ETV Bharat / bharat

ಐಐಟಿ ಮದ್ರಾಸ್​ನಿಂದ 'ಇಂಡಿಯನ್ ನೆಟ್​ವರ್ಕ್ ಫಾರ್ ಮೆಮೊರಿ ಸ್ಟಡೀಸ್' ಪ್ರಾರಂಭ

ಇಂಟರ್​​​ನ್ಯಾಷನಲ್​ ಮೆಮೊರಿ ಸ್ಟಡೀಸ್ ಅಸೋಸಿಯೇಷನ್ ​​(ಎಂಎಸ್ಎ) ಆಮ್​ಸ್ಟರ್​ಡ್ಯಾಮ್ ಆಶ್ರಯದಲ್ಲಿ 'ಇಂಡಿಯನ್ ನೆಟ್​ವರ್ಕ್ ಫಾರ್ ಮೆಮೊರಿ ಸ್ಟಡೀಸ್' (ಐಎನ್ಎಂಎಸ್) ರೂಪುಗೊಂಡಿದೆ. ಇನ್ನು ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ, ಇರಾಕ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಮಾರಿಷಸ್, ಸ್ವೀಡನ್, ಯು.ಕೆ, ಮತ್ತು ಅಮೆರಿಕದಿಂದ ಸುಮಾರು 600 ಮಂದಿ ಸಂಶೋಧಕರು ಭಾಗಿಯಾಗಿದ್ದರು.

IIT Madras
ಇಂಡಿಯನ್ ನೆಟ್​ವರ್ಕ್ ಫಾರ್ ಮೆಮೊರಿ ಸ್ಟಡೀಸ್
author img

By

Published : Jun 17, 2021, 7:40 PM IST

ಚೆನ್ನೈ: ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಭಾರತ ಮತ್ತು ಏಷ್ಯಾದ ಮೆಮೊರಿ ಅಧ್ಯಯನ ಕ್ಷೇತ್ರದಲ್ಲಿ ಮೊದಲ ರಾಷ್ಟ್ರೀಯ ಜಾಲವಾದ 'ಇಂಡಿಯನ್ ನೆಟ್​ವರ್ಕ್ ಫಾರ್ ಮೆಮೊರಿ ಸ್ಟಡೀಸ್' (ಐಎನ್ಎಂಎಸ್) ಅನ್ನು ಪ್ರಾರಂಭಿಸಿದೆ. ಇಂಟರ್​​​​ನ್ಯಾಷನಲ್​ ಮೆಮೊರಿ ಸ್ಟಡೀಸ್ ಅಸೋಸಿಯೇಷನ್ ​​(ಎಂಎಸ್ಎ) ಆಮ್​ಸ್ಟರ್​ಡ್ಯಾಮ್ ಆಶ್ರಯದಲ್ಲಿ ಇದು ರೂಪುಗೊಂಡಿದೆ.

IIT Madras
ಇಂಡಿಯನ್ ನೆಟ್​ವರ್ಕ್ ಫಾರ್ ಮೆಮೊರಿ ಸ್ಟಡೀಸ್

ಐಎನ್‌ಎಂಎಸ್ ಸಾಂಸ್ಕೃತಿಕ ಅಧ್ಯಯನ ಕೇಂದ್ರಗಳು, ನರವಿಜ್ಞಾನ ಪ್ರಯೋಗಾಲಯಗಳು, ಎಐ ಮತ್ತು ಸಂಬಂಧಿತ ಕ್ಷೇತ್ರಗಳ ಉದ್ಯಮ ಸಂಶೋಧನೆ ಸೇರಿದಂತೆ ವಿವಿಧ ಸಂಸ್ಥೆಗಳಿಂದ ‘ಮೆಮೊರಿ’ ಯೊಂದಿಗೆ ಸಂಕೀರ್ಣವಾಗಿ ತೊಡಗಿಸಿಕೊಳ್ಳುವಿಕೆಗಳನ್ನು ಸಂಯೋಜಿಸುತ್ತದೆ. ಇನ್ನು ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ, ಇರಾಕ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಮಾರಿಷಸ್, ಸ್ವೀಡನ್, ಯು.ಕೆ, ಮತ್ತು ಅಮೆರಿಕದಿಂದ ಸುಮಾರು 600 ಮಂದಿ ಸಂಶೋಧಕರು ಭಾಗಿಯಾಗಿದ್ದರು.

ಇಂಡಿಯನ್ ನೆಟ್ವರ್ಕ್ ಫಾರ್ ಮೆಮೊರಿ ಸ್ಟಡೀಸ್ ಅನ್ನು ಡಾ. ಅವಿಶೇಕ್ ಪರುಯಿ ಮತ್ತು ಐಐಟಿ ಮದ್ರಾಸ್​ನ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರು (ಇಂಗ್ಲಿಷ್) ಡಾ.ಮೆರಿನ್ ಸಿಮಿ ರಾಜ್ ಅವರು ಸ್ಥಾಪಿಸಿದ್ದಾರೆ. ಡಾ. ಪರುಯಿ ಅವರು ಅಂತಾರಾಷ್ಟ್ರೀಯ ಮೆಮೊರಿ ಅಧ್ಯಯನ ಸಂಘದ ಸಲಹಾ ಮಂಡಳಿಯ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಇಂಡಿಯನ್ ನೆಟ್ವರ್ಕ್ ಫಾರ್ ಮೆಮೊರಿ ಸ್ಟಡೀಸ್, ಐಐಟಿ ಮದ್ರಾಸ್​ನ ಸೆಂಟರ್ ಫಾರ್ ಮೆಮರಿ ಸ್ಟಡೀಸ್​ನಿಂದ ಹೊರಹೊಮ್ಮಿದೆ. ಇದಕ್ಕೆ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಧನಸಹಾಯ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.