ETV Bharat / bharat

IIT campus outside India: ಭಾರತದ ಹೊರಗಿನ ಮೊದಲ ಐಐಟಿ ತಾಂಜಾನಿಯಾದಲ್ಲಿ ಆರಂಭ

ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಭಾರತದ ಐಐಟಿಗಳು ಇನ್ನು ಮುಂದೆ ವಿದೇಶದಲ್ಲೂ ತಲೆ ಎತ್ತಲಿವೆ. ತಾಂಜಾನಿಯಾದ ಜಾಂಜಿಬಾರ್​ನಲ್ಲಿ ವಿದೇಶದಲ್ಲಿನ ಪ್ರಥಮ ಐಐಟಿ ಆರಂಭವಾಗಲಿದೆ.

First IIT outside India will be in Tanzania: MEA

author img

By

Published : Jul 6, 2023, 7:00 PM IST

ನವದೆಹಲಿ : ವಿಶ್ವದರ್ಜೆಯ ಶಿಕ್ಷಣಕ್ಕೆ ಹೆಸರಾಗಿರುವ ಭಾರತದ ಪ್ರಖ್ಯಾತ ಐಐಟಿಗಳು ಇನ್ನು ಮುಂದೆ ವಿದೇಶದಲ್ಲೂ ಆರಂಭವಾಗಲಿವೆ. ಭಾರತದ ಹೊರಗಿನ ಮೊದಲ ಐಐಟಿ ಕ್ಯಾಂಪಸ್ ತಾಂಜಾನಿಯಾದ ಜಾಂಜಿಬಾರ್‌ನಲ್ಲಿ ಸ್ಥಾಪನೆಯಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಗುರುವಾರ ತಿಳಿಸಿದೆ. ಪೂರ್ವ ಆಫ್ರಿಕಾದ ಕರಾವಳಿಯಲ್ಲಿರುವ ತಾಂಜಾನಿಯಾದ ದ್ವೀಪಸಮೂಹವಾಗಿರುವ ಜಾಂಜಿಬಾರ್‌ನಲ್ಲಿ ಐಐಟಿ ಮದ್ರಾಸ್‌ನ ಕ್ಯಾಂಪಸ್ ಸ್ಥಾಪನೆಯ ತಿಳಿವಳಿಕೆ ಪತ್ರ (ಎಂಒಯು)ಕ್ಕೆ ಸಹಿ ಮಾಡಲಾಗಿದೆ.

ಬುಧವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಜಾಂಜಿಬಾರ್ ಅಧ್ಯಕ್ಷ ಹುಸೇನ್ ಅಲಿ ಮ್ವಿನಿ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸದ್ಯ ಜೈಶಂಕರ್ ಅವರು ತಾಂಜಾನಿಯಾ ಪ್ರವಾಸದಲ್ಲಿದ್ದಾರೆ. "ಭಾರತದ ಹೊರಗಿನ ಮೊದಲ IIT ಕ್ಯಾಂಪಸ್ ಜಾಂಜಿಬಾರ್‌ನಲ್ಲಿ ಸ್ಥಾಪನೆಯಾಗಲಿದೆ" ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಭಾರತದ ಶಿಕ್ಷಣ ಸಚಿವಾಲಯ, ಐಐಟಿ ಮದ್ರಾಸ್ ಮತ್ತು ಜಾಂಜಿಬಾರ್‌ನ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ಸಚಿವಾಲಯದ ನಡುವೆ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

