು ಕೊರೊನಾ ವೈರಸ್ ಅನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ನಂಬಲಾಗಿದೆ.

ಅನೇಕ ಜೀವಗಳನ್ನು ಬಲಿ ತೆಗೆದುಕೊಂಡ ಮಾರಣಾಂತಿಕ ವೈರಸ್ ವಿರುದ್ಧ ಹೋರಾಡುವ ಉದ್ದೇಶದಿಂದ ಐಐಟಿ ಪಾಟ್ನಾದ ಇನ್‌ಕ್ಯುಬೇಶನ್ ಸೆಂಟರ್‌ನಲ್ಲಿ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಯಂತ್ರವು ಜನರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಇದನ್ನು ಪಾಟ್ನಾದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ನಲ್ಲಿ ಪ್ರಯೋಗಕ್ಕೆ ಇಡಲಾಗಿದೆ.

ಈ ಯಂತ್ರವನ್ನು ಅಭಿವೃದ್ಧಿಪಡಿಸಿರುವ ತಂಡದ ಸದಸ್ಯರಲ್ಲಿ ಒಬ್ಬರು ಮತ್ತು ಐಐಟಿ ಪಾಟ್ನಾದ ಇನ್ಕ್ಯುಬೇಟರ್ ವರುಣ್ ಕುಮಾರ್ ಶಾಹಿ. ಈ ಬಗ್ಗೆ ಮಾತನಾಡಿದ ಅವರು, ಹೆಚ್ಚಿನ ಚಿಂತನೆ ಮತ್ತು ಸಂಶೋಧನೆಯ ನಂತರ ಇದನ್ನು ತಯಾರಿಸಿರುವುದರಿಂದ ಮಾನವ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ನಾವು ಈ ಯಂತ್ರವನ್ನು ₹1.5 ಲಕ್ಷದಿಂದ ₹3.5 ಲಕ್ಷದವರೆಗೆ ಮೂರು ಮಾದರಿಗಳಲ್ಲಿ ಅಭಿವೃದ್ಧಿಪಡಿಸಿದ್ದೇವೆ. ಯಂತ್ರದ ಜೀವಿತಾವಧಿಯು ಕನಿಷ್ಠ ಹತ್ತು ವರ್ಷಗಳು ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಸೇವೆಯ ಅಗತ್ಯವಿರುತ್ತದೆ ಎಂದು ತಿಳಿಸಿದ್ದಾರೆ.

ಓದಿ: Xena 5.0: ವಿಪತ್ತು, ರಕ್ಷಣೆ ಜತೆ ಕೃಷಿ ವಲಯಕ್ಕೆ ವರದಾನ ಈ ರೋಬೋಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.