"ಈ ಕ್ಯಾಂಪಸ್ ಭಾರತ ಮತ್ತು ತಾಂಜಾನಿಯಾ ನಡುವಿನ ದೀರ್ಘಕಾಲದ ಸ್ನೇಹವನ್ನು ಪ್ರತಿಬಿಂಬಿಸುತ್ತದೆ. ಆಫ್ರಿಕಾ ಮತ್ತು ವಿಶ್ವದ ದಕ್ಷಿಣ ಭಾಗದಲ್ಲಿನ ಜನರೊಂದಿಗೆ ಬಾಂಧವ್ಯ ವೃದ್ಧಿಸುವ ಭಾರತದ ಪ್ರಯತ್ನಗಳನ್ನು ಇದು ಬಿಂಬಿಸುತ್ತದೆ" ಎಂದು ಸಚಿವಾಲಯ ಹೇಳಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಅಡಿಯಲ್ಲಿ ಶ್ರೇಷ್ಠ ದರ್ಜೆಯ ಶಿಕ್ಷಣ ನೀಡುವ ಭಾರತೀಯ ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳನ್ನು ಇತರ ದೇಶಗಳಲ್ಲಿ ಸ್ಥಾಪಿಸಲು ಪ್ರೋತ್ಸಾಹಿಸಲಾಗುತ್ತಿದೆ. "ತಾಂಜಾನಿಯಾ ಮತ್ತು ಭಾರತದ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಗುರುತಿಸಿ, ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ಶೈಕ್ಷಣಿಕ ಪಾಲುದಾರಿಕೆಯ ಸಂಬಂಧವನ್ನು ಔಪಚಾರಿಕಗೊಳಿಸಲಾಗಿದೆ. 2023 ರ ಅಕ್ಟೋಬರ್‌ನಲ್ಲಿ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಯೋಜನೆಯೊಂದಿಗೆ ಜಾಂಜಿಬಾರ್ ತಾಂಜಾನಿಯಾದಲ್ಲಿ IIT ಮದ್ರಾಸ್‌ನ ಉದ್ದೇಶಿತ ಕ್ಯಾಂಪಸ್‌ ಸ್ಥಾಪನೆಯನ್ನು ಈ ಒಪ್ಪಂದ ಒಳಗೊಂಡಿದೆ" ಎಂದು ಎಂಇಎ ಹೇಳಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿಗಳು) ಮಹಾವಿದ್ಯಾಲಯಗಳ ಭಾರತದಲ್ಲಿ ಜಾಗತಿಕವಾಗಿ ಮೆಚ್ಚುಗೆ ಪಡೆದ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆಗಳಾಗಿವೆ. ಐಐಟಿಗಳು ಗುಣಮಟ್ಟದ ಶಿಕ್ಷಣ ಮತ್ತು ಅಂತರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ ಸಂಶೋಧನಾ ಸೌಲಭ್ಯಗಳನ್ನು ಹೊಂದಿವೆ. JEE ಮೇನ್ಸ್​ ಮತ್ತು JEE ಅಡ್ವಾನ್ಸ್ಡ್ ಪರೀಕ್ಷೆಯನ್ನು ಒಳಗೊಂಡಿರುವ JEE ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕೆಲ ಉನ್ನತ ಕಾಲೇಜುಗಳು ಮತ್ತು IIT ಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.

ಭಾರತದಲ್ಲಿ 16 ಕಾರ್ಯನಿರತ ಐಐಟಿಗಳಿವೆ ಮತ್ತು ಇವು ಐಐಟಿ ಕೌನ್ಸಿಲ್‌ನಿಂದ ನಡೆಸಲ್ಪಡುತ್ತವೆ. ನವದೆಹಲಿ, ಗಾಂಧಿನಗರ, ಚೆನ್ನೈ, ಮುಂಬೈ, ಗುವಾಹಟಿ, ಖರಗ್‌ಪುರ, ಭುವನೇಶ್ವರ್, ಜೋಧ್‌ಪುರ, ರೂರ್ಕಿ, ಪಾಟ್ನಾ, ಕಾನ್ಪುರ್, ವಾರಣಾಸಿ ಮುಂತಾದ ಪ್ರಮುಖ ನಗರಗಳು ಸೇರಿದಂತೆ ಭಾರತದ ವಿವಿಧ ಪ್ರದೇಶಗಳಲ್ಲಿ ಈ ಕಾಲೇಜುಗಳಿವೆ.

ಇದನ್ನೂ ಓದಿ : ಅಪ್ರಾಪ್ತೆಯೊಂದಿಗೆ ಲಿವ್ ಇನ್ ರಿಲೇಶನ್​ಶಿಪ್: ಆರೋಪಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